ರೋಣ:- ನರೇಗಾದಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಜನರಿಗೆ ಸನ್ಮಾನಿಸಿದ ಸಂತೋಷ ಪಾಟೀಲ
ನರೇಗಾದಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಜನರಿಗೆ ಸನ್ಮಾನಿಸಲಾಯಿತು.
ನರೇಗಾ ದಿವಸದ ಪ್ರಯುಕ್ತ 2021-22 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಯೋಜನೆಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಿದ 5 ಜನ ಕೂಲಿಕಾರರು ಹಾಗೂ ಗ್ರಾಮೀಣ ಮಟ್ಟದಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ಶ್ರಮಿಸಿದ ಕೆಳಮಟ್ಟದ ನೌಕರರು ನರೇಗಾ ಕೂಲಿಕಾರರಾದ ಪಾರಮ್ಮ ಮಠಪತಿ, ಶಾಂತಯ್ಯ ಮಠಪತಿ, ಮುರ್ತುಸಾಬ್ ಬಾಲೆ, ಸಾಬಣ್ಣವರ್ ಜೀವನ್ ಸಾಬ್, ಮೌಲಾಸಾಬ್ ಮುಲ್ಲಾನ,ಮಾಳವ್ವ ಸಿದ್ಲಿಂಗಪ್ಪ, ಕರಡಿ ಹುಸೇನ ಸಾಬ, ಇಮಾಮ ಸಾಬ, ಸಂಗಮ ನರೇಗಾ ಯೋಜನೆ ಅಡಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.
ನಂತರ ಸಂತೋಷ ಪಾಟೀಲ ಮಾತನಾಡಿ ಕೇಂದ್ರ ಸರ್ಕಾರದ ಮಹತ್ವ ಆಕಾಂಕ್ಷಿ ಯೋಜನೆಗಳಲ್ಲಿ ನರೇಗಾ ಯೋಜನೆ ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಗ್ರಾಮೀಣ ಭಾಗದ ಜನರು ಕೆಲಸವಿಲ್ಲದೆ ಇರಬಾರದು ಹೆಣ್ಣು ಮತ್ತು ಗಂಡಿಗೆ ಸಮಾನ ಕೂಲಿ ಇದ್ದಾಗಿದೆ. ಉದ್ಯೋಗದ ಸಲುವಾಗಿ ವಲಸೆ, ಹೋಗುವುದನ್ನು ತಪ್ಪಿಸಲು ನಮ್ಮ ಉದ್ಯೋಗ ನಮ್ಮ ಪಂಚಾಯತಿಯಲ್ಲಿ ಎನ್ನುವ ಹಾಗೆ ಈ ಯೋಜನೆಯ ಉದ್ದೇಶವಾಗಿದೆ ಎಂದು ಮಾತನಾಡಿದ್ದರು.ಇದೇ ಸಂದರ್ಭದಲ್ಲಿ ನರೇಗಾ ಮಾಹಿತಿಯನ್ನು ನೀಡಿದರು ತಾಲ್ಲೂಕು ಪಂಚಾಯಿತಿಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು
.ವರದಿ ವೀರಣ್ಣ ಸಂಗಳದ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ