December 22, 2024

Bhavana Tv

Its Your Channel

ತುಂಬು ಗರ್ಭಿಣಿಯ ಕುಟುಂಬಕ್ಕೆ ಶುದ್ಧವಾದ ಕುಡಿಯುವ ನೀರು ಒದಗಿಸುವಂತೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಿಂದ ಮನವಿ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿ ಸೇರಿದ ಆಲೂರು ಗ್ರಾಮ ಪಂಚಾಯಿತಿಯ ಮೆಣಸ ಗ್ರಾಮದ ಷಣ್ಮುಖ ಎಂಬುವವರ ಮನೆಗೆ ಪಂಚಾಯಿತಿಯಿoದ ನೀರು ಬರದೆ ೫ ವರ್ಷಗಳು ಕಳೆದಿದೆ ಇವರ ಕುಟುಂಬದಲ್ಲಿ ೮ತಿಂಗಳ ತುಂಬು ಗರ್ಭಿಣಿ ಸಹ ಇರುತ್ತಾರೆ. ಸರ್ಕಾರದಿಂದ ನೀರಿನ ವ್ಯವಸ್ಥೆಗೆ ಲಕ್ಷಗಟ್ಟಲೆ ಹಣ ಹರಿದು ಬಂದರೂ ಈ ಆಲೂರು ಗ್ರಾಮ ಪಂಚಾಯಿತಿಯವರು ಏನು ಮಾಡುತ್ತಿದ್ದಾರೆ ಎಂದು ಕರವೇ ಪ್ರಶ್ನಿಸಿದ್ದಾರೆ. .. ಇಷ್ಟು ವರ್ಷದವರೆಗೂ ಈ ಕುಟುಂಬದವರು ತುಂಬಾ ದೂರದಿಂದಲೇ ನೀರು ಹೊತ್ತು ಹೊತ್ತು ಸಾಕಾಗಿರುತ್ತದೆ . ಈ ಕುಟುಂಬದಿAದ ಆಲೂರು ಪಂಚಾಯಿತಿಯವರಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನ ಕಾಣಲಿಲ್ಲ ಹಾಗಾಗಿ ಈ ಕುಟುಂಬದಿAದ ಕರ್ನಾಟಕ ರಕ್ಷಣಾ ವೇದಿಕೆಯ ಮೊರೆ ಹೋಗಿದ್ದರು . ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಖುದ್ದಾಗಿ ಕುಟುಂಬವನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ನೋಡಿ ಈ ಕುಟುಂಬದ ಮುಖ್ಯಸ್ಥರಾದ ಷಣ್ಮುಖ ರವರನ್ನು ಆಲೂರು ಗ್ರಾಮ ಪಂಚಾಯಿತಿಗೆ ಕರೆದುಕೊಂಡು ಹೋಗಿ ಮನವಿ ಪತ್ರವನ್ನು ಕೊಡಲಾಗಿದೆ ..


ಆಲೂರು ಪಂಚಾಯಿತಿಯವರು ನೊಂದ ಕುಟುಂಬದವರಿಗೆ ನೀರಿನ ವ್ಯವಸ್ಥೆ ಮಾಡ ಕೋಡಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಲಾಗಿದೆ .ಈ ಮನವಿಗೆ ಸ್ಪಂದಿಸದೇ ಹೋದರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಆಲೂರು ಪಂಚಾಯಿತಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ತಿಳಿಸುತ್ತಿದ್ದೇವೆ..ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ಕರವೇ ಫ್ರಾನ್ಸಿಸ್ ಡಿಸೋಜಾ ಮತ್ತು ಶನಿವಾರಸಂತೆ ಹೋಬಳಿ ಮಹಿಳಾ ಘಟಕದ ಅಧ್ಯಕ್ಷರಾದ ಕುಸುಮ ರವರು ಹಾಗೂ ಶನಿವಾರಸಂತೆ ವಿದ್ಯಾರ್ಥಿ ಘಟಕದ ಘಟಕದ ಅಧ್ಯಕ್ಷರಾದ ದೀಕ್ಷಿತ್ ಹಾಗೂ ಷಣ್ಮುಖ ಮುಂತಾದವರು ಭಾಗವಹಿಸಿದ್ದರು..

error: