ಗದಗ ಜಿಲ್ಲೆ ಸುಕ್ಷೇತ್ರ ಗಜೇಂದ್ರಗಡ ತಾಲೂಕು ನಾಗರಸಕೊಪ್ಪ ಗ್ರಾಮದಲ್ಲಿ ಪರಮಾಪೂಜ್ಯ ಮಹಾನ ತಪಸ್ವಿಗಳಾದ ಭಾವರೋಗ ವೈದ್ಯರಾದ ಲಿಂಗಐಕ್ಯ ಶ್ರೀ ಚನ್ನಬಸವ ಮಹಾ ಶಿವಯೋಗಿಗಳವರ ದಿವ್ಯಪ್ರಕಾಶದಲ್ಲಿ ಶ್ರೀ ಸದಾಶಿವ ಮಹಾಸ್ವಾಮಿ ಮಠ ಹುಕ್ಕೇರಿ ಹಾವೇರಿ ಇವರ ದಿವ್ಯ ಸಾನಿಧ್ಯದಲ್ಲಿ ಆಧ್ಯಾತ್ಮ ಪ್ರವಚನ ಕಾರ್ಯಕ್ರಮವನ್ನು ಮೂರು ದಿನಗಳ ಕಾಲವಾಗಿ ನಿರಂತರವಾಗಿ ಪ್ರವಚನ ನೆರವೇರಿಸಿದರು
ಪ್ರವಚನ ಕಾರ್ಯಕ್ರಮವನ್ನು ವೇದಮೂರ್ತಿ ಅನ್ನದಾನ ಶಾಸ್ತ್ರಿಗಳು ಗುಡೂರು ಇಲಕಲ್ಲರವರು ಹುಲಿಗೆಮ್ಮದೇವಿ ದೇವಸ್ಥಾನದ ಆವರಣದಲ್ಲಿ ನೆರವೇರಿಸಲಾಯಿತು ಅದೇ ರೀತಿ ಇವತ್ತಿನ ದಿವಸ ಪರಮಪೂಜ್ಯ ಅಭಿನವ ಚನ್ನಬಸವ ಮಹಾಸ್ವಾಮಿಗಳು ಶಾಕ ಶಿವಯೋಗಿ ಮಂದಿರ ನಿಡಗುಂದಿ ಕೊಪ್ಪರವರ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ನಾಗರಸ ಕೊಪ್ಪದ ಸಕಲ ಸದ್ಭಕ್ತರಿಂದ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು
ಈ ಸಂದರ್ಭದಲ್ಲಿ ಗದಗಿನ ಚಂದ್ರಶೇಖರ ಮಹಾಸ್ವಾಮಿಗಳು, ಗದಗ ಹಾಗೂ ಅನ್ನದಾನಶಾಸ್ತ್ರಿ ಮಹಾಸ್ವಾಮಿಗಳು ಗುಡೂರು ಇಲಕಲ್ಲ ಹಾಗೂ ನಾಗರಸಕೊಪ್ಪ ದ ಸಕಲ ಸದ್ಭಕ್ತರು ಹಾಗೂ ಈರಣ್ಣ ಸೊಬರದ, ಬಸಪ್ಪ ಜಿ ಕೊಟ್ಟೂರ, ಬರದವೀರಪ್ಪ ಸೊಬರದ, ಕಳಕಪ್ಪ ಯೆನ ಕೊಟ್ಟೂರ, ಹೋಳಿಯಪ್ಪ ದಮ್ಮೂರ, ಮುತ್ತಪ್ಪ ಗುಜ್ಜಲ, ಇನ್ನು ಹಲವಾರು ಗ್ರಾಮಗಳಿಂದ ಬಂದ ಸಕಲ ಸದಭಕ್ತರು.ಉಪಸ್ಥಿತರಿದ್ದರುಗ್ರಾಮ ಪಂಚಾಯತಿ,ಸದಸ್ಯರು, ಗ್ರಾಮದ ಗುರು ಹಿರಿಯರು, ಯುವಕರು ಸುಮಂಗಳೆಯೆರು,ಉಪಸ್ಥಿತರಿದ್ದರು
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ