December 21, 2024

Bhavana Tv

Its Your Channel

ಶಾಲಾ ಮಕ್ಕಳಿಗೆ ಕರೋನಾ ಸೋಂಕು ಹರಡದಂತೆ ಸೂಕ್ತ ಕ್ರಮ ವಹಿಸುವಂತೆ ಶಾಸಕ ಡಾ. ಕೆ ಅನ್ನದಾನಿ ತಾಲೂಕು ಆಡಳಿತಕ್ಕೆ ಸೂಚನೆ

ಮಳವಳ್ಳಿ : ಮಹಾಮಾರಿ ಕರೋನ ಸಾಂಕ್ರಾಮಿಕ ರೋಗ ಮಳವಳ್ಳಿ ತಾಲ್ಲೂಕಿನಲ್ಲಿ ಶಾಲಾ ಮಕ್ಕಳಿಗೆ ವ್ಯಾಪಕವಾಗಿ ಹರಡುತ್ತಿರುವ ಕುರಿತು ಸೂಕ್ತ ಕ್ರಮ ವಹಿಸುವಂತೆ ಶಾಸಕ ಡಾ. ಕೆ ಅನ್ನದಾನಿ ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡಿದ್ದಾರೆ.
ಪಟ್ಟಣದ ತಾ ಪಂ ಸಭಾಂಗಣ ದಲ್ಲಿ ಕೋವಿಡ್ ಕುರಿತು ಕರೆಯಲಾಗುತ್ತಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಿಡಿಒ ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಹಿಂದೆ ಕೋವಿಡ್ ಒಂದನೇ ಮಳವಳ್ಳಿ ತಾಲ್ಲೂಕಿನಲ್ಲಿ ತಬ್ಲೀಕ್ ಗಳಿಂದ ವ್ಯಾಪಕವಾಗಿ ಹರಡಿತು.
ಎರಡನೇ ಅಲೆ ಸಾಮಾನ್ಯ ಜನರ ನಿರ್ಲಕ್ಷ್ಯತೆಯಿಂದ ವ್ಯಾಪಕವಾಗಿ ಹರಡಿತ್ತು.
ಆದರೆ ಈಗ ಆರಂಭವಾಗಿರುವ ಮೂರನೇ ಅಲೆ ಓಂ ಶಕ್ತಿ ಭಕ್ತರಿಂದ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಅದರಲ್ಲೂ ಶಾಲಾ ಮಕ್ಕಳಿಗೆ ಹರಡಲು ಸಹ ಓಂ ಶಕ್ತಿ ಭಕ್ತರೇ ಕಾರಣ ಎಂದು ಆತಂಕಿಸಿದರು.
ಪ್ರಾರಂಭದಲ್ಲೇ ಓಂ ಶಕ್ತಿ ಭಕ್ತರನ್ನು ಮನೆಗಳಿಗೆ ಊರುಗಳಿಗೆ ಪ್ರವೇಶಿಸಲು ಬಿಡದೆ ಪ್ರವಾಸದಿಂದ ಬಂದ ಕೂಡಲೇ ಐಸೋಲೆಸನ್ ಗೆ ಒಳಪಡಿಸಿದ್ದರೆ ಇಷ್ಟು ವ್ಯಾಪಕವಾಗಿ ಹರಡುತ್ತಿರಲಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ ಶಾಸಕರು ಮುಂದಾದರು ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ಬಿಇಒ ಚಿಕ್ಕಸ್ವಾಮಿ ಅವರು ಬ್ಲಫ್ ಶಾಲೆಯ ೧೪ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಬೆಳಕವಾಡಿ ಗ್ರಾಮದ ಖಾಸಗಿ ಶಾಲೆಯ ೧೬ ಮಂದಿ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು ಆ ಎಲ್ಲಾ ಮಕ್ಕಳನ್ನು ಅಗತ್ಯ ಚಿಕಿತ್ಸೆ ಜೊತೆಗೆ ಹೋಂ ಐಸೋಲೆಸನ್ ನಲ್ಲಿ ಇರಿಸಲಾಗಿದೆ ಎಂದು ಜೊತೆಗೆ ಬೆಂಡರವಾಡಿ, ಜಯಚಾಮರಾಜಪುರ ಶಾಲೆಯ ಕೆಲ ಮಕ್ಕಳಲ್ಲಿ ಹಾಗೂ ದುಗ್ಗನಹಳ್ಳಿ ಕಾಲೇಜಿನ ಇಬ್ಬರು ಉಪನ್ಯಾಸಕರಿಗೂ ಸೋಂಕು ತಗುಲಿದೆ ಎಂದು ಸಭೆಗೆ ವಿವರಿಸಿದರು.
ಸಭೆಯಲ್ಲಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ ವೀರಭದ್ರಪ್ಪ ಅವರು ತಾಲ್ಲೂಕಿನಲ್ಲಿ ಈವರೆಗೆ ಒಟ್ಟು ೩೪೭ ಸಕ್ರಿಯ ಪ್ರಕರಣಗಳು ಪತ್ತೆಯಾಗಿದ್ದು ೧೦೦ ಮಂದಿ ಯನ್ನು ಐಸೋಲೆಸನ್ ಸೆಂಟರ್ ಗಳಲ್ಲಿ ಇರಿಸಲಾಗಿದ್ದರೆ ೮೭ ಮಂದಿಗೆ ಕೋವಿಡ್ ಸೆಂಟರ್ ಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ, ಉಳಿದವರು ಹೋಂ ಐಸೋಲೆಸನ್ ನಲ್ಲಿ ಇದ್ದಾರೆ ಎಂದು ತಿಳಿಸಿದರು.
ತಹಸೀಲ್ದಾರ್ ವಿಜಯಣ್ಣ ಅವರು ತಾಲ್ಲೂಕಿನಲ್ಲಿ ಈಗಾಗಲೇ ಮೂರು ಕೋವಿಡ್ ಸೆಂಟರ್ ಗಳನ್ನು ತೆರೆಯಲಾಗಿದ್ದು ಇನ್ನೂ ೧೨ ಕಟ್ಟಡಗಳನ್ನು ಗುರುತಿಸಲಾಗಿದೆ ಎಂದರು.
ತಾ ಪಂ ಇಒ ರಾಮಲಿಂಗಯ್ಯ, ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ವರದಿ:-ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: