May 15, 2024

Bhavana Tv

Its Your Channel

ಶಿಲೆಕಲ್ಲು ಸಾಗಾಟದ ಟಿಪ್ಪರ ಲಾರಿ, ಹೆಚ್ಚುವರಿ ಕಲ್ಲುಗಳನ್ನು ಲೋಡ್ ಮಾಡಿಕೊಂಡು ಬರುತ್ತಿದ್ದ ಮೂರು ಲಾರಿಗಳನ್ನು ಅಡ್ಡಗಟ್ಟಿ ವಿರೋಧ ವ್ಯಕ್ತಪಡಿಸಿದ ಸಾರ್ವಜನಿಕರು

ಭಟ್ಕಳ: ಭಟ್ಕಳದ ಅಳ್ವೇಕೋಡಿ, ತೆಂಗಿನಗುAಡಿ ಬಂದರ್ ನಿರ್ಮಾಣದ ಹಿನ್ನೆಲೆ ಕುಂದಾಪುರ ಹಾಲಾಡಿಯಿಂದ ಶಿಲೆಕಲ್ಲು ಸಾಗಾಟದ ಟಿಪ್ಪರ ಲಾರಿಯು ಹೆಚ್ಚುವರಿ (ಒವರ ಲೋಡ್) ಕಲ್ಲುಗಳನ್ನು ಲೋಡ್ ಮಾಡಿಕೊಂಡು ಬರುತ್ತಿದ್ದ ಮೂರು ಲಾರಿಗಳನ್ನು ಅಡ್ಡಗಟ್ಟಿ ವಿರೋಧ ವ್ಯಕ್ತಪಡಿಸಿದ ಘಟನೆ ಶನಿವಾರದಂದು ಮಣ್ಕುಳಿ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ನಡೆದಿದೆ.

ಕಳೆದ ಸಾಕಷ್ಟು ದಿನದಿಂದ ಟಿಪ್ಪರ ಲಾರಿ ಮೂಲಕ ಶಿಲೆಕಲ್ಲುಗಳ ಸಾಗಾಟವು ಜೋರಾಗಿ ನಡೆಯುತ್ತಿದ್ದ ಹಿನ್ನೆಲೆ ಭಟ್ಕಳದ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿ ಬಹುತೇಕ ಬಾರಿ ಅಡ್ಡಗಟ್ಟಿದ್ದರು ಸಹ ಲಾರಿಯಲ್ಲಿ ಅವಶ್ಯಕತೆಗೂ ಮಿರಿ ಶಿಲೆಕಲ್ಲುಗಳನ್ನು ಗುತ್ತಿಗೆದಾರರು ಯಾವುದೇ ಭಯವಿಲ್ಲದೇ, ಆರ್.ಟಿ.ಓ. ಅಧಿಕಾರಿಗಳಿಗೆ ಕ್ಯಾರೆ ಎನ್ನದೇ ತಮ್ಮ ಕಾರ್ಯ ಮುಂದುವರೆಸಿದ್ದಾರೆ.

ಶನಿವಾರದAದು ಮತ್ತೆ ಮೂರು ಟಿಪ್ಪರ ಲಾರಿಗಳು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವೇಳೆ ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಹಾಗೂ ಅವರ ಸ್ನೇಹಿತರು ಲಾರಿಯನ್ನು ಅಡ್ಡ ಗಟ್ಟಿ ಪೋಲಿಸರಿಗೆ ಹಾಗೂ ಸಹಾಯಕ ಆಯುಕ್ತರಿಗೆ ದೂರವಾಣಿ ಕರೆ ಮೂಲಕ ದೂರು ನೀಡಿದ್ದು, ಸ್ಥಳಕ್ಕೆ ಪರಿಶೀಲನೆ ತಂಡವನ್ನು ಕಳುಹಿಸಿಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದೇನೋ ಸರಿ ಆದರೆ ಸಮಯ ಮೀರಿದರು ಸಹ ಯಾವೊಬ್ಬ ಅಧಿಕಾರಿಗಳ ತಂಡದವರು ಬಾರದೇ ಕೊನೆಯಲ್ಲಿ ೧೧೨ ತುರ್ತು ಸೇವೆಯ ವಾಹನಕ್ಕೆ ಕರೆ ಮಾಡಿ ದೂರು ನೀಡಿದ ಬಳಿಕ ಅರ್ಧಗಂಟೆಗೂ ಅಧಿಕ ಕಾಲ ಕಾದು ನಿಂತು ಸ್ಥಳಕ್ಕೆ ಬಂದ ನಗರ ಠಾಣೆ ಪೋಲೀಸರು ಸರಕಾರದಿಂದ ನಡೆಯುತ್ತಿರುವ ಸಮುದ್ರ ತಡೆಗೋಡೆ ಕಾಮಗಾರಿಗೆ ತೆರಳುವ ಶಿಲೆ ಕಲ್ಲು ಲಾರಿಯ ಲೋಡ ಬಗ್ಗೆ ದೂರು ಪಡೆದುಕೊಳ್ಳಲು ಸಾಧ್ಯವಿಲ್ಲವಾಗಿದೆ. ಈ ಕುರಿತು ಆರ್. ಟಿ. ಓ. ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಲಾರಿಗಳನ್ನು ವಶಕ್ಕೆ ಪಡೆದು ಸೀಜ್ ಮಾಡಲು ಪತ್ರ ಬರೆಯಲಿದ್ದೇವೆ ಎಂದ ಪೋಲೀಸರು ನಂತರ ಸಾರ್ವಜನಿಕರು ಅಡ್ಡಗಟ್ಟಿದ ಮೂವರು ಟಿಪ್ಪರ ಲಾರಿಯನ್ನು ಸದ್ಯ ಪೋಲೀಸ್ ಮೈದಾನದಲ್ಲಿ ನಿಲ್ಲಿಸಿಟ್ಟಿದ್ದು ವಶಕ್ಕೆ ಪಡೆದುಕೊಂಡಿದ್ದಾರೆ.

ಇದಕ್ಕೂ ಪೂರ್ವದಲ್ಲಿ ಶಿಲೆ ಕಲ್ಲು ಲಾರಿ ಅಡ್ಡಗಟ್ಟಿದ ಹಿನ್ನೆಲೆ ಶಿಲೆಕಲ್ಲು ಸಾಗಾಟದ ಗುತ್ತಿಗೆ ಪಡೆದ ವ್ಯಕ್ತಿಗೆ ಲಾರಿ ಚಾಲಕರು ಕರೆ ಮಾಡಿದ್ದು ಲಾರಿ ಅಡ್ಡಗಟ್ಟಿದ ಶ್ರೀಕಾಂತ ನಾಯ್ಕ ಅವರಿಗೆ ಪೋನ್ ನೀಡುವಂತೆ ಹೇಳಿದ ಹಿನ್ನೆಲೆ ಅವರೊಂದಿಗೆ ಪೋನ್ ನಲ್ಲಿ ಮಾತನಾಡುತ್ತಿದ್ದು ಗುತ್ತಿಗೆದಾರ ಈ ಹಿಂದೆ ಭಟ್ಕಳದಲ್ಲಿ ಕೆಲ ಯುವಕರು ಲಾರಿ ಅಡ್ಡಗಟ್ಟಿದ್ದು ಈ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ ಹಾಗೂ ಅವರು ಲಾರಿ ಓಡಿಸಲು ಒಪ್ಪಿಗೆ ನೀಡಿದ್ದಾರೆಂದು ಹೇಳಿದ್ದು ಇದಕ್ಕೆ ಶ್ರೀಕಾಂತ ನಾಯ್ಕ ಅಡ್ಡಗಟ್ಟಿದ ವ್ಯಕ್ತಿಗಳು ಯಾರು ಎಂಬುದು ನಮಗೆ ತಿಳಿದಿಲ್ಲ, ಇಲಾಖೆ ಪರಿಶೀಲನೆಯ ಬಳಿಕ ಸಿಗಬೇಕಾದ ಒಪ್ಪಿಗೆ ಯಾರೋ ನಾಲ್ವರು ನೀಡಿದ್ದು ಹೇಗೆ ಎಂಬ ವಿಷಯವನ್ನು ಗುತ್ತಿಗೆದಾರರಲ್ಲಿ ಪ್ರಸ್ತಾಪಿಸಿದ ಅವರು ನಮಗೆ ಒಟ್ಟಾರೆ ಓವರ ಲೋಡ್ ಶಿಲೆಕಲ್ಲು ಸಾಗಾಟ ನಿಲ್ಲಬೇಕು ಹೊರತು ಬೇರೆ ಯಾವ ವಿಚಾರವೂ ಬೇಡ ಎಂದಿರುವುದು ತಿಳಿದು ಬಂದಿದೆ.

ಕಾರಣ ಈ ರೀತಿ ಹೆದ್ದಾರಿಯಲ್ಲಿ ಅಪಾಯಕಾರಿ ರೀತಿಯಲ್ಲಿ ಟಿಪ್ಪರ ಲಾರಿ ಸಾಗಾಟ ಎಷ್ಟರ ಮಟ್ಟಿಗೆ ಇಲಾಖೆ ಅವಕಾಶ ನೀಡಿದೆ ಎಂಬುದು ಪ್ರಶ್ನಾತೀತವಾಗಿದ್ದು, ಕೆಲವೊಂದು ಜನರು ಅವರ ವೈಯಕ್ತಿಕ ಹಣದಾಸೆಗೆ ಶಿಲೆಕಲ್ಲು ಗುತ್ತಿಗೆದಾರರೊಂದಿಗೆ ಲಾಬಿಗೆ ಇಳಿದಿದ್ದು ಜನರ ಜೀವಕ್ಕೆ ಕುತ್ತು ತರುವಂತಹ ಕೆಲಸಕ್ಕೆ ಕೈಹಾಕಿರುವುದಂತು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಮಲಗಿದ್ದಾರಾ ಆರ್. ಟಿ. ಓ ಇಲಾಖೆ ಅಧಿಕಾರಿಗಳು ಮೊದಲೇ ಈ ಹೆದ್ದಾರಿ ಕಾಮಗಾರಿ ಆರಂಭದಿoದ ಒಂದಲ್ಲೊoದು ಅಪಘಾತ ನಡೆಯುತ್ತಿದ್ದು, ಈಗ ಗುಜರಿ, ಹಾಗೂ ಹಳೆಯ ಲಾರಿಯಲ್ಲಿ ನಿಯಮ ಮೀರಿ ಶಿಲೆಕಲ್ಲು ತುಂಬಿ ಸಾಗಾಟ ನಡೆಯುತ್ತಿದ್ದರೆ ಇದನ್ನು ತಡೆಹಿಡಿಯಬೇಕಾದ ಇಲಾಖೆಯ ಅಧಿಕಾರಿಗಳು ಮಲಗಿದ್ದಾರಾ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಕಾರಣ ಚತುಷ್ಪಥ ರಸ್ತೆ ಹೆದ್ದಾರಿ ಎಂದ ಮೇಲೆ ವೇಗಕ್ಕೆ ಮಿತಿಯಿಲ್ಲ ಎಂಬAತೆ ವಾಹನ ಓಡಾಡಲಿದ್ದು, ಇದೇ ವೇಳೆ ಲಾರಿಯಲ್ಲಿ ತುಂಬಿದ ಶಿಲೆಕಲ್ಲು ಅಚಾನಕ ಆಗಿ ತುಕ್ಕು ಹಿಡಿದಿರುವ ಲಾರಿಯ ಹಿಂಬದಿಯ ಕೊಂಡಿ ಕಳಚಿದರೆ ಹಿಂಬದಿಯಲ್ಲಿ ಬರುವ ವಾಹನ ಸವಾರರ ಅಥವಾ ವೇಗದಲ್ಲಿ ಬರುವ ವಾಹನ ಸವಾರರ ಕಥೆ ಏನು ? ಮೊದಲೇ ಸಾಗಾಟಕ್ಕೆ ಬಳಸುವ ಲಾರಿಗಳ ಸ್ಥಿತಿ ಸಹ ಉತ್ತಮವಾಗಿಲ್ಲ. ಇನ್ನು ಕಲ್ಲು ತುಂಬಿಸಿ ಅದರ ಮೇಲೆ ಟಾರ್ಪಲ್ ಹೊದಿಸಿ ತೆರಳುವ ಲಾರಿಗಳಿಗೆ ಕಡಿವಾಣ ಎಂದು ಎಂಬುದು ಇಲಾಖೆ ಅಧಿಕಾರಿಗಳೇ ಉತ್ತರಿಸಬೇಕು.

ಈ ಸಂದರ್ಬದಲ್ಲಿ – ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಮಾತನಾಡಿ ಸರಕಾರದಿಂದ ಬಂದರು ನಿರ್ಮಾಣ ಕಾರ್ಯವಾಗುತ್ತಿರುವುದು ಉತ್ತಮವಾಗಿದೆ. ಆದರೆ ಇದೇ ಕಾರಣದಿಂದ ಟಿಪ್ಪರ ಲಾರಿಯಲ್ಲಿ ಓವರ್ ಲೋಡ್ ತುಂಬಿದ ಶಿಲೆಕಲ್ಲುಗಳ ಸಾಗಾಟದಿಂದ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಅಪಾಯ ಕಟ್ಟಿಟ್ಟ ಬುತ್ತಿಯಂತಾಗಿದೆ. ಈಗಾಗಲೇ ಸಾಕಷ್ಟು ಬಾರಿ ಲಾರಿಗಳನ್ನು ಅಡ್ಡಗಟ್ಟಿ ಎಚ್ಚರಿಕೆ ಸಹ ನೀಡಿದ್ದೇವೆ ಆದರು ಸಹ ಗುತ್ತಿಗೆದಾರರು ಕ್ಯಾರೆ ಎನ್ನದೇ ತಮ್ಮಿಷ್ಟಂತೆ ಟ್ರಪ್ ಮಾಡಿಸುತ್ತಿದ್ದಾರೆ. ಈ ಬಗ್ಗೆ ಸಹಾಯಕ ಆಯುಕ್ತರು, ತಹಸೀಲ್ದಾರ, ಪೋಲಿಸ್ ಇಲಾಖೆ ಹಾಗೂ ಮುಖ್ಯವಾಗಿ ಆರ್. ಟಿ. ಓ. ಅಧಿಕಾರಿಗಳು ಒವರ ಲೋಡ್ ಸಾಗಾಟಕ್ಕೆ ಕಡಿವಾಣ ಹಾಕಲೇಬೇಕಿದೆ. ಅನಾಹುತ ಆಗುವುದಕ್ಕೂ ಪೂರ್ವದಲ್ಲಿ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಅರುಣ ನಾಯ್ಕ, ಪಾಂಡುರAಗ ನಾಯ್ಕ ಆಸರಕೇರಿ, ವಿವೇಕ ನಾಯ್ಕ, ಶಿವ ನಾಯ್ಕ, ಶ್ರೀನಿವಾಸ ನಾಯ್ಕ ಮುಂತಾದವರು ಇದ್ದರು.

error: