May 3, 2024

Bhavana Tv

Its Your Channel

ಸಚಿವ ಈಶ್ವರಪ್ಪರವರ ರಾಷ್ಟ್ರಧ್ವಜದ ವಿರುದ್ಧ ಹೇಳಿಕೆ ಆಗ್ರಹಿಸಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮನವಿ

ಭಟ್ಕಳ: ಸಚಿವ ಈಶ್ವರಪ್ಪ ರಾಷ್ಟ್ರಧ್ವಜದ ವಿರುದ್ಧ ಹೇಳಿಕೆ ನೀಡಿ ಅಪಮಾನವೆಸಗಿದ್ದು, ಕೂಡಲೇ ಅವರನ್ನು ಸಚಿವ ಸಂಪುಟದಿAದ ಕೈ ಬಿಡಬೇಕು ಎಂದು ಆಗ್ರಹಿಸಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಶೀಲ್ದಾರ ಕಚೇರಿಯ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಭಟ್ಕಳ ಮಿನಿ ವಿಧಾನಸೌಧದ ಮುಂದೆ ಸೇರಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸಚಿವ ಈಶ್ವರಪ್ಪ ಹಾಗೂ ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಅಧ್ಯಕ್ಷ ಅಬ್ದುಲ್ ಮಜೀದ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನುಡಿದಂತೆ ಈಶ್ವರಪ್ಪನವ ಮೆದುಳು, ನಾಲಿಗೆಗೆ ಸಂಪರ್ಕ ತಪ್ಪಿ ಹೋಗಿದೆ. ಸಣ್ಣ ಹಿಜಾಬ್ ವಿಷಯವನ್ನೇ ದೊಡ್ಡದು ಮಾಡಿರುವುದು ಬಿಜೆಪಿಯ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ರಾಮಾ ಮೊಗೇರ ಕಾಂಗ್ರೆಸ್ ಮುಖಂಡ ಮಾತನಾಡಿ ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಈಶ್ವರಪ್ಪ ನೀಡಿರುವ ಹೇಳಿಕೆ ರಾಷ್ಟ್ರಕ್ಕೆ, ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದ್ದು, ಇದು ರಾಷ್ಟ್ರದ್ರೋಹಿ ಕೃತ್ಯವಾಗಿದೆ. ಈಶ್ವರಪ್ಪನಂತಹ ಭ್ರಷ್ಟರು, ಬಾಯಿಹರುಕ ಸಂಸ್ಕಾರ ರಹಿತವಾಗಿ ಬಾಯಿಗೆ ಬಂದAತೆ ಮಾತನಾಡುತ್ತಿರುವುದು ಖಂಡನೀಯವಾಗಿದೆ. ಈಶ್ವರಪ್ಪನವರು ಇದೇ ರೀತಿ ವರ್ತನೆಯನ್ನು ಮುಂದುವರೆಸಿದರೆ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರು ತಕ್ಕ ಪಾಠ ಕಲಿಸಲಿದ್ದಾರೆ.ಎಂದರು
ಭಟ್ಕಳ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ನಮ್ಮ ರಾಷ್ಟ್ರ ಧ್ವಜವು ವಿವಿಧತೆಯಲ್ಲಿ ಏಕತೆಯ ಸಂಕೇತವಾಗಿದ್ದು, ಅದಕ್ಕೆ ಅವಹೇಳನ ಮಾಡಿರುವುದು ಹಾಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ಮನಬಂದAತೆ ಮಾತನಾಡಿರುವುದನ್ನು ಸಹಿಸಿಕೊಳ್ಳಲು ಸಾಧ್ಯ ಇಲ್ಲ ಎನ್ನುತ್ತ ಮನವಿಯನ್ನು ಓದಿ ಹೇಳಿದರು. ತಹಸೀಲ್ದಾರರ ಅನುಪಸ್ಥಿತಿಯಲ್ಲಿ ಶಿರಸ್ತೇದಾರ ವಿಜಯಲಕ್ಷ್ಮೀ ಮಣಿ ಮನವಿಯನ್ನು ಸ್ವೀಕರಿಸಿದರು. ನಾರಾಯಣ ನಾಯ್ಕ ಯಲ್ವಡಿಕವೂರು, ಭಾಸ್ಕರ ನಾಯ್ಕ, ಮಹಾಬಲೇಶ್ವರ ನಾಯ್ಕ ಜಾಲಿ, ವಿಷ್ಣು ದೇವಡಿಗ ಬೆಂಗ್ರೆ ವೆಂಕಯ್ಯ ಭೈರುಮನೆ, ಇಟ್ಟು ಅಲಿ, ಟಿ.ಡಿ.ನಾಯ್ಕ, ಜಯಲಕ್ಷ್ಮೀ ಗೊಂಡ, ಭಾಸ್ಕರ ಮೊಗೇರ, ಮಂಜುನಾಥ ನಾಯ್ಕ, ರಮೇಶ ನಾಯ್ಕ, ಗಣಪತಿ ನಾಯ್ಕ, ಸತೀಶ ಆಚಾರಿ, ಮಂಗಳಾ ಗೊಂಡ, ಭಟ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ದಯಾನಂದ, ದುರ್ಗಾದಾಸ ಮೊಗೇರ, ಸುಜಾತಾ ಉಪಸ್ಥಿತರಿದ್ದರು.

error: