
ಭಟ್ಕಳ: ಹೊನ್ನಾವರ ತಾಲೂಕಿನ ಕರ್ಕಿ ಕೆಳಗಿನಕೇರಿಯ ನಿವೃತ್ತ ಶಿಕ್ಷಕ ಸುಬ್ರಾಯ ವೆಂಕಟರಮಣ ಭಾಗ್ವತ್(75) ಅವರು ಗುರುವಾರ ರಾತ್ರಿ ಅವರ ಸ್ವಗೃಹದಲ್ಲಿ ವಿಧಿವಶರಾದರು.
ಶಿರಾಲಿಯ ಜನತಾ ವಿದ್ಯಾಲಯ ದಲ್ಲಿ ಸುಮಾರು 30-35 ವರ್ಷಗಳ ಕಾಲ ಗಣಿತ ಶಿಕ್ಷಕ ರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಧಾರೆಯೆರೆದಿದ್ದರು. ನಂತರ ಮುರುಡೇಶ್ವರದ ಜನತಾ ವಿದ್ಯಾಲಯ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾಗಿ ನಿವೃತ್ತರಾಗಿದ್ದರು. ತೀರಾ ಸರಳ ವ್ಯಕ್ತಿತ್ವದವರಾಗಿದ್ದ ಅವರು ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ನೆಚ್ಚಿನ ಶಿಕ್ಷಕರಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರರು, ಮತ್ತು ಅಪಾರ ಶಿಷ್ಯವೃಂದದವರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಶಿರಾಲಿಯ ಗುರುನಮನ ಬಳಗದ ಅಧ್ಯಕ್ಷ ಶ್ರೀಧರ ಶೇಟ್ ಮತ್ತು ಕಾರ್ಯದರ್ಶಿ ಮಂಜುನಾಥ್ ಕೋಡಿಹಿತ್ಲು ಹಾಗೂ ಇತರ ಪದಾಧಿಕಾರಿಗಳು ತೀವ್ರ ಸಂತಾಪವನ್ನು ಸೂಚಿಸಿದ್ದಾರೆ. ಕಳೆದ ವರ್ಷ ಶಿರಾಲಿಯ ಗುರುನಮನ ಬಳಗದವರು ಎಸ್.ವಿ.ಭಾಗ್ವತ್ ಅವರಿಗೆ ಅದ್ದೂರಿ ಸನ್ಮಾನವನ್ನು ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ