December 22, 2024

Bhavana Tv

Its Your Channel

ಮುಕ್ತ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಉಪಾಧ್ಯಕ್ಷ ಮಿಥುನ್ ಜಿ ಪಾಟೀಲ್

ರೋಣ: ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಅಕ್ಷರ ಜ್ಞಾನ ಅವಶ್ಯಕ ಎಂದು ಪುರಸಭೆ ಉಪಾಧ್ಯಕ್ಷ ಮಿಥುನ್ ಜಿ ಪಾಟೀಲ್ ಹೇಳಿದರು

ಅವರು ಶನಿವಾರ ಪಟ್ಟಣದ ಶಾದಿ ಮಹಲ್‌ನಲ್ಲಿ ರಾಮ ರಹೀಂ ಅಸೋಶಿಯೇಶನ್ ಮಿತ್ರ ಮಂಡಳಿಯವರು ಏರ್ಪಡಿಸಿದ್ದ ಮುಕ್ತ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಸ್ಪರ್ಧಾತ್ಮಕ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಜ್ಞಾನ ವೃದ್ಧಿಗೊಳ್ಳುವುದರಲ್ಲಿ ಸಂದೇಹವಿಲ್ಲ. ಕಾರಣ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವಿಚಾರಗಳ ಗುಣಮಟ್ಟ ತೋರಲು ಇಂತಹ ಪರೀಕ್ಷೆಗಳಲ್ಲಿ ಭಾಗವಹಿಸುವುದು ಅತ್ಯಂತ ಸೂಕ್ತವಾಗಿದೆ. ಎಂದು ಹೇಳಿದರು.

ಉಪನ್ಯಾಸಕ ವಿ.ಪಿ.ಪಾಟೀಲ ಮಾತನಾಡಿ, ‘ಪ್ರಾಮಾಣಿಕತೆಯಿಂದ ಅಕ್ಷರವನ್ನು ಕಲಿತಾಗ ಭಯ ಪಡುವ ಅವಶ್ಯಕತೆಯಿಲ್ಲ. ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಸುಲಭವಲ್ಲ. ಕಾರಣ ನಿರಂತರ ಅಧ್ಯಯನದ ಫಲದಿಂದ ಮಾತ್ರ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ’ ಎಂದರು.

ರಾಮ ರಹೀಂ ಆಸೋಶಿಯೇಶನ್ ಮಿತ್ರ ಮಂಡಳಿಯ. ಎಸ್.ಎಂ.ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಉಮೇಶಗೌಡ ಸಂಗನಗೌಡ ಪಾಟೀಲ ಸೇರಿದಂತೆ ಅನೇಕರನ್ನು ಸನ್ಮಾನಿಸಿ ಗೌರವಿಸಲಾಯಿತು. ರಸ ಪ್ರಶ್ನೆ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷೆ ವಿದ್ಯಾ ದೊಡ್ಡಮನಿ, ವಿ.ಬಿ.ಸೋಮನಕಟ್ಟಿಮಠ, ಅಸ್ಲಂ ಕೊಪ್ಪಳ, ಕೆ.ನೂರಲ್ಲಾಖಾನ್, ಎ.ಐ.ಶೇಖ, ಯಲ್ಲಪ್ಪ ಕಿರೇಸೂರ, ಈರಣ್ಣ ಪಾಟೀಲ ಅನೇಕರು ಉಪಸ್ಥಿತರಿದ್ದರು. ಮುದೇನಗುಡಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ: ವೀರಣ್ಣ ರೋಣ

error: