March 12, 2025

Bhavana Tv

Its Your Channel

ಭಟ್ಕಳ ತಾಲೂಕು ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್

ಭಟ್ಕಳ: ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟ್ ವತಿಯಿಂದ ನಡೆದ ತಾಲೂಕು ಮಟ್ಟದ ಓಪನ್ ಕರಾಟೆ ಚಾಂಪಿಯನ್ ಆಗಿ ಭಟ್ಕಳದ ನ್ಯೂ ಇಂಗ್ಲೀಷ ಸ್ಕೂಲ್ ಹೊರಹೊಮ್ಮಿದರೆ ರನ್ನರ್ ಅಫ್ ಆಗಿ ಮುರ್ಡೇಶ್ವರ ಕರಾಟೆ ಶಾಲೆ ಪ್ರಶಸ್ತಿ ಪಡೆದುಕೊಂಡಿದೆ.

ಶನಿವಾರ ಭಟ್ಕಳ ತಾಲೂಕಿನ ಸಾರದ ಹೊಳೆಯ ನಾಮಧಾರಿ ಸಭಾಭವನದಲ್ಲಿ ತಾಲೂಕು ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ಕಾರ್ಯಕ್ರಮ ನಡೆದಿತ್ತು. ಶಾಸಕ ಸುನೀಲ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಳೆಕೋಟೆ ಶ್ರೀ ಹನುಮಂತ ದೇವಸ್ಥಾನದ ಸಾರದಹೊಳೆ ಅಧ್ಯಕ್ಷ ಸುಬ್ರಾಯ ನಾಯ್ಕ ಮತ್ತು ಬೀನಾ ವೈದ್ಯ ಪಬ್ಲಿಕ್ ಸ್ಕೂಲ್ ಎಂ.ಡಿ ಪುಷ್ಪಲತಾ ಎಮ್. ಎಸ್, ಹನ್ಸಿ ರಾಜನ್, ಉಮೇಶ್ ಮೊಗೇರ, ಈಶ್ವರ ನಾಯ್ಕ, ಮನೋಜ ನಾಯ್ಕ ಮತ್ತು ಸುರೇಶ ಡಿ ಮೊಗೇರ ಇದ್ದರು.
ಕರಾಟೆಯ ಗ್ರಾö್ಯಂಡ್ ಚಾಂಪಿಯನ್ ಆಗಿ ಮಹ್ಮದ್ ಶಮಾಜ್ ಹೊರಹೊಮ್ಮಿದರೆ ರನ್ನರ್ ಅಫ್ ಆಗಿ ಮಂಜುನಾಥ ದೇವಾಡಿಗ ಪ್ರಶಸ್ತಿಯನ್ನು ಪಡೆದುಕೊಂಡರು. ತಾಲೂಕಿನಿಂದ ಒಟ್ಟು ೨೫೦ಕ್ಕೂ ಅಧಿಕ ಕರಾಟೆ ಪಟುಗಳು ಭಾಗವಹಿಸಿದ್ದರು. ನಾಗಶ್ರೀ ವಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

error: