December 22, 2024

Bhavana Tv

Its Your Channel

ಎಂಇಎಸ್ ಮತ್ತು ಶಿವಸೇನೆ ಪುಂಡಾಟಿಕೆಯನ್ನು ವಿರೋಧಿಸಿ ಜಯ ಕರ್ನಾಟಕ ಸಂಘಟನೆ ರೋಣ ತಾಲೂಕ ಘಟಕದ ವತಿಯಿಂದ ಪ್ರತಿಭಟನೆ

ರೋಣ: ಜಯ ಕರ್ನಾಟಕ ಸಂಘಟನೆ ರೋಣ ತಾಲೂಕ ಘಟಕದ ವತಿಯಿಂದ ಎಂಇಎಸ್ ಮತ್ತು ಶಿವಸೇನೆ ಪುಂಡಾಟಿಕೆಯನ್ನು ವಿರೋಧಿಸಿ ರೋಣ ತಹಸಿಲ್ದಾರ ಕಚೇರಿ ಎದುರಿಗೆ ಭೀಮಣ್ಣ ಇಂಗಳೇ ಇವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು

ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಹೊಳೆಆಲೂರು ಮೈನುದ್ದಿನ್ ನೆಚ್ಚಿನ ರವರ ನೇತೃತ್ವದಲ್ಲಿ.ಪ್ರತಿಭಟನೆ ನಡೆಸುವ ಮೂಲಕ ರೋಣ ತಸಿಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಿದರು
ಬೆಳಗಾವಿಯಲ್ಲಿ ಕನ್ನಡದ ಧ್ವಜವನ್ನು ಸುಟ್ಟು ಹಾಕುವುದು ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅವಮಾನ ಮಾಡಿದವರ ಎಂಇಎಸ್ ಹಾಗೂ ಶಿವಸೇನೆ ದೇಶದ್ರೋಹಿಗಳನ್ನು ಗಡಿಪಾರು ಮಾಡುವಂತೆ ಭೀಮಣ್ಣ ಇಂಗಳೆ ಆಕ್ರೋಶ ವ್ಯಕ್ತಪಡಿಸಿದರು
ಅದೇ ರೀತಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಹೊಳೆಆಲೂರು ಮೈನುದ್ದಿನ್ ಎಚ್ ನದಾಫ ಮಾತನಾಡಿ ದೇಶದ್ರೋಹಿಗಳನ್ನು ಬಂಧಿಸಿ ಅವರಿಗೆ ಗಲ್ಲು ಶಿಕ್ಷೆ ನೀಡಬೇಕು ಬೆಳಗಾವಿಯಲ್ಲಿ ಪದೇ-ಪದೇ ಪುಂಡಾಟಿಕೆ ನಡೆಸುವವರನ್ನು ಕೂಡಲೇ ಬಂಧಿಸಿ ಅವರಿಗೆ ಉಗ್ರವಾದ ಶಿಕ್ಷೆಯನ್ನು ನೀಡಬೇಕು ಎಂದು ಅವರು ಹೇಳಿದರು
ಈ ಸಂದರ್ಭದಲ್ಲಿ ಜಯಕರ್ನಾಟಕ ರಕ್ಷಣೆಯ ಅಧ್ಯಕ್ಷರಾದ ಭೀಮಣ್ಣ ಇಂಗಳೇ, ಹಾಗೂ ಜಗದೀಶ ಮಡಿವಾಳರ, ಬಾಲಚಂದ್ರ ಕುರಿ, ರಾಯಪ್ಪ ಹುಲ್ಲೂರು, ಮಲ್ಲಯ್ಯ ನೆಲ್ಲೂರು, ರಾಜುಗಾಳಿ. ವೀರಣ್ಣ ಹಾವಿನಾಳ. ಕಿರಣ್ ಕುರಿ, ರವಿ ಮಾದರ, ಮುತ್ತಪ್ಪ ಹಣಸಿ, ಬಸವರಾಜ ಸುಂಕದ್ ಇದ್ದರು.

ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರು ಮೈನುದ್ದಿನ ಎಚ್ ನದಾಫ್ ಹಾಗೂ ಮಹಿಳಾ ಘಟಕದ ಅಧ್ಯಕ್ಷರು ದೀಪ ಚಿತ್ರಗಾರ ಸಂಘದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ರೋಣ

error: