ರೋಣ: ಪುರಸಭೆ ಉಪಾಧ್ಯಕ್ಷ ಮಿಥುನ ಜಿ. ಪಾಟೀಲ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕೆಂದು ಜನಪರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಮಿಥುನ.ಜಿ.ಪಾಟೀಲ ಅಭಿಮಾನಿ ಬಳಗ ಸದಸ್ಯರಾದ ಸಂಗು ನವಲಗುಂದ ಹೇಳಿದರು. ಅವರು ಪಟ್ಟಣದ ಕಾಂಗ್ರೆಸ್ ಕಾರ್ಯಲಯದಲ್ಲಿ ಮಿಥುನ ಪಾಟೀಲ ಅಭಿಮಾನಿ ಬಳಗ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಿಥುನ ಅವರ ಜನ್ಮ ದಿನವನ್ನು ವಿಭಿನ್ನವಾಗಿ ಆಚರಣೆ ಮಾಡಬೇಕೆಂದು ಅವರ ಅಭಿಮಾನಿ ಬಳಗದಿಂದ ವಿವಿಧ ಜನರಿಗೆ ಅನುಕೂಲವಾಗುವಂತ ಕಾರ್ಯಕ್ರಮಗಳನ್ನು ಆಯೋಜನೆ ಮಾಡದ್ದೇವೆ. ದಿನಾಂಕ 9/1/22 ರಿಂದ 13/1/22 ರಂದು ಓಂ ಗುರೂಜಿ ಮಲ್ಲಿಕಾರ್ಜುನ ದೇವರು ಕಿತ್ತೂರ ಇವರಿಂದ ಬೆಳಗ್ಗೆ 6 ರಿಂದ 8 ರವರೆಗೆ ಯೋಗ ಶಿಬಿರವನ್ನು ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರು ತಮ್ಮ ಉತ್ತಮ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಯೋಗವನ್ನು ಮಾಡಬೇಕು. ಯೋಗದಿಂದ ರೋಗ ಮುಕ್ತ ದೇಹವನ್ನು ಮಾಡಿಕೊಳ್ಳಬೇಕು ಮತ್ತು ದಿ.9/1/22 ರಿಂದ 13/1/22 ರಂದು ರಾಣಿ ಚೆನ್ನಮ್ಮ ಮತ್ತು ಶಿಕ್ಷಣ ತರಬೇತಿ ಸಂಸ್ಥೆ ಹಾವೇರಿ ಇವರಿಂದ ಪಟ್ಟಣದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಸೈನಿಕ ತರಬೇತಿ ಶಿಬಿರವನ್ನು ಪ್ರಾರಂಭಿಸಲಾಗುವುದು. ಸೈನಕ್ಕೆ ಸೇರಲು ಆಸೆಪಡುವ ಯುವಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಮತ್ತು ಯುವಕರ ಜೀವನಕ್ಕೆ ಹಾಗೂ ಅವರ ಕುಟುಂಬಕ್ಕೆ ದಾರಿದೀಪವಾಗಲಿ ಎಂದು ಈ ಶಿಬಿರವನ್ನ ಪ್ರಾರಂಭಿಸುತ್ತಿದ್ದೇವೆ ಇಲ್ಲಿ ಸೈನದಲ್ಲಿ ನೀಡುವ ಟ್ರೇನಿಂಗನAತೆ ಎಲ್ಲಾ ಮಾದರಿಯಲ್ಲಿ ಟ್ರೇನಿಂಗ ನೀಡಲಾಗುವುದು ಮತ್ತು ಇಂದಿನ ಯುವಕರು ಹೆಚ್ಚು ಹೆಚ್ಚು ಸೈನಕ್ಕೆ ಸೇರಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ದಿನಾಂಕ 12/1/22 ರಂದು ಪಟ್ಟಣದ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಇಂದಿನ ದಿನದಲ್ಲಿ ಆರೋಗ್ಯ ಎಲ್ಲಾ ಜನರಿಗೆ ಬಹು ಮುಖ್ಯವಾಗಿದೆ ಅದರಲ್ಲಿಯೂ ರಕ್ತದಾನದಿಂದ ಅನೇಕ ಜೀವ ಉಳಿವಿಗೆ ಕಾರಣವಾಗಬಹುದು. ಈ ಸಂದರ್ಭದಲ್ಲಿ ಮಿಥುನ್ ಪಾಟೀಲ ಅಭಿಮಾನಿ ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದರು
ವರದಿ: ವೀರಣ್ಣ ಸಂಗಳದ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ