December 22, 2024

Bhavana Tv

Its Your Channel

ಗುಂಡಿ ಮುಚ್ಚುವ ಕಾರ್ಯದಲ್ಲಿ ಅವ್ಯವಹಾರ, ಇಂಜಿನಿಯರ್ ಗಳ ಮತ್ತು ಗುತ್ತಿಗೆದಾರರ ಕೈವಾಡ, ಕರವೇ ಆರೋಪ

ಕೊಡಗು: ಗುಂಡಿ ಮುಚ್ಚುವ ಕಾರ್ಯದಲ್ಲಿ ಅವ್ಯವಹಾರ ನಡೆದಿದ್ದು, ಇಂಜಿನಿಯರ್ ಗಳ ಮತ್ತು ಗುತ್ತಿಗೆದಾರರ ಕೈವಾಡ ಕರವೇ ಆರೋಪ ಇದರ ಬಗ್ಗೆ ಕೊಡಗು ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಸರಕಾರ ಬೇಗನೆ ಕ್ರಮ ಕೈಗೊಳ್ಳಬೇಕೆಂದು ಶಿವರಾಮೇಗೌಡರ ಕರವೇ ಕಾರ್ಯಕರ್ತರ ಮನವಿ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯಿಂದ ಹಾಲೇರಿವರೆಗೆ ರಸ್ತೆಯ ಗುಂಡಿಗಳ ಮುಚ್ಚುವ ಕೆಲಸಕ್ಕೆ ಸರ್ಕಾರದಿಂದ ಲಕ್ಷಾಂತರ ಹಣ ಬಂದಿದ್ದರು ಈ ಹಣ ಗುತ್ತಿಗೆದಾರರ ಪಾಲಾಗುತ್ತಿದೆ .ಈ ರಸ್ತೆಗಳನ್ನು ನೋಡಿಕೊಳ್ಳಲೆಂದು ಇಂಜಿನಿಯರ್ ಗಳಿಗೆ ನೇಮಿಸಿರುತ್ತಾರೆ ಆದರೆ ಲೋಕೋಪಯೋಗಿ ಇಂಜಿನಿಯರ್ ಗಳು ಇದನ್ನು ಇದನ್ನೆಲ್ಲ ಮರೆತು ಗುತ್ತಿಗೆದಾರರಿಂದ ಕೆಲಸ ಮಾಡದಿದ್ದರೂ ಅವರಿಗೆ ಬಿಲ್ ಮಾಡುವ ಕೆಲಸ ನಡೆಯುತ್ತಿದೆ ಸರಿಯಾಗಿ ಗುಂಡಿ ಮುಚ್ಚುವ ಕೆಲಸ ಎಲ್ಲೂ ಆಗಿರುವುದಿಲ್ಲ ಹಾಗಾಗಿ ಇವರ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ಕೊಡಗು ಲೋಕೋಪಯೋಗಿ ಇಲಾಖೆಯವರಿಗೆ ಮಾಧ್ಯಮದ ಮುಖಾಂತರ ಮನವಿ ಮಾಡಿಕೊಳ್ಳುತ್ತಿದ್ದೇವೆ ಹಾಗೂ ಇದನ್ನು ಸರಿಪಡಿಸದಿದ್ದರೆ ಲೋಕಾಯುಕ್ತಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ದೂರು ಕೊಡಲು ಕರವೇ ಕಾರ್ಯಕರ್ತರು ಸಿದ್ಧಗೊಳ್ಳುತ್ತಿದ್ದಾರೆ .

error: