December 20, 2024

Bhavana Tv

Its Your Channel

ಇಳಕಲ್ ನಲ್ಲಿ ತಾಲೂಕು ಪಂಚಾಯತ ಪ್ರಗತಿ ಪರಿಶೀಲನಾ ಸಭೆ

ಇಳಕಲ್ ತಾಲ್ಲೂಕ ಪಂಚಾಯತ್ ಸಭಾಭವನದಲ್ಲಿ ಹಲವು ದಿನಗಳಿಂದ ನಡೆಯಬೇಕಾಗಿದ್ದ ತಾಲೂಕು ಪಂಚಾಯತ ಪ್ರಗತಿ ಪರಿಶೀಲನಾ ಸಭೆ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಹಾಗೂ ಆಡಳಿತ ಅಧಿಕಾರಿಯಾದ ಎಂ ವಿ ಚಳಗೇರಿ ಹಾಗೂ ಇಳಕಲ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಸಿದ್ದಪ್ಪ ಪಟ್ಟಿಹಾಳ ಇವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ತಾಕೀತು ಮಾಡಿದರು ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಹಾಗೂ ಲೋಕೋಪಯೋಗಿ ಅಧಿಕಾರಿಗಳಿಗೆ ಸಮರ್ಪಕವಾಗಿ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದರು.

ವರದಿ: ವಿನೊದ ಬಾರಿಗಿಡದ ಇಳಕಲ್

error: