December 22, 2024

Bhavana Tv

Its Your Channel

ಶನಿವಾರಸಂತೆ ಕಂದಾಯ ಇಲಾಖೆಗೆ ನೂತನವಾಗಿ ನೇಮಕಗೊಂಡಿರುವ ಉಪ ತಹಸೀಲ್ದಾರ್ ಶ್ರೀದೇವಿರವರಿಗೆ ಕರವೇ ಕಾರ್ಯಕರ್ತರಿಂದ ಸನ್ಮಾನ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿ ಕಂದಾಯ ಇಲಾಖೆಗೆ ನೂತನವಾಗಿ ನೇಮಕಗೊಂಡಿರುವ ಶ್ರೀದೇವಿ ರವರಿಗೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸನ್ಮಾನಿಸಿ ಸ್ವಾಗತಿಸಲಾಯಿತು

ಈ ಸಂದರ್ಭದಲ್ಲಿ ಕರವೇ ಸೋಮವಾರಪೇಟೆ ತಾಲ್ಲೂಕು ಕಾರ್ಯದರ್ಶಿ ರಾಮನಳ್ಳಿ ಪ್ರವೀಣ್ ಮಾತನಾಡಿ ಶನಿವಾರಸಂತೆ ಹೋಬಳಿಗೆ ತಾವುಗಳು ನೇಮಕವಾಗಿರುವುದು ತುಂಬಾ ಸಂತೋಷಕರ ವಿಷಯ ಎಂದು ತಿಳಿಸಿದರು

ಈ ಪ್ರದೇಶ ಹಳ್ಳಿಗಾಡುಗಳಿಂದ ಕೂಡಿರುತ್ತದೆ ಇಲ್ಲಿ ಬಡವರ ಹೆಚ್ಚಾಗಿರುವುದರಿಂದ ಬಡವರ ಪರ ಹೆಚ್ಚು ಒಲವು ತೋರಿಸಿ ತಾವುಗಳು ಕೆಲಸ ಮಾಡಬೇಕಾಗಿ ವಿನಂತಿಸಿದರು

ಇದೇ ಸಂದರ್ಭದಲ್ಲಿ ಶನಿವಾರಸಂತೆ ಹೋಬಳಿ ಮಹಿಳಾ ಘಟಕದ ಅಧ್ಯಕ್ಷರಾದ ಕುಸುಮ ರವರು ಉಪ ತಹಸೀಲ್ದಾರ್ ರವರಿಗೆ ಶಾಲು ಹೊದಿಸಿ ಸನ್ಮಾನಿಸಿದರು ..

ಈ ಸಂದರ್ಭದಲ್ಲಿ ಕರವೇ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಹಾಗೂ ಕರವೇ ಸೋಮವಾರಪೇಟೆ ತಾಲ್ಲೂಕು ಕಾರ್ಯದರ್ಶಿ ರಾಮನಹಳ್ಳಿ ಪ್ರವೀಣ್ ಹಾಗೂ ಶನಿವಾರಸಂತೆ ಹೋಬಳಿ ಮಹಿಳಾ ಘಟಕದ ಅಧ್ಯಕ್ಷರಾದ ಕುಸುಮಾ ಹಾಗೂ ರಂಜಿತ್ ಉಪಸ್ಥಿತರಿದ್ದರು

error: