ಕಾರ್ಕಳ: ರೋಟರಿ ಸಂಸ್ಥೆ ಕಾರ್ಕಳಕ್ಕೆ ರೋಟರಿ ಗವರ್ನರ್ ಅವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಹೋಟೆಲ್ ಪ್ರಕಾಶ್ ಇಲ್ಲಿನ “ಉತ್ಸವ “ಸಭಾಂಗಣದಲ್ಲಿ ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬನವರನ್ನು ಗೌರವಿಸಿ ಮಾತನಾಡುತ್ತಾ “ಪ್ರತಿಯೊಂದು ವ್ಯಕ್ತಿಯೂ ನಿಸ್ವಾರ್ಥ ಸೇವೆಯನ್ನು ಮಾಡುವುದರ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ಕೊಡಬೇಕು” ಎಂದು ಈ ಸಂದರ್ಭದಲ್ಲಿ ರೋಟರಿ ಗವರ್ನರ್ ರಾಮಚಂದ್ರ ಮೂರ್ತಿ ಅವರು ನುಡಿದರು.
ಈ ಸಂದರ್ಭದಲ್ಲಿ ಅವರು ನಾಲ್ಕು ಮಂದಿ ಫಲಾನುಭವಿಗಳಿಗೆ ಗಾಲಿಕುರ್ಚಿಯನ್ನು ಹಸ್ತಾಂತರಿಸಿ ಹಾಗೂ ಆಶಾ ಕೋಟ್ಯಾನ್, ಹಾಗೂ ಸುಧಾಕರ ಪೈ, ನಿಟ್ಟೆಯ ಅಹಮದ್ ಹುಸೇನ್, ಎಂಬವರಿಗೆ ತಮ್ಮ ವೃತ್ತಿಯಲ್ಲಿ ಸಲ್ಲಿಸಿದ ಸೇವೆಯ ಮಾನದಂಡದಲ್ಲಿ ಸನ್ಮಾನಿಸಿ, ಗೌರವವನ್ನು ಸಲ್ಲಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಅವರು ಸಂಸ್ಥೆಯ ಕಾರ್ಯಕ್ರಮದ ವಾರ್ಷಿಕ ವರದಿಯನ್ನು ನೀಡಿದರು. ಕ್ರೈಸ್ಟ್ ಕಿಂಗ್ ಶಾಲೆಯ ಇಂಟರ್ಯಾಕ್ಟ್ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡುವ ಫಲಕಗಳನ್ನು ಸಹಾಯಕ ಗವರ್ನರ್ ಅರುಣ್ ಹೆಗಡೆ ಬಿಡುಗಡೆ ಮಾಡಿದರು. ರೋಟರಿ ದತ್ತಿ ನಿಧಿಗೆ ಕೊಡುಗೆ ನೀಡಿದ ರೋಟರಿ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು ಈ ಕಾರ್ಯಕ್ರಮವನ್ನು ಅರುಣ ಎಂ ನೆರವೇರಿಸಿದರು. ರೋಟರಿ ಅಧ್ಯಕ್ಷರಾದ ಸುರೇಶ್ ನಾಯಕ್ ಸ್ವಾಗತಿಸಿದರು. ರೋಟೇರಿಯನ್ ಗೀತಾ ಸುಧೀರ್ ಕಾಮತ್ ಪ್ರಾರ್ಥನೆ ನೆರವೇರಿಸಿದರು. ರೋಟೇರಿಯನ್ ಸುವರ್ಣ ನಾಯಕ್ ಜಿಲ್ಲಾ ಗವರ್ನರ್ ಅವರ ಪರಿಚಯವನ್ನು ಮಾಡಿದರು. ರೋಟೇರಿಯನ್ ಸತೀಶ್ ಆಚಾರ್ಯ , ರೋಟೇರಿಯನ್ ಇಕ್ಬಾಲ್ ಅಹಮದ್ ಸನ್ಮಾನಿತರ ಪರಿಚಯವನ್ನು ಮಾಡಿದರು. ವಲಯ ಸೇನಾನಿ ಸುರೇಂದ್ರ ನಾಯಕ ಅವರು ಸಂಸ್ಥೆಯ ವಾರಪತ್ರಿಕೆ “ಸರ್ವಿಸ್ “ಬಿಡುಗಡೆ ಮಾಡಿದರು ಸರ್ವಿಸ್ ಪತ್ರಿಕೆಯ ಸಂಪಾದಕಿ ರಮಿತಾ ಶೈಲೆಂದ್ರ ರಾವ್ ಉಪಸ್ಥಿತರಿದ್ದರು. ನಿಯೋಜಿತ ಅಧ್ಯಕ್ಷರಾದ ರೋಟೇರಿಯನ್ ಮೋಹನ್ ಹಾಗೂ ಉಪಕಾರ್ಯದರ್ಶಿ ರೋಟೇರಿಯನ್ ಗೀತಾ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿದರು ಕಾರ್ಯದರ್ಶಿ ಇಕ್ಬಾಲ್ ಅಹಮದ್ ಧನ್ಯವಾದವನ್ನು ನೀಡಿದರು.
ವರದಿ: ಅರುಣ ಭಟ್ ಕಾರ್ಕಳ
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ