
ಭಟ್ಕಳ: ಕಂದಾಯ ಇಲಾಖೆ ದಾಖಲೆ ಮನೆಬಾಗಿಲಿಗೆ ಎನ್ನುವ ಕಾರ್ಯಕ್ರಮದಲ್ಲಿ ನಾವು ಕೇಳದೆ ಇದ್ದರೂ ಆದಾಯ ಪ್ರಮಾಣದ ಪತ್ರದ ಜೊತೆಗೆ ಪ್ರವರ್ಗ 1 ಪ್ರಮಾಣ ಪತ್ರವನ್ನು ನೀಡುತ್ತಿರುವದು ಕಾನೂನಿನ ಉಲ್ಲಂಘನೆ ಎಂದು ಆರೋಪಿಸಿದ ಮೊಗೇರ ಸಮಾಜದ ಸದಸ್ಯರು ಕೂಡಲೆ ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಎಸ್ ಅವರಿಗೆ ಸೋಮವಾರ ಮನವಿ ನೀಡಿ ಆಗ್ರಹಿಸಿದರು.
ತಾಲೂಕಿನ ಕೆಲವು ಪಂಚಾಯಿತಿ ವ್ಯಾಪ್ತಿಯಲ್ಲಿ ಮೊಗೇರ ಸಮಾಜದ ಮನೆಮನೆಗೆ ತೆರಳಿ ಕಂದಾಯ ಇಲಾಖೆ ದಾಖಲೆಗಳ ಜೊತೆ ಪ್ರವರ್ಗ 1 ಪ್ರಮಾಣ ಪತ್ರವನ್ನು ನೀಡುತ್ತಿದ್ದಾರೆ. ಅದರೊಂದಿಗೆ ನಮ್ಮ ಸಹಿಯನ್ನು ಪಡೆದುಕೊಳ್ಳುತ್ತಿದ್ದಾರೆ. ನಾವೂ ಮೂಲತಃ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ನಮ್ಮಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವಿದೆ. ಆದರೂ ಪ್ರವರ್ಗ 1ರ ಪ್ರಮಾಣ ಪತ್ರ ವಿತರಣೆ ಮಾಡುತ್ತಿದ್ದಾರೆ. ಇದು ಕಾನೂನಿನ ಉಲ್ಲಂಘನೆಯಾಗಿದ್ದು ಇದಕ್ಕೆ ನಮ್ಮ ವಿರೋಧವಿದೆ. ಕೂಡಲೆ ಪ್ರವರ್ಗ1 ಪ್ರಮಾಣ ಪತ್ರವನ್ನು ಹಿಂಪಡೆದು, ನಮಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡಬೇಕು ಎಂದು ಮೊಗೇರ ಸಮಾಜದ ಉಪಾಧ್ಯಕ್ಷ ದಾಸಿ ಮೊಗೇರ, ಪುಂಡಲೀಕ ಹೆಬಳೆ, ಭಾಸ್ಕರ ದೈಮನೆ, ಕೆ.ವಿ ಮೊಗೇರ, ಶ್ರೀಧರ ಮೊಗೇರ, ಭಾಸ್ಕರ ಮೊಗೇರ, ಯಾದವ ಮೊಗೆರ, ಈಶ್ವರ ಮೊಗೇರ, ಸೋಮನಾಥ ಮೊಗೆರ ಇತರರು ಇದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ