April 29, 2024

Bhavana Tv

Its Your Channel

ಭಟ್ಕಳ ತಾಲೂಕಿನ ವಿವಿಧ ಭಾಗಗಳಲ್ಲಿ ತಗುಲಿದ ಬೆಂಕಿ

ಭಟ್ಕಳ ತಾಲೂಕಿನ ವಿವಿಧ ಭಾಗಗಳಲ್ಲಿ ಶುಕ್ರವಾರ ಬೆಂಕಿ ತಗುಲಿದ ಪ್ರಕರಣಗಳು ಕಂಡು ಬಂದಿದ್ದು ಸಂಜೆಯ ವರೆಗೆ ಒಟ್ಟು 3 ಬೆಂಕಿ ತಗುಲಿದ ಸ್ಥಳಗಳಿಗೆ ಭಟ್ಕಳ ಅಗ್ನಿಶ್ಯಾಮಕ ದಳ ತೆರಳಿ ಬೆಂಕಿ ನಂದಿಸಿ ನಡೆಯುವ ಸಂಭಾವ್ಯ ಅನಾಹುತ ತಪ್ಪಿಸಿದೆ.

ಭಟ್ಕಳ ತಾಲೂಕಿನ ಬೈಲೂರಿನ ನೀರಗದ್ದೆ ಮಾವಿನಕೂಡ್ಲ ಬಳಿಯ ಅರಣ್ಯ ಇಲಾಖೆಗೆ ಸೇರಿದ ಸರ್ವೆ ನಂ 600ರ 5 ಎಕರೆ ವಿಸ್ತೀರ್ಣದ ಅಕೇಶೀಯಾ ಪ್ಲಾಂಟೇಷನ್ ಬೆಂಕಿ ತಗುಲಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶ್ಯಾಮಕ ದಳ 3 ಗಂಟೆಯ ಸತತ ಪ್ರಯತ್ನದಿಂದ ಬೆಂಕಿ ನಂದಿಸಿದೆ. ಬೆಳಿಗ್ಗೆ ಬೇಂಗ್ರೆ ಪಂಚಾಯಿತಿ ವ್ಯಾಪ್ತಿಯ ಬಂಗಾರಮಕ್ಕಿ ಮಾರ್ಡನ್ ವುಡ್ ಫರ್ನೀಚರ್ ಮರದ ವಸ್ತುಗಳನ್ನು ತಯಾರಿಸುವ ಕಾರ್ಖಾನೆಗೆ ಬೆಂಕಿಯಾಗಿದ್ದು ಸುಮಾರು 2,00,000ರೂ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ತಕ್ಷಣ ಸ್ಥಳಕ್ಕೆ ಧಾವಿಸಿದ್ದರಿಂದ 2,00,000 ಮೌಲ್ಯದ ಸಾಮಗ್ರಿಗಳನ್ನು ಅಗ್ನಿಶ್ಯಾಮಕ ದಳ ರಕ್ಷಿಸಿದೆ. ಕಛೇರಿ ಕ್ಯಾಬಿನ್, ಸಿಸಿ ಕ್ಯಾಮರಾ, ವೈರೀಂಗ್, ಪ್ರಿಂಟರ್, ಟೇಬಲ್ ಕುರ್ಚಿಗಳು, ಕಟ್ಟಡದ ಮೇಲ್ಚಾವಣಿ, ಪ್ಲಾಟಫಾರಂ, ಮಾನಿಟರ್ ಸೇರಿ ವಸ್ತುಗಳು ಬೆಂಕಿಯ ಕೆನ್ನಾಲಿಗೆ ಬಲಿಯಾಗಿವೆ. ಸಂಜೆ 3 ಗಂಟೆಯ ಸುಮಾರಿಗೆ ಸಾಗರ ರಸ್ತೆಯ ಬೆಳಲಖಂಡದ 5 ಎಕರೆ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಮತ್ತೆ ಸ್ಥಳಕ್ಕೆ ತೆರಳಿ ಹೆಚ್ಚಿನ ಅನಾಹುತವಾಗದಂತೆ ತಕ್ಷಣ ಭಟ್ಕಳದ ಅಗ್ನಿಶ್ಯಾಮಕ ದಳ ಕಾರ್ಯಪ್ರವರ್ತವಾಗಿದ್ದು ಸಂಭಾವ್ಯ ಅನಾಹುತ ತಪ್ಪಿಸಿದೆ.
ಅಗ್ನಿಶ್ಯಾಮಕ ದಳದ ಪಿಎಸ್‌ಐ ರಮೇಶ ಶೆಟ್ಟಿ ನೇತೃತ್ವದಲ್ಲಿ ಮಹ್ಮದ್ ಶಫಿ, ಶಿವಪ್ರಸಾದ ನಾಯ್ಕ, ಕುಮಾರ ನಾಯ್ಕ, ಪುರುಷೋತ್ತಮ ನಾಯ್ಕ, ಅಕ್ಷಯ ಹೀರೇಮಠ, ವಸಂತ ದೇವಾಡಿಗ ಸೇರಿ ಇತರರು ನಸುಕಿನ ವೇಳೆಯಿಂದ ಸಂಜೆಯವರೆಗೆ ಎಲ್ಲಾ ಕಾರ್ಯಚರಣೆಯಲ್ಲಿ ಇದ್ದರು.

error: