ಕೊಡಗು::ಶನಿವಾರಸಂತೆ ನೆಮ್ಮದಿ ಕೇಂದ್ರದಲ್ಲಿ ಆಧಾರ್ ಸೇವೆ ಪುನರ್ ಕಲ್ಪಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಶಿವರಾಮೇಗೌಡರ ಕರವೇ ಕಾರ್ಯಕರ್ತರು ಮಾಧ್ಯಮದ ಮುಖಾಂತರ ಮನವಿ ಸಲ್ಲಿಸಿದರು
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ಕಂದಾಯ ಇಲಾಖೆಯಲ್ಲಿರುವ ನೆಮ್ಮದಿ ಕೇಂದ್ರದಲ್ಲಿ 3ತಿಂಗಳಿನಿAದ ಆಧಾರ್ ಸೇವೆ ಕಂಪ್ಯೂಟರ್ ರಿಪೇರಿಯಿಂದ ನಿಂತು ಹೋಗಿರುತ್ತದೆ .ಇದನ್ನು ಬೇಗನೆ ಸರಿಪಡಿಸಬೇಕೆಂದು ಈ ಹಿಂದೆ ಕಂದಾಯ ಇಲಾಖೆಯಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು ಹಾಗೂ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಆಧಾರ್ ಸೆಕ್ಷನ್ ನಲ್ಲಿರುವ ಸೋಮಶೇಖರ್ ರವರನ್ನು ಭೇಟಿ ಮಾಡಿ ಆದಷ್ಟು ಬೇಗನೆ ಸರಿಪಡಿಸಬೇಕೆಂದು ಶಿವರಾಮೇಗೌಡರ ಕರವೇ ಕಾರ್ಯಕರ್ತರು ತಿಳಿಸಿ ಬಂದಿರುತ್ತವೆ ಆದರೂ ಈವರೆಗೂ ಆಧಾರ್ ಕಾರ್ಡ್ ತೆಗೆಯುವಲ್ಲಿ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ ಇದರ ಬಗ್ಗೆ ಜಿಲ್ಲಾಧಿಕಾರಿಯವರು ಬೇಗನೆ ಕ್ರಮ ಕೈಗೊಂಡು ಆಧಾರ್ ಕಾರ್ಡ್ ತೆಗೆಯುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ .. ಹೊರಗಡೆ (ಪ್ರವೇಟ್) ನಲ್ಲಿ ಆಧಾರ್ ಕಾರ್ಡ್ ಮಾಡಿಸಿದರೆ ಬಡವರ ಸುಲಿಗೆ ಆಗುತ್ತಿರುವ ಬಗ್ಗೆ ಈ ಹಿಂದೆ ಕರವೇ ಕಾರ್ಯಕರ್ತರು ತಿಳಿಸಿದರು. ಆದರೂ ಈವರೆಗೂ ಆಧಾರ್ ಕಾರ್ಡ್ ಸೆಂಟರ್ ಪ್ರಾರಂಭ ಮಾಡದಿರಲು ಏನು ಕಾರಣ ಎಂದು ಕರವೇ ಕಾರ್ಯಕರ್ತರ ಪ್ರಶ್ನೆ ಮಾಡಿದ್ದಾರೆ.
More Stories
ಅನಾಥ ಅಜ್ಜಿಯನ್ನು ಅನಾಥಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೇರೆದ ಕರವೇ ಫ್ರಾನ್ಸಿಸ್ ಡಿಸೋಜಾ.
ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಬಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿದ ಕರವೇ ತಾಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ
ಗೌಡಳ್ಳಿ ಗ್ರಾಮ ಪಂಚಾಯಿತಿ ಮುಂದೆ ಉದ್ಯಾನವನದ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಶಿವರಾಮೇಗೌಡರ ಕರವೇ ಕಾರ್ಯಕರ್ತರಿಂದ ಮನವಿ