December 22, 2024

Bhavana Tv

Its Your Channel

ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ

ಮಳವಳ್ಳಿ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಳವಳ್ಳಿ, ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಮಂಡ್ಯ ಮಕ್ಕಳ ಸಹಾಯವಾಣಿ ವಿಕಸನ ಮಂಡ್ಯ ಡಾನ್ ಬೋಸ್ಕೋ ಯುವ ಮಾರ್ಗ ಸಂಸ್ಥೆಯ ಕ್ರೀಯಾ ಯೋಜನೆಯ ಸಂಯುಕ್ತಾಶ್ರಯದಲ್ಲಿ ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆ, ಮಕ್ಕಳ ಹಕ್ಕುಗಳು ಮಕ್ಕಳ ಸಹಾಯವಾಣಿ 1098 ಮಕ್ಕಳ ಹಕ್ಕುಗಳಿಗೆ ಇರುವ ವ್ಯವಸ್ಥೆಗಳು ಹಾಗೂ ಮಕ್ಕಳ ಹಕ್ಕುಗಳ ಕ್ಲಬ್ ಗಳನ್ನು ರಕ್ಷಣೆ ಹಾಗೂ ಮುನ್ನಡೆಸುವುದರ ಬಗ್ಗೆ ಕಾರ್ಯಗಾರವನ್ನು ಟಿಎಲ್ಸಿ ಮಳವಳ್ಳಿಯಲ್ಲಿ ನಡೆಸಲಾಯಿತು.

ಈ ಕಾರ್ಯಕ್ರಮಕ್ಕೆ ಚಿಕ್ಕ ಸ್ವಾಮಿರವರು ಕ್ಷೇತ್ರಶಿಕ್ಷಣಾಧಿಕಾರಿಗಳು ಮಾತನಾಡಿ ಮಕ್ಕಳ ಹಕ್ಕುಗಳ ಬಗ್ಗೆ ಸ ವಿಸ್ತಾರವಾಗಿ ತಿಳಿಸಿದರು ಮತ್ತು ಬಾಲ ಕಾರ್ಮಿಕರು ತಾಲೂಕಲ್ಲಿ ಇದ್ದಾರೆ ಅವರುಗಳನ್ನು ಹುಡುಕಿ ಶಾಲೆಗೆ ಮರಳಿ ಸೇರಿಸುವುದು ಅದರ ಕೆಲಸ ನಮ್ಮ ಇಲಾಖೆಯಿಂದ ನಡೆಯುತ್ತಿದೆ ಎಂದರು ಮತ್ತು ಕರೋನಾ ಸಂದರ್ಭದಲ್ಲಿ ಬಾಲ್ಯವಿವಾಹಗಳು ನಡೆದಿದೆ ಎಂದರು ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿ ಗ್ರಾಮ ಪಂಚಾಯಿತಿ ಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ಇದೆ ಇದರ ಸದುಪಯೋಗವನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯವನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿ ಪ್ರತಿಯೊಂದು ಶಾಲೆಯಲ್ಲೂ ಕೂಡ ಕಡ್ಡಾಯವಾಗಿ ಮಕ್ಕಳ ಹಕ್ಕುಗಳ ಕ್ಲಬ್ ರಚನೆ ಮಾಡಿ ಸಮಯ ವರದಿಗಳನ್ನು ಮಾಡಬೇಕು ಸಮಸ್ಯೆಗಳು ಕಂಡುಬAದಲ್ಲಿ ಮಕ್ಕಳ ಮೂಲಕ ಪತ್ರಗಳನ್ನು ಬರೆದು ಸಂಬAಧಪಟ್ಟ ಇಲಾಖೆಗಳಿಗೆ ಕೊಡಿಸುವುದು ಅದರ ಜೊತೆಗೆ ಸರ್ಕಾರಿ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯದ ಬಗ್ಗೆ ಎರಡು ದಿವಸದ ಗಳಲ್ಲಿ ಇಂಜಿನಿಯರ್ ಮುಖಾಂತರ ಎಸ್ಟಿಮೆಂಟ್ ಮಾಡಿಸಿ ಇಲಾಖೆಗೆ ಸಲ್ಲಿಸಿದರೆ ಅದರ ಹಣವನ್ನು ಬಿಡುಗಡೆ ಮಾಡುತ್ತವೆ ಎಂದು ಶಿಕ್ಷಕರಿಗೆ ಸಲಹೆ ನೀಡಿದರು ಮಕ್ಕಳಿಗೆ ಶುಭ ಹಾರೈಸಿದರು ತಮ್ಮ ಬಾಲ್ಯ ಜೀವನದ ನೆನಪನ್ನು ಮೆಲುಕು ಹಾಕಿದರು

ಮಳವಳ್ಳಿ, ಯೋಗೇಶ್ ರವರು ಕ್ಷೇತ್ರ ಸಂಪನ್ಮೂಲ ಅಧಿಕಾರಿ, ಫಾದರ್ಸ್ ಸಜಿ ಜಾರ್ಜ್ ಡಾನ್ ಬೋಸ್ಕೋ ನಿರ್ದೇಶಕರು ಮಾತನಾಡಿ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಅರಿವು ಮೂಡಿಸುವ ಜವಾಬ್ದಾರಿಯನ್ನು ಮಂಡ್ಯ ಮತ್ತು ರಾಮನಗರದಲ್ಲಿ ನಮಗೆ ನೀಡಿರುತ್ತಾರೆ ಅದರಂತೆ ಜಿಲ್ಲೆಯಾದ್ಯಂತ ಶಾಲೆಗಳಲ್ಲಿ ಅರಿವು ಮೂಡಿಸುತ್ತಾ ಬರುತ್ತಿದ್ದು ಎಲ್ಲ ಶಿಕ್ಷಕರು ಮತ್ತು ಮಕ್ಕಳು ಬೆರೆತು ಕಲಿಕೆಗಳನ್ನು ಮನವರಿಕೆ ಮಾಡಿಕೊಳ್ಳಬೇಕಾಗಿರುವುದರಿಂದ ಇಂತಹ ಕಾರ್ಯಕ್ರಮವನ್ನು ಅರಿವು ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು

ಮಕ್ಕಳ ಡಾನ್ ಬೋಸ್ಕೋ ಸಂಸ್ಥೆಯ ನಿರ್ದೇಶಕರು, ಅಮೃತ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಲಯನ್ ಪತ್ರಕರ್ತ ಲೋಕೇಶ್ , ಮಕ್ಕಳ ಸಹಾಯವಾಣಿಯ ಸಂಯೋಜಕರಾದ ವೀರೇಂದ್ರ, ಕ್ರೀಮ್ ಯೋಜನೆಯ ಸಂಯೋಜಕರಾದ ರವಿ , ಅಮೃತ ಲಯನ್ಸ್ ಪದಾಧಿಕಾರಿ ಲಯನ್ ಬೋರೇಗೌಡ ತಾಲುಕ್ ಪಂಚಾಯಿತಿಯ
ಉಪ ನಿರ್ದೇಶಕರಾದ ಜಯಪ್ರಕಾಶ್ , ಅಜೀಮ್ ಪ್ರೇಮ್ಜಿ ಸಂಸ್ಥೆಯ ಬಸವರಾಜ್ ಹಾಗೂ 36 ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ವರದಿ: ಲೋಕೇಶ ಮಳವಳ್ಳಿ

error: