ಕಿಕ್ಕೇರಿ:ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದು ನಾನು ಹಣ ಮಾಡುವುದಕ್ಕೆ ಪ್ರಾಧಾನ್ಯತೆ ನೀಡದೇ ಜನರ ಮಧ್ಯೆ ಇದ್ದು ಅವರುಗಳ ಪ್ರೀತಿ, ವಿಶ್ವಾಸಗಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು
ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಚಿಕ್ಕತಾರಹಳ್ಳಿ ಗ್ರಾಮದಲ್ಲಿ ನೂತನವಾಗಿ ಲೋಕಾರ್ಪಣೆಗೊಂಡ ಕೆರೆಕೋಡಿಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ ಅವರು ಗ್ರಾಮೀಣ ಪ್ರದೇಶಗಳಲ್ಲಿ ಜನರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ದೇಗುಲಗಳನ್ನು ಸ್ಥಾಪಿಸಿ, ದೇವರುಗಳಲ್ಲಿ ನಂಬಿಕೆ ಇಟ್ಟು ಪೂಜಿಸುವ ಸಂಪ್ರದಾಯ ನಮ್ಮ ಪೂರ್ವಜರ ಕಾಲದಿಂದಲೂ ಬೆಳೆದುಬಂದಿದೆ. ಬಡಜನರ ಸೇವೆ ಮಾಡಿ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಮೂಲಕ ದೇವರನ್ನು ಕಾಣಬೇಕು
ಅಲ್ಲದೆ ಸರ್ಕಾರಿ ನೌಕರಿಗೆ ಪಡೆಯಲು ನೀಡಿದ ಹಣ ಪಡೆಯಲು ನಿಮ್ಮ ಜೇಬಿಗೇ ಕತ್ತರಿ ಹಾಕಬೇಕಾದ ಪರಿಸ್ಥಿತಿ. ಸರ್ಕಾರಿ ನೌಕರಿ ಪಡೆಯಲು ಎಷ್ಟುಕಷ್ಟ ಪಡಬೇಕು ಎಂಬುದನ್ನು ನೀವು ಇತ್ತೀಚಿನ ದಿನಗಳಲ್ಲಿ ಗಮನಿಸುತ್ತಿದ್ದೀರಿ. ಅಷ್ಟು ಹಣ ಕೊಟ್ಟು ನೌಕರಿ ಪಡೆದ ನಂತರ ಯಾವ ಮಾರ್ಗದಲ್ಲಿ ಹಣ ಸಂಪಾದನೆ ಮಾಡಬೇಕೆಂಬುದು ಪೈಪೋಟಿ ನಡೆಯುತ್ತಿದೆ ಎಂದರು.
ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಶ್ರವಣಬೆಳಗೊಳ ಶಾಸಕ ಸಿ.ಎನ್ ಬಾಲಕೃಷ್ಣ, ಜಯದೇವ ಆಸ್ಪತ್ರೆಯ ಮುಖ್ಯಸ್ಥರಾದ ಡಾಕ್ಟರ್ ಸಿ ಎನ್ ಮಂಜುನಾಥ್, ಅನುಸೂಯ ಮಂಜುನಾಥ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮು, ಸಿ.ಎನ್.ಪುಟ್ಟಸ್ವಾಮಿಗೌಡ್ರು, ಮನ್ಮುಲ್ ನಿರ್ದೇಶಕ ಹೆಚ್.ಟಿ.ಮಂಜು, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಜಯದೇವ ಆಸ್ಪತ್ರೆಯ ಡಾಕ್ಟರ್ ಸಾತ್ವಿಕ್, ಯುವ ಅಧ್ಯಕ್ಷ ಅಶ್ವಿನ್ಕುಮಾರ್, ಮುಖಂಡರಾದ ಬಸ್ ಸಂತೋಷ್, ಅಕ್ಕಿಹೆಬ್ಬಾಳು ರಘು, ಐನೋರಳ್ಳಿ ಮಲ್ಲೇಶ್ ಚಿಕ್ಕತರಹಳ್ಳಿ ನಾಗೇಶ್, ಕಿಕ್ಕೇರಿ ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ, ಮುಖಂಡರಾದ ಪರ್ವತ್ರಾಜ್, ಹೇಮಾವತಿ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕ ಬಿ.ಎಸ್ ಮಂಜುನಾಥ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಚಿಕ್ಕತರಹಳ್ಳಿ ಮಧು, ಹಾಸನ ಕೆ.ಎಂ.ಎಪ್ ಅಧಿಕಾರಿ ಮಂಜುನಾಥ್, ಕುಮಾರಸ್ವಾಮಿ ಅಭಿಮಾನಿಗಳ ಅಧ್ಯಕ್ಷರಾದ ಲೋಕೇಶ್ ಸೇರಿದಂತೆ ಹಲವರು ಹಾಜರಿದ್ದರು.
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ