ಇಳಕಲ್ ತಾಲ್ಲೂಕಿನ ಕಂದಗಲ್ ಗ್ರಾಮದ ಚಂದ್ರಶೇಖರ ಕಂಠಿ ಎಂಬುವರ ಜಮೀನಿನ ಬಾವಿಯಲ್ಲಿ ಬಿದ್ದ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದ ದೇವಪ್ಪ ಬೋಪಣ್ಣ ರಾಥೋಡ್ (26) ಮೃತಪಟ್ಟಿದ್ದಾರೆ.
ಕಬ್ಬಿನ ಗ್ಯಾಂಗಿನ ನೊಂದಿಗೆ ಬಹು ದಿವಸದಿಂದ ಕುಟುಂಬ ಸಮೇತರಾಗಿ ಕಂದಗಲ್ ಗ್ರಾಮಕ್ಕೆ ಕಬ್ಬು ಕಡಿಯಲಿಕ್ಕೆ ಬಂದಿದರು.
ದೇವಪ್ಪ ರಾಥೋಡ್ ಬೆಳಗಿನ ಜಾವ ಟ್ಯಾಕ್ಟರ್ ತೆಗೆದುಕೊಂಡು ಹೊಲದಲ್ಲಿ ನಿಲ್ಲಿಸುವಾಗ ಆಯತಪ್ಪಿ ಟ್ರ‍್ಯಾಕ್ಟರ್ ಜಮೀನಿನಲ್ಲಿರುವ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ ಸುದ್ದಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ವಿವಿಧ ತಂತ್ರಗಳನ್ನು ಉಪಯೋಗಿಸಿ ಶವವನ್ನು ಮೇಲಕ್ಕೆತ್ತಲು ಸಾಧ್ಯವಾಗಲಿಲ್ಲ ಟ್ಯಾಕ್ಟರ್ ಕೆಳಗಡೆ ಆತನ ಶವ ಇರುವುದರಿಂದ ಸುಮಾರು ಹೊತ್ತು ಕಾರ್ಯಾಚರಣೆ ಮಾಡಿ ಮೃತವ್ಯಕ್ತಿಯ ಶವವನ್ನು ಹುಡುಕಾಡಿ ಕಡೆಗೂ ಶವವನ್ನು ಹುಡುಕುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾದರು ಗ್ರಾಮಸ್ಥರು ಸಹಕಾರ ಮಾಡಿದ್ದರಿಂದ ಮೃತ ವ್ಯಕ್ತಿಯ ಶವವನ್ನು ಹುಡುಕಲು ಅನುಕೂಲವಾಯಿತು .
ಕಾರ್ಯಾಚರಣೆಯಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನಪ್ಪ ಅವರ ನೇತೃತ್ವದಲ್ಲಿ ಇಳಕಲ್ ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ ಜಗದೀಶ ಗಿರಡ್ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಯಶಸ್ವಿಯಾಯಿತು ಕಾರ್ಯಾಚರಣೆಯಲ್ಲಿ ಭೀಮಪ್ಪ ವಣಿಕ್ಯಾಳ, ಮಾರುತಿ ರಾಥೋಡ್, ಅಶೋಕ್ ಕಾಮ, ವಿನೋದ ಬಜಂತಿ,್ರ ಯಮನಪ್ಪ ಪೂಜಾರ್, ಮಲ್ಲೇಶ್ ಡಂಬಳ, ತಮ್ಮಣ್ಣಗೌಡ ಇದ್ದರು.
ವರದಿ: ವಿನೋದ ಬಾರಿಗಿಡದ ಇಳಕಲ್.
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ