ರೋಣ: ಹಿಂದೂಗಳು ಮತ್ತು ಹಿಂದು ಪರ ಸಂಘಟನೆಗಳು ಉಳಿಯಬೇಕಾದರೆ ಶಿವಮೊಗ್ಗದಲ್ಲಿ ಹರ್ಷನನ್ನು ಹತ್ಯೆಗೈದ ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕು ಅವರನ್ನು ಗಲ್ಲಿಗೇರಿಸಬೇಕು ಅಂದರೆ ಬಸನಗೌಡ ಪಾಟೀಲ್ ಯತ್ನಾಳರನೂ ಗೃಹ ಮಂತ್ರಿಯಾಗಿ ನೇಮಕ ಮಾಡಬೇಕು ಎಂದು ಶ್ರೀರಾಮಸೇನೆ ರೋಣ ತಾಲ್ಲೂಕು ಅಧ್ಯಕ್ಷ ಮುತ್ತಣ್ಣ ಕೋರ್ಟ್ ಶೆಟ್ಟಿ ಹೇಳಿದರು
ಅವರು ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿರುವ ಭಜರಂಗದಳ ಕಾರ್ಯಕರ್ತನ ಕೊಲೆ ಖಂಡಿಸಿ ಮತ್ತು ಕೊಲೆಗೈದ ದುಷ್ಕರ್ಮಿಗಳು ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿ ರೋಣ ಪಟ್ಟಣದ ಶಿವಾನಂದ ಮಠದ ಮುಖಾಂತರ ಶ್ರೀರಾಮ ಸೇನೆ ವತಿಯಿಂದ ಬೈಕ್ ರ್ಯಾಲಿ ಮೂಲಕ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿಲಾಯಿತು
ಈ ಸಂದರ್ಭದಲ್ಲಿ ರಮೇಶ, ಆದಿ, ಮಹೇಶ, ಶಿರಗುಂಪಿ, ಸಂಜು ಮಲಕ, ಸಮುದ್ರ ಶಿವರಾಜ, ದಂಡಿನ ಮಾಂತೇಶ, ಅಬ್ಬಿಗೇರಿ ಸಂಗು, ಬಡಿಗೇರ ಸಿದ್ದನಗೌಡ, ವೀರೇಶ ಮಾಳಗೌಡ್ರು ಸೇರಿದಂತೆ ಇತರರು ಉಪಸ್ಥಿತರಿದ್ದರು
ವರದಿ: ವೀರಣ್ಣ ಸಂಗಳದ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ