September 25, 2023

Bhavana Tv

Its Your Channel

ಗುಲಾಬಿ ನೀಡಿ, ಪುಷ್ಪಾರ್ಚನೆ ಮಾಡಿ, ಚಪ್ಪಾಳೆ ತಟ್ಟಿ, ಕೈಮುಗಿದು, ಜೈಕಾರ ಕೂಗಿ, ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಸೇವೆಗೆ ಪ್ರೋತ್ಸಾಹ.

ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದಲ್ಲಿ ಕೊರೊನೊ ವೈರಸ್ ಎಂಬ ಮಹಾಮಾರಿಯಿಂದ ಜನರಿಗೆ ಯಾವುದೇ ತೊಂದರೆ ಆಗದಂತೆ, ಜನರಿಗೋಸ್ಕರ ಹಗಲಿರುಳು ಪ್ರಾಮಾಣಿಕ ಹಾಗೂ ಮಾನವೀಯತೆ ದೃಷ್ಟಿಯಿಂದ ಕರ್ತವ್ಯ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ತಹಶೀಲ್ದಾರ್ ಪ್ರಮೋದ್ ಪಾಟೀಲ್, ಸರ್ಕಲ್ ಇನ್ಸ್ ಪೆಕ್ಟರ್ ರವೀಂದ್ರ, ಸಬ್ ಇನ್ಸ್ ಪೆಕ್ಟರ್ ಸುಮಾರಾಣಿ, ಆರೋಗ್ಯಾಧಿಕಾರಿ ಡಾಕ್ಟರ್ ಅರವಿಂದ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಪಾಂಡವಪುರ ಹೆಲ್ಪಿಂಗ್ ಬಾಯ್ಸ್ ಟೀಮ್ ಯುವಕರು ಅತ್ಯಂತ ಪ್ರೀತಿ, ಗೌರವದಿಂದ ಕೆಂಪು ಗುಲಾಬಿ ನೀಡಿ, ಪುಷ್ಪಾರ್ಚನೆ ಮಾಡಿ, ಚಪ್ಪಾಳೆ ತಟ್ಟಿ, ಕೈಮುಗಿದು, ಜೈಕಾರ ಕೂಗಿ, ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಸೇವೆಗೆ ಪ್ರೋತ್ಸಾಹಿಸಿದರು.

ಪಾಂಡವಪುರ ಹೆಲ್ಪಿಂಗ್ ಬಾಯ್ಸ್ ತಂಡದಲ್ಲಿ ಮಾಮು ಸುಸೈರಾಜ್, ವಿಶ್ವನಾಥ್, ಬಾಯ ಜೈನ್, ಬಾಲಾಜಿ, ಭರತ್ ಕುಮಾರ್ ಜೈನ್, ಲೋಕೇಶ್ ಜೈನ್, ಗೌತಮ್, ಬರ್ಕತ್, ವಿವೇಕ್, ರಾಜೇಶ್ ಜೈನ್, ವಿನೋದ್, ಅರವಿಂದ್, ರಮೇಶ್, ಪತ್ರಕರ್ತ ರಘುವೀರ್ ನೇತೃತ್ವದಲ್ಲಿ ಯುವಕರು ಒಗ್ಗೂಡಿ ಕಳೆದ ೧೫ ದಿನದಿಂದ ನಿರ್ಗತಿಕರಿಗೆ, ವಲಸಿಗರಿಗೆ, ಹಸಿವಿನಿಂದ ಬಳಲುತ್ತಿದ್ದವರಿಗೆ ಪ್ರತಿದಿನ ಮಧ್ಯಾಹ್ನ ಊಟ, ನೀರು, ಮಜ್ಜಿಗೆ ಹಾಗೂ ಸಂಜೆ ಟೀ, ಬಿಸ್ಕೇಟ್ ಅನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಲಾಕ್ ಡೌನ್ ಜಾರಿಯಲ್ಲಿ ಇರುವವರೆಗೂ ಈ ಸೇವಾ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ.

ಹೆಲ್ಪಿಂಗ್ ಬಾಯ್ಸ್ ಟೀಮ್ ವತಿಯಿಂದ ವಿಶೇಷವಾಗಿ ಕೊರೊನೊ ವೈರಸ್ ಭೀತಿ ಹಿನ್ನೆಲೆ ಲಾಕ್‌ಡೌನ್ ಆದೇಶದ ನಡುವೆ ಜನರಿಗೋಸ್ಕರ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ಹಾಗೂ ಅವರ ತಂಡಕ್ಕೆ ಪುಷ್ಪ ನೀಡಿ ಗೌರವಿಸಿ ಪ್ರೋತ್ಸಾಹಿಸಿದ್ದು ಅಧಿಕಾರಿಗಳಿಗೆ ಮತ್ತಷ್ಟು ಕರ್ತವ್ಯ ನಿರ್ವಹಿಸಲು ಸಹಕಾರ ಸಿಕ್ಕಿದಂತಾಗಿದೆ.

error: