April 28, 2024

Bhavana Tv

Its Your Channel

ಅನಾಥ ಅಜ್ಜಿಯನ್ನು ಅನಾಥಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೇರೆದ ಕರವೇ ಫ್ರಾನ್ಸಿಸ್ ಡಿಸೋಜಾ.

ಕೊಡಗು; ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬೇಲೂರು ಗ್ರಾಮ ಪಂಚಾಯಿತಿಗೆ ಸೇರಿದ ಹಾನಗಲ್ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಸರಿಯಾಗಿ ಕಣ್ಣು ಕಾಣದ ೭೫ ವರ್ಷದ ಅಜ್ಜಿ ತಿರುಗಾಡುಕೊಂಡು ಅವರಿವರು ಕೊಡುವ ಆಹಾರವನ್ನು ಊಟ ಮಾಡುತ್ತಾ ಚಳಿ ಗಾಳಿ ಮಳೆಯಲ್ಲಿ ಸುತ್ತಾಡಿಕೊಂಡು, ಹಾಳು ಬಿದ್ದಿರುವ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು, ಇದನ್ನೆಲ್ಲ ಗಮನಿಸಿದ ಹಾನಗಲ್ ಗ್ರಾಮಸ್ಥರು ಮಾರ್ವಿನ್ ಡಿಸೋಜ ರವರಿಗೆ ತಿಳಿಸುತ್ತಾರೆ ಮಾರ್ವಿನ್ ಡಿಸೋಜರವರು ಕರವೇ ಕಾರ್ಯಕರ್ತರಿಗೆ ತಿಳಿಸಿದ ಮೇರೆಗೆ ಕರವೇ ಫ್ರಾನ್ಸಿಸ್ ಡಿಸೋಜ ಅಜ್ಜಿಯನ್ನು ಕರೆದುಕೊಂಡು ಬಂದು ಮಾರ್ವೀನ್ ಡಿಸೋಜರವರ ಮನೆಯಲ್ಲಿ ಸಂಪೂರ್ಣವಾಗಿ ಗಲೀಜ್ ಆಗಿದಂತಹ ಅಜ್ಜಿಯನ್ನು ಸ್ನಾನ ಮಾಡಿಸಿ ಸಂಪೂರ್ಣವಾಗಿ ಸ್ವಚ್ಛಪಡಿಸಿ ಕೈಯಲ್ಲಿದ್ದ ಉಗುರುಗಳನ್ನು ಮತ್ತು ಕಾಲಲ್ಲಿದ್ದ ಉಗುರುಗಳನ್ನು ತೆಗೆದು ಹಾಗೂ ಕೂದಲನ್ನು ಕಟ್ ಮಾಡಿ ಹೊಸ ಬಟ್ಟೆಗಳನ್ನು ತೊಡಸಿ ಈ ಅನಾಥ ಅಜ್ಜಿಯನ್ನು ಅನಾಥಾಶ್ರಮಕ್ಕೆ ಸೇರಿಸಲು ಖುದ್ದಾಗಿ ಕಾರ್ ನಲ್ಲಿ ಹೋಗಿ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಬದಲ್ಲಿ ಕರವೇ ಫ್ರಾನ್ಸಿಸ್ ಡಿಸೋಜ ರವರ ಮಾತನಾಡಿ ನಾವು ದೇವರನ್ನು ಕಂಡಿಲ್ಲ ಇಂಥ ಅನಾಥರ ಕೆಲಸ ಮಾಡಿ ನಾವು ದೇವರನ್ನು ಕಾಣುತ್ತಿದ್ದೇವೆ ಹಾಗಾಗಿ ಇಂಥ ಕೆಲಸಗಳನ್ನು ನಾನು ಮುಂದೆಯೂ ಸಹ ಮಾಡುತ್ತಲೇ ಇರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಅಜ್ಜಿಯನ್ನು ಸಾಗಿಸಲು ಕಾರನ್ನು ವ್ಯವಸ್ತೆ ಮಾಡಿಕೊಟ್ಟಂತಹ ಮರ್ವಿನ್ ಡಿಸೋಜ, ಕಾಗಡಿ ಕಟ್ಟೆ ಮನೋಜ್ ಭಟ್ ಅವರಿಗೆ ಕರವೆ ಯಿಂದ ಧನ್ಯವಾದ ಅರ್ಪಿಸಿದ್ದಾರೆ.
ಕರವೇ ಫ್ರಾನ್ಸಿಸ್ ಡಿಸೋಜಾ ೯೪೪೯೨೫೫೮೩೧ ಮತ್ತು ೯೬೮೬೦೯೫೮೩೧

error: