March 12, 2025

Bhavana Tv

Its Your Channel

ವಿಜೃಂಭಣೆಯಿOದ ನಡೆದ ಲಕ್ಷ್ಮಿ ನಾರಾಯಣ ಗಣಪತಿ ದೇವರ ಬೆಳ್ಳಿ ರಥೋತ್ಸವ

ಭಟ್ಕಳ : ಪಟ್ಟಣದ ಸೋನಾರಕೇರಿಯ ಲಕ್ಷ್ಮಿ ನಾರಾಯಣ ಗಣಪತಿ ದೇವರ ಬೆಳ್ಳಿ ರಥೋತ್ಸವ ಸೋಮವಾರ ವಿಜೃಂಭಣೆಯಿoದ ನೆರವೇರಿತು.
ರಥೋತ್ಸವದ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ನಡೆದವು. ಮಧ್ಯಾಹ್ನ ದೇವರ ಉತ್ಸವ ಮೂರ್ತಿಯನ್ನು ತಂದು ಬೆಳ್ಳಿ ರಥೋತ್ಸವದಲ್ಲಿ ಕೂರಿಸಿ ಪೂಜಿಸಲಾಯಿತು. ನಂತರ ದೈವಜ್ಞ ಸುವರ್ಣಕಾರರ ಸಮಾಜದವರು ದೇವರಿಗೆ ರಥಕಾಣಿಕೆ ಅರ್ಪಿಸಿದರು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಕ್ಕೂ ಹೆಚ್ಚೂ ಜನರು ದೇವರ ಪ್ರಸಾದ ಸ್ವೀಕರಿಸಿದರು. ಸಂಜೆ ಆರು ಘಂಟೆಗೆ ದೇವರ ಬೆಳ್ಳಿ ರಥವನ್ನು ಸೋನಾರಕೇರಿಯ ಕೆರೆಯ ತನಕ ಎಳೆದು ಹೋಗಿ ಪುನಃ ದೇವಸ್ಥಾನಕ್ಕೆ ಎಳೆದು ತರಲಾಯಿತು.
ಮೆರವಣಿಗೆಯಲ್ಲಿ ಮಹಿಳೆಯರ ಭಜನೆ ಕೀರ್ತನೆ ಹಾಡಿದರು., ತಟ್ಟಿರಾಯ, ಹುಲಿವೇಷಗಳು ಮೆರವಣಿಗೆಯಲ್ಲಿ ಜನಮನಸೂರಗೊಂಡವು. ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ಸುಧಾಕರ ಶೇಟ್, ಕಾರ್ಯದರ್ಶಿ ಗುರುನಾಥ ಕೊಲ್ಲೆ, ಪ್ರಮುಖರಾದ ಪುರಸಭಾ ಸದಸ್ಯ ರಾಘವೇಂದ್ರ ಶೇಟ್, ಸಂದೀಪ ಶೇಟ್, ಕೇದಾರ ಕೊಲ್ಲೆ, ದಿನೇಶ ಶೇಟ್, ಗುರು ಶೇಟ್, ಮಂಜುನಾಥ ಶೇಟ್ ಸೇರಿದಂತೆ ಇತರ ಸಮಾಜದ ಪ್ರಮುಖರು ಇದ್ದರು.

error: