April 26, 2024

Bhavana Tv

Its Your Channel

ಮಂಡ್ಯ ಅಮೃತ ಲಯನ್ಸ್ ಸಂಸ್ಥೆಯವರಿOದ ವಿವಿಧ ಕಾರ್ಯಕ್ರಮ

ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಪ್ರಾಂತ್ಯ ೯ ವಲಯ-೧ ೩೧೭ಎ ಜಿಲ್ಲೆ ಕೆರೆಗೋಡು ಪಂಚಾಯತ್ ಅಭಿವೃದ್ಧಿ ಇಲಾಖೆ ಇವರ ಸಹಾಯದೊಂದಿಗೆ ಕೆರಗೋಡು ಎಜುಕೇಶನ್ ಪದವಿಪೂರ್ವ ಕಾಲೇಜ್ ಹಾಗೂ ಪ್ರೌಢಶಾಲೆ ಮತ್ತು ಕೆರಗೋಡು ಕ್ಲಸ್ಟರ್ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗಳ ಮಕ್ಕಳಿಗೆ ಭಾರತ ಸಂವಿಧಾನದ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಮಂಡ್ಯ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಔಷಧ ವಿತರಣೆ ಹಾಗೂ ಕೆರಗೋಡು ಕ್ಲಸ್ಟರ್ ಶಾಲೆಗಳಿಗೆ ಸಸಿ ವಿತರಣೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಉಚಿತವಾಗಿ ಪುಸ್ತಕ ವಿತರಣೆ ಮತ್ತು ಶಾಲೆಯ ಲೈಬ್ರರಿಗೆ ಮಕ್ಕಳಿಗೆ ಪುಸ್ತಕಗಳ ವಿತರಣೆ ಕಾರ್ಯಕ್ರಮ.ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಶನಿವಾರ ಗ್ರಾಮಾಂತರ ಸರ್ಕಾರಿ ಪದವಿ ಪೂರ್ವ ಕಾಲೇಜು ಕೆರೆಗೋಡು ಆವರಣದಲ್ಲಿ ನಡೆಯಿತು

ಉದ್ಘಾಟನೆ ಮಾಡಿ ಲಯನ್ ಕೆಎಲ್ ರಾಜಶೇಖರ್ ಜಿಲ್ಲಾ ಅತಿಥಿ ೩೧೭ ಎ ಮಾತನಾಡಿ ಇಂತಹ ಉಪಯುಕ್ತವಾಗಿರುವ ಕಾರ್ಯಕ್ರಮವನ್ನು ಲಯನ್ಸ್ ಸಂಸ್ಥೆ ಮಾಡುತ್ತಿವುದು ಶ್ಲಾಘನೀಯ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳು ಬಹಳ ಅವಶ್ಯಕತೆಯಿದೆ ಇವತ್ತಿನ ದಿನಮಾನಗಳಲ್ಲಿ ಸಂವಿಧಾನದ ಕುರಿತು ಮತ್ತು ಆರೋಗ್ಯ ತಪಾಸಣೆ ಹಾಗೂ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಉತ್ತಮವಾದ ಕೆಲಸ ಇದನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು

ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಕಾಳರೀಯ ಮಾತನಾಡಿ ಕೊರೋನಾ ಸಂದರ್ಭದಲ್ಲಿ ಇಂತಹ ಉಪಯುಕ್ತ ಕಾರ್ಯಕ್ರಮ ಮಾಡುತ್ತಿರುವುದು ಮತ್ತು ಆಯೋಜಿಸುವುದು ಮಕ್ಕಳಿಗೆ ಬಹಳ ಅನುಕೂಲವಾಗಿದೆ ಏಕೆಂದರೆ ಪ್ರಸ್ತುತ ದಿನದ ಅವಶ್ಯಕ ವಿಷಯವನ್ನು ವಿಶೇಷವಾಗಿ ಕೆರಗೋಡು ಕ್ಲಸ್ಟರ್ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಮತ್ತು ಆರೋಗ್ಯ ತಪಾಸಣೆ ಲೈಬ್ರರಿಗೆ ಮಕ್ಕಳ ಹಕ್ಕುಗಳ ಕುರಿತು ಅರಿವು ಮತ್ತು ಪುಸ್ತಕ ಇರುವಂತದ್ದು ಉತ್ತಮವಾದ ಕೆಲಸವಾಗಿರುವುದರಿಂದ ನನಗೆ ಎಷ್ಟೇ ಕೆಲಸವಿದ್ದರೂ ಇಂಥ ಒಳ್ಳೆಯ ಕಾರ್ಯಕ್ರಮಕ್ಕೆ ಬರಲು ಸಂತೋಷವಾಗಿತ್ತು ಮಂಡ್ಯ ಅಮೃತ ಲಯನ್ಸ್ ಸಂಸ್ಥೆಯು ಇಂಥ ಹತ್ತಾರು ಹಲವಾರು ಕಾರ್ಯಕ್ರಮವನ್ನು ಏಕಕಾಲದಲ್ಲಿ ಮಾಡಿಕೊಂಡು ಬರುವಂತಹದ್ದು ಶ್ಲಾಘನೀಯ ಮತ್ತು ಉಪಯುಕ್ತ ಎಂದು ಬಣ್ಣಿಸಿ ಸರ್ಕಾರಿ ಶಾಲಾ ಮಕ್ಕಳಿಗೆ ಶಿಸ್ತು ಸಹನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಬಹಳ ಮುಖ್ಯವೆಂದು ಕಿವಿಮಾತು ಹೇಳಿದರು ಬಹಳ ಉಪಯುಕ್ತವಾದ ಕಾರ್ಯಕ್ರಮ ಎಂದು ಸಂತೋಷಪಟ್ಟರು

ಇದೇ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಕೆರಗೋಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಸ್ಮಿತ ಮಾತನಾಡಿ ನಾವು ಸಹ ಪ್ರಾಥಮಿಕ ಪ್ರೌಢಶಾಲಾ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು ಆದ್ದರಿಂದ ಇಂತಹ ಕಾರ್ಯಕ್ರಮಗಳು ಸರ್ಕಾರಿ ಶಾಲಾ ಮಕ್ಕಳಿಗೆ ಅವಶ್ಯಕವಾಗಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲಾ ಮಕ್ಕಳಿಗೆ ಒತ್ತಡ ಇಲ್ಲ ಆದರೆ ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಮತ್ತು ಪೋಷಕರಿಗೆ ಒತ್ತಡವನ್ನು ಹಾಕುತ್ತಾರೆ ಸರ್ಕಾರಿ ಶಾಲಾ ಮಕ್ಕಳು ಗಳು ಯಾವುದೇ ಒತ್ತಡ ಇಲ್ಲದೆ ಎಲ್ಲರ ಜೊತೆ ಬೆರೆತು ಉತ್ತಮವಾದ ಆರೋಗ್ಯಕರವಾದ ವಿದ್ಯಾಭ್ಯಾಸವನ್ನು ಮಾಡುತ್ತಾರೆ ಆದ್ದರಿಂದ ಗ್ರಾಮೀಣ ಪ್ರದೇಶಕ್ಕೆ ಇಂತಹ ಉಪಯುಕ್ತ ವಾದಂತಹ ಕಾರ್ಯಕ್ರಮ ಅವಶ್ಯಕತೆಯಾಗಿದೆ ಎಂದು ಅಭಿಪ್ರಾಯಪಟ್ಟರು ಬಾಲ್ಯದ ಜೀವನವನ್ನು ಮೆಲಕು ಹಾಕಿದರು

ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳನ್ನು ಕೆರೆಗೋಡು ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಿ ಯವರು ಪುರಸ್ಕರಿಸಿದರು ನಂತರ ವಿಜೇತರಾದ ಮಕ್ಕಳಿಗೆ ಲಯನ್ ನಿಂಗೇಗೌಡ ಜಿಲ್ಲಾ ಹೆಚ್ಚುವರಿ ಸಂಪುಟ ಖಜಾಂಚಿ ೩೧೭ ಎ ನೆನಪಿನ ಕಾಣಿಕೆ ವಿತರಿಸಿದರು ನಂತರ ಜಿಲ್ಲಾ ಆಯುಷ್ ಇಲಾಖೆಯ ಡಾ ಲಯನ್ ಮಂಜು ಗುತ್ತಲು ಆಯುಷ್ ವೈದ್ಯಾಧಿಕಾರಿಗಳು ಸರ್ಕಾರಿ ಶಾಲಾ ಎಲ್ಲಾ ಮಕ್ಕಳಿಗೂ ಆರೋಗ್ಯ ತಪಾಸಣೆ ಮಾಡಲಾಯಿತು ನಂತರ ಎಲ್ಲರಿಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಬೂಸ್ಟರ್ ನ್ನು ವಿತರಿಸಲಾಯಿತು

ಇದೇ ಸಂದರ್ಭದಲ್ಲಿ ಡಾನ್ ಬೋಸ್ಕ್ ಮಕ್ಕಳ ರಕ್ಷಣಾ ಘಟಕ ರವಿ ರವರು ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಿ ಶಾಲಾ ಲೈಬ್ರೆರಿಗೆ ಮಕ್ಕಳ ಹಕ್ಕುಗಳ ಪುಸ್ತಕವನ್ನು ವಿತರಿಸಿದರು ಪ್ರಾಂಶುಪಾಲರಾದ ಮಂಜುನಾಥ್ ರವರು ಕಾರ್ಯಕ್ರಮ ಕುರಿತು ಮಾತನಾಡಿದರು ಮುಖ್ಯಶಿಕ್ಷಕ ಸಿದ್ದರಾಜು ಮಾತನಾಡಿ ಕಾರ್ಯಕ್ರಮವನ್ನು ಬಣ್ಣಿಸಿದರು ನಂತರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಲಯನ್ ಪತ್ರಕರ್ತ ಎಂ ಲೋಕೇಶ್ ಅಧ್ಯಕ್ಷರು ಅಮೃತ ಲಯನ್ಸ್ ಸಂಸ್ಥೆ ಮಂಡ್ಯ ಮಾತನಾಡಿ ಎಲ್ಲರಿಗೂ ಶುಭಾಶಯಗಳು ತಿಳಿಸಿ ಈ ಎಲ್ಲಾ ಕಾರ್ಯಕ್ರಮಗಳನ್ನು ಯಾವುದೇ ರಾಜಕೀಯಕ್ಕೆ ಆಗಲಿ ಯಾವುದೇ ದುರುದ್ದೇಶಕ್ಕಾಗಿ ಆಗಲಿ ಮಾಡುತ್ತಿಲ್ಲ ಸರ್ಕಾರಿ ಶಾಲಾ ಮಕ್ಕಳನ್ನು ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಿದರು ಇನ್ನಷ್ಟು ಮಕ್ಕಳು ಅವರಂತೆ ಪ್ರೇರಣೆಯಾಗುತ್ತದೆ ಮತ್ತು ಸಮಾಜದ ದೃಷ್ಟಿಯಲ್ಲಿ ಇಂದಿನ ಪ್ರಜೆ ಮುಂದಿನ ಪ್ರಜೆ ಯಾಗಿ ಶಾಲೆಗೆ ತಂದೆ-ತಾಯಿಗಳಿಗೆ ಮತ್ತು ಗ್ರಾಮಕ್ಕೆ ಗುರುಹಿರಿಯರಿಗೆ ಮತ್ತು ರಾಜ್ಯಕ್ಕೆ ದೇಶಕ್ಕೆ ಒಳ್ಳೆಯ ಹೆಸರು ತಂದುಕೊಟ್ಟು ಸದೃಢ ಸಮಾಜದಲ್ಲಿ ಉತ್ತಮವಾದ ಪ್ರಜೆಯಾಗಿ ಎಂದು ಶುಭ ಹಾರೈಸಿದರು

ಕಾರ್ಯಕ್ರಮ ದಲ್ಲಿ ಲಯನ್ ಮಂಜುಳಾ ಗ್ರಾಮಪಂಚಾಯಿತಿ ಎಲ್ಲಾ ಸದಸ್ಯರು ಹಾಗೂ ಎಲ್ಲಾ ಶಾಲೆಯ ಶಿಕ್ಷಕರು ಪೋಷಕರು ವಿದ್ಯಾರ್ಥಿವೃಂದ ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಮತ್ತು ಅಮೃತ ಲಯನ್ ಸಿನ ಪದಾಧಿಕಾರಿಗಳು ಭಾಗವಹಿಸಿದರು ಕಾರ್ಯಕ್ರಮ ಯಶಸ್ವಿಯಾಯಿತು

ವರದಿ: ಲೋಕೇಶ ಮಳವಳ್ಳಿ

error: