May 3, 2024

Bhavana Tv

Its Your Channel

ಸರಿಯಾದ ಮಾಹಿತಿ ನೀಡದೇ ಇರುವುದಕ್ಕಾಗಿ ಆರೋಪಿತನಿಗೆ 1 ತಿಂಗಳು ಸಜೆ ಹಾಗೂ 500 ರೂಪಾಯಿ ದಂಡ ವಿಧಿಸಿದ ಜೆ.ಎಂ.ಎಫ್.ಸಿ. ನ್ಯಾಯಾಲಯ

ಭಟ್ಕಳ: ಕಲಂ 179 ಐ.ಪಿ.ಸಿ. ಅಡಿಯಲ್ಲಿ ಸರಿಯಾದ ಮಾಹಿತಿ ನೀಡದೇ ಇರುವುದಕ್ಕಾಗಿ ಆರೋಪಿತನಿಗೆ 1 ತಿಂಗಳು ಸಜೆ ಹಾಗೂ 500 ರೂಪಾಯಿ ದಂಡ ವಿಧಿಸಿ ಜೆ.ಎಂ.ಎಫ್.ಸಿ. ನ್ಯಾಯಾಧೀಶ ತೀರ್ಪು ನೀಡಿದ್ದಾರೆ

ಭಟ್ಕಳ ನಗರದಲ್ಲಿ ತರಕಾರಿ ಮಾರುತ್ತಿರುವ ಮಹಿಳೆಯೋರ್ವಳಲ್ಲಿ ಪುರಸಭೆಯ ಸುಂಕ ವಸೂಲಿ ಮಾಡಲು ಬಂದ ಕೆ.ಎಂ.ಶಾಜೀರ್ ಇಕ್ಕೇರಿ ಎನ್ನುವವರು ಎರಡು ಪಟ್ಟು ಸುಂಕ ಕೊಡಬೇಕು ಎಂದು ಧಮಕಿ ಹಾಕಿದ ಕುರಿತು 2017ರಲ್ಲಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆ ನಡೆಸುವ ಸಂದರ್ಭದಲ್ಲಿ ಪೊಲಿಸರಿಗೆ ಆರೋಪಿತನು ಸರಿಯಾದ ಮಾಹಿತಿಯನ್ನು ನೀಡದೇ ಬಂಧನ ತಿಳುವಳಿಕೆ ಪತ್ರಗಳಿಗೂ ಸಹಿ ಹಾಕದೇ ನಿರಾಕರಿಸಿದ ಕುರಿತೂ ದೂರಿನಲ್ಲಿ ನಮೂದಾಗಿತ್ತು. ತನಿಖೆಯನ್ನು ನಡೆಸಿದ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಫವಾಜ್ ಪಿ.ಎ. ಅವರು ಆರೋಪಿತನಿಗೆ ಕಲಂ 179 ಐ.ಪಿ.ಸಿ. ಅಡಿಯಲ್ಲಿ ಸರಿಯಾದ ಮಾಹಿತಿ ನೀಡದೇ ಇರುವುದಕ್ಕಾಗಿ 1 ತಿಂಗಳು ಸಜೆ ಹಾಗೂ 500 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ತುಂಬಲು ತಪ್ಪಿದಲ್ಲಿ 1 ವಾರಗಳ ಕಾಲ ಸಾದಾ ಶಿಕ್ಷೆ ಅನುಭವಿಸಬೇಕು ಎಂದೂ ತೀರ್ಪಿನಲ್ಲಿ ಹೇಳಲಾಗಿದೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ವಿವೇಕ ಆರ್. ನಾಯ್ಕ ಅವರು ವಾದಿಸಿದ್ದರು.

error: