ಮಂಡ್ಯ ಅಮೃತ ಲಯನ್ಸ್ ಮತ್ತು ಹೀರೋ ಎಲೆಕ್ಟ್ರಿಕಲ್ ಇ ಮಾಂಡವ್ಯ ಮೋಟರ್ಸ್ ಮಂಡ್ಯ ಹಾಗೂ ದೇವರಾಜ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯ ಘಟಕ ಒಂದು ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿ ಹಾಗೂ ರಾಷ್ಟ್ರೀಯ ಆರೋಗ್ಯ ದಿನಾಚರಣೆ ಅಂಗವಾಗಿ ಕೋರೋನಾ ವಾರಿಯಸ್‌ಗಳಾದ ಆಶಾ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮ ಹಾಗೂ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಂಬೇಡ್ಕರ್ ಅವರ ಕುರಿತು ಉಪನ್ಯಾಸ ಕಾರ್ಯಕ್ರಮ ದಿನಾಂಕ 14-4- 22 ರಂದು ಗುರುವಾರ ¸ ದೇವರಾಜ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯ ಘಟಕ 1 ಜಿಲ್ಲಾಪಂಚಾಯಿತಿ ಎದುರು ಉದ್ಘಾಟಿಸಿ ಮಾತನಾಡಿದ ಮಾಜಿ ರಾಜ್ಯಪಾಲರಾದ ಡಾ ಲಯನ್ ವಿ ನಾಗರಾಜು ಬೈರಿವರು ಇಂದಿನ ದಿನಮಾನಗಳಲ್ಲಿ ಉಪನ್ಯಾಸ ಕಾರ್ಯಕ್ರಮ ಹಾಗೂ ಜಯಂತಿ ಕಾರ್ಯಕ್ರಮಗಳು ವಿದ್ಯಾರ್ಥಿ ಸಮ್ಮುಖದಲ್ಲಿ ನಡೆದರೆ ಉತ್ತಮ ಎಂದು ತಿಳಿಸಿದರು ಮತ್ತು ಅಂಬೇಡ್ಕರ್ ಅವರ ಬಗ್ಗೆ ಸವಿಸ್ತಾರವಾಗಿ ತಿಳಿಸಿ ನಾವು ಇವತ್ತು ಮಾತನಾಡುತ್ತಿದ್ದೀವಿ ಅಂದರೆ ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣ ಎಂದು ತಿಳಿಸಿದರು
ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ವಿನಯ್ ಕುಮಾರ್ ಎಂ ಇ.ಮಾಂಡವ್ಯ ಮೋಟರ್ಸ್ ಮಾಲೀಕರು. ಅಂಬೇಡ್ಕರ್ ಅವರ ಬಗ್ಗೆ ಮತ್ತು ಅವರು ನೀಡಿದ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದರು ನಂತರ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾಕ್ಟರ್ ಧನಂಜಯ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ ಕಾಲೇಜಿನ ವಿದ್ಯಾರ್ಥಿಗಳು ಕಾಲು ವಯಸ್ಸಿನಲ್ಲಿ ಸರಿಯಾಗಿ ವಿದ್ಯಾಭ್ಯಾಸ ಮಾಡಿದರೆ ಮುಕ್ಕಾಲು ವಯಸ್ಸಿನಲ್ಲಿ ನೆಮ್ಮದಿಯಿಂದ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು ಮತ್ತು ಕೋರೋನಾ ಬಗ್ಗೆ ಜನರಿಗೆ ಮನುಷ್ಯ-ಮನುಷ್ಯರ ಬಗ್ಗೆ ತಿಳಿಸಿಕೊಟ್ಟಿದೆ ಆದರಿಂದ ಕೇವಲ ಸಂತೋಷಕ್ಕಾಗಿ ಭಾಗಿಯಾಗದೆ ದುಃಖದಲ್ಲಿ ಸಹ ಭಾಗಿಯಾಗ ಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೃತ ಲಯನ್ಸ್ ಸಂಸ್ಥೆ ಅಧ್ಯಕ್ಷ ಲಯನ್ ಎಂ ಲೋಕೇಶ್ ಮಾತನಾಡಿ ಭಾರತರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 131ನೇ ಜಯಂತಿಯ ಶುಭಾಶಯಗಳು ಮತ್ತು ರಾಷ್ಟ್ರೀಯ ಆರೋಗ್ಯದ ಶುಭಾಶಯಗಳು ತಿಳಿಸಿದರು ವಿದ್ಯಾರ್ಥಿಗಳು ಯಾವುದೇ ವಿಷಯವಾದ ಸ್ಪರ್ಧಿಗಳಿಗೆ ಭಾಗವಹಿಸುವುದು ತಮ್ಮೆಲ್ಲರ ಹಕ್ಕು ಮತ್ತು ಗ್ರಾಮೀಣ ಪ್ರದೇಶದಿಂದ ಬಂದಿರುವAತಹ ವಿದ್ಯಾರ್ಥಿಗಳು ಶಾಲೆಗೆ ಗುರುವಿಗೆ ಮತ್ತು ತಂದೆತಾಯಿಗಳಿಗೆ ದೇಶಕ್ಕೆ ಮತ್ತು ರಾಜ್ಯಕ್ಕೆ ಒಳ್ಳೆಯ ಕೀರ್ತಿ ತಂದು ಕೊಡಿ ಅಂತ ಹೇಳಿ ಮುಂಬರುವ ದಿನದಲ್ಲಿ ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದು ತಿಳಿಸಿದರು
ವಸತಿ ನಿಲಯದ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಪಿ ಇಎಸ್ ಕಾನೂನಿನ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಯೋಗೇಶ್ವರ್ ಅವರು ಉಪನ್ಯಾಸ ನೀಡಿದರು ಕಾರ್ಯಕ್ರಮದಲ್ಲಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯದ ಮೇಲ್ವಿಚಾರಕರಾದ ರವಿ ಕಾಂಗ್ರೆಸ್ ಮುಖಂಡರಾದ ಜಯಲಕ್ಷ್ಮಿ, ಲಯನ್ ರಾಜೇಶ್ವರಿ ಹಾಗೂ ಅಮೃತ ಲೈಸೆನ್ಸಿನ ಪದಾಧಿಕಾರಿಗಳು ವಸತಿನಿಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದರು
ವರದಿ: ಲೋಕೇಶ ಮಳವಳ್ಳಿ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ