December 22, 2024

Bhavana Tv

Its Your Channel

ಮುರಾರ್ಜಿ ದೇಸಾಯಿ ಶಾಲಾ ಕಟ್ಟಡ ಕೂಲಿ ಕಾರ್ಮಿಕರಿಗೆ ಬಸರಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹಾಲಿಂಗಪ್ಪ ಅವರಿಂದ ರೇಷನ್ ಕಿಟ್ ವಿತರಣೆ

ಮಂಡ್ಯ : ಮಂಡ್ಯ ತಾಲೂಕು ಬಸರಾಳು ಹೋಬಳಿ ಗ್ರಾಮ ಪಟ್ಟಣದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗಪ್ಪ ಹಾಗೂ ಬಸರಾಳು ಪಿ.ಎಸ್.ಐ. ಜೆ. ಜಯಗೌರಿ ಅವರಿಂದ. ಕೂಲಿ ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್ ವಿತರಣೆ ನಡೆಯಿತು.

ಬಹಳ ದಿನಗಳಿಂದ ಕೋವಿಡ -೧೯ ಮಹಾಮಾರಿ ಸಾಂಕ್ರಾಮಿಕ ರೋಗ ವಿಶ್ವದಾದ್ಯಂತ ಹರಡುತ್ತಿದ್ದು. ಅನೇಕ ಬಡ ಕುಟುಂಬಗಳು ಕೆಲಸವಿಲ್ಲದೇ ಮನೆಯಲ್ಲೇ ಕುಳಿತು ಕೊಳ್ಳುವ ಹಾಗಾಗಿದೆ ಇದನ್ನು ಅರಿತ ಬಸರಾಳು ಗ್ರಾಮ ಪಂಚಾಯಿತಿ ಮಾರ್ಗದರ್ಶನದಲ್ಲಿ ಬಸರಾಳು ಹೇಮಾವತಿ ಬಡಾವಣೆಯ ಹಿಂಭಾಗದಲ್ಲಿ ಮುರಾರ್ಜಿ ದೇಸಾಯಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಅದರ ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್ ವಿತರಿಸಲಾಯಿತು.

ಕಾಂಟ್ರಾಕ್ಟರ ಮೋಸ ಮಾಡಿ ಪರಾರಿಯಾಗಿರುವುದು ಬಸರಾಳು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಬಸರಾಳು ಪೊಲೀಸ್ ಠಾಣೆಯ ಆರಕ್ಷಕರಿಗೆ ತಿಳಿದು ಬಂದ ಕ್ಷಣ ನೊಂದವರಿಗೆ ಆಹಾರಧಾನ್ಯ ವಿತರಣೆ ಕಾರ್ಯಕ್ರಮ ನಡೆಯಿತು.

ಬೇರೆಬೇರೆ ರಾಜ್ಯಗಳಿಂದ ಬಂದಿರುವ ಬಡ ಜನರು ಇಲ್ಲಿ ಜಾಸ್ತಿ ಇದ್ದಾರೆ, ಆದರೆ ಕಂಟ್ರಾಕ್ಟರ್ ಮೋಸ ಮಾಡಿರುವುದು ಕೂಲಿ ಕಾರ್ಮಿಕರಿಗೆ ದುಃಖಕರ ಎಂದು ಬಸರಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಹಾಲಿಂಗಪ್ಪ ಹಾಗೂ ಪಿ.ಡಿಒ. ಎಚ್. ಸಿ. ಚಂದ್ರಶೇಖರ್ ಮತ್ತು ಬಸರಾಳು ಠಾಣೆಯ ಪಿ.ಎಸ್.ಐ. ಜೆ. ಜಯಾಗೌರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಮ್ಮುಖದಲ್ಲಿ ಮುಂಜಾಗೃತ ಕ್ರಮವಾಗಿ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ನಿರಂತರ ಸೇವೆಯಲ್ಲಿರುವ ಪೊಲೀಸ್ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಆರೋಗ್ಯ ಕೇಂದ್ರ ಡಾಕ್ಟರಗಳು ತಾಲೂಕ್ ತಾಸಿಲ್ದಾರರು ಕೂಲಿ ಕಾರ್ಮಿಕರಿಗೆ ಸಮಾದಾನ ಪಡಿಸಿ ದೈರ್ಯತುಂಬಿದ್ದಾರೆ.

error: