December 22, 2024

Bhavana Tv

Its Your Channel

ಬಳಗಾನೂರ ಗ್ರಾಮದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತ್ಯೋತ್ಸವ

ಗದಗ :- .ಬಳಗಾನೂರು ಗ್ರಾಮದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅಭಿಮಾನಿ ಅನುಯಾಯಿಗಳ ಬಳಗ, ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಗದಗ ತಾಲೂಕಾ ಬಳಗಾನೂರ ಗ್ರಾಮದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತ್ಯೋತ್ಸವವನ್ನು ಆಚರಿಸಲಾಯಿತು.

  ಸಮಾರಂಭವನ್ನು ದೀನ ದಲಿತರ ಆಶಾಕಿರಣ ಬಡವರ ಬಂಧು ರಾಜ್ಯ ಲೋಕೋಪಯೋಗಿ ಇಲಾಖೆ ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದ  ಸಿ ಸಿ.ಪಾಟೀಲ  ಉದ್ಘಾಟಿಸಿದರು.
    ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ  ಸಚಿವರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ನೆಲದ ಶೋಷಿತರ ಬಾಳಿನಲ್ಲಿ 

ಬೆಳಕನ್ನು ಚೆಲ್ಲಿದ ಮಹಾನ್ ಚೇತನ.ಅಂಬೇಡ್ಕರ್ ಅವರು ಸಂವಿಧಾನದಡಿಯಲ್ಲಿ ದಲಿತರಿಗಷ್ಟೇ ಅಲ್ಲದೇ ಜಾತಿ ಜನಸಂಖ್ಯಾವಾರು ಮೀಸಲಾತಿ ಕಲ್ಪಿಸಿ
ಸರ್ವಜನಾಂಗದ ಅಭಿವೃದ್ದಿಗಾಗಿ ಉತ್ತೇಜನ ನೀಡಿದ್ದಾರೆ.. ದಲಿತ ಸಮುದಾಯದ ಹಿರಿಯರು ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಬೇಕು ಯುವ ಸಮುದಾಯ ಶಿಕ್ಷಣವಂತರಾಗಿ ಸುಶೀಕ್ಷಿತ ಸಮುದಾಯ ನಿರ್ಮಿಸಲು ಕಂಕಣಬದ್ದರಾಗಬೇಕೆAದು ಕರೆ ನೀಡಿದರು.
ದಲಿತ ಜನಾಂಗದ ಬಂಧುಗಳು ವಿವಿಧ ಇಲಾಖೆಯಲ್ಲಿ ಸಿಗುವಂತಹ ಸರ್ಕಾರದ ಯೋಜನೆಗಳನ್ನು ಪಡೆದುಕೊಂಡು ಸ್ವಾವಲಂಭಿಗಳಾಗಬೇಕು.ಸರ್ಕಾರ ದಲಿತರ ಅಭಿವೃದ್ದಿಗೆ ಸಾಕಷ್ಟು ಯೋಜನೆಯನ್ನು ಜಾರಿಗೊಳಿಸಿ ದಲಿತರ ಅಭಿವೃದ್ದಿಗೆ ಸರ್ಕಾರ ಬದ್ದವಾಗಿದೆ ಎಂದರು.ಕಳೆದ ಸಾಲಿನಲ್ಲಿ ನರಗುಂದ ಮತಕ್ಷೇತ್ರದ ವಿವಿಧ ಗ್ರಾಮದ ದಲಿತ ಕಾಲೋನಿಗಳಲ್ಲಿ ಸಿ.ಸಿ.ರಸ್ತೆ ಗಟಾರದಂತಹ ಮೂಲಭೂತ ಸೌಕರ್ಯವನ್ನು ಒದಗಿಸಿ ದಲಿತರ ಪ್ರಗತಿಗೆ ಉತ್ತೇಜಿಸುತ್ತಿದ್ದೇವೆ ಮುಂಬರುವ ದಿನಮಾನದಲ್ಲಿಯೂ ಸಹಿತ ದಲಿತರ ಅಭಿವೃದ್ದಿಗಾಗಿ ಹೆಚ್ಚಿನ ಆದ್ಯತೆ ನೀಡುತ್ತೇನೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಕೃಷ್ಣಪ್ಪ ಪಡೇಸೂರ ವಹಿಸಿದ್ದರು ಉಪನ್ಯಾಸಕರಾಗಿ ಪ್ರೊ.ಸತೀಶ ಪಾಸಿ ಆಗಮಿಸಿದ್ದರು ಈ ಸಂದರ್ಭದಲ್ಲಿ ಬಿಜೆಪಿ ನರಗುಂದ ಮತಕ್ಷೇತ್ರದ ಯುವ ನಾಯಕರಾದ ಉಮೇಶಗೌಡ ಪಾಟೀಲ, ,ವಸಂತ ಮೇಟಿ, ನಿಂಗಪ್ಪ ಮಣ್ಣೂರ, ಮಲ್ಲನಗೌಡ ಪಾಟೀಲ , ಶೇಖಣ್ಣ ಅಗಸಿಮನಿ, ಚಂದ್ರಶೇಖರ ಹರಿಜನ, ಶರಣು ಬರಶೆಟ್ಟಿ, ಬಸವರಾಜ ಮುಳ್ಳಾಳ, ಶರಣು ಚಲವಾದಿ, ಮುತ್ತು ನಂದಿ, ಹನಮಂತ ಚಲವಾದಿ ಅನೀಲ ಪೂಜಾರ, ಮಹೇಶ ದಾಸರ, ಮುಂತಾದವರು ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ರೋಣ

error: