December 19, 2024

Bhavana Tv

Its Your Channel

ದೇವಾಯದ ಪುನರ್ ನಿರ್ಮಾಣಕ್ಕೆ ವೈಯಕ್ತಿಕವಾಗಿ ಐದು ಲಕ್ಷ ವೆಚ್ಚದ ಗ್ರ‍್ಯಾನೈಟ್ ಮತ್ತು ಸಿಮೇಂಟ್ ಕೊಡುಗೆಯಾಗಿ ನೀಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್

ಕಿಕ್ಕೇರಿ:- ದೇವಾಯದ ಪುನರ್ ನಿರ್ಮಾಣಕ್ಕೆ ವೈಯಕ್ತಿಕವಾಗಿ ಐದು ಲಕ್ಷ ವೆಚ್ಚದ ಗ್ರ‍್ಯಾನೈಟ್ ಮತ್ತು ಸಿಮೇಂಟ್ ಅನ್ನು ಕೊಡುಗೆಯಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್ ನೀಡಿ ಮಾನವೀಯತೆಯ ಮರೆದಿದ್ದಾರೆ

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಚಿಕ್ಕಳಲೆ ಗ್ರಾಮದ ಪುರಾಣ ಪ್ರಸಿದ್ದ ಚಿಕ್ಕಳಮ್ಮ (ಚಿಕ್ಕಮ್ಮ ಮತ್ತು ದೊಡ್ಡಮ್ಮ) ದೇವಾಲಯಗಳು ಶಿಥಿಲವಾಗಿದ್ದ ಹಿನ್ನಲೆ ದೇವಾಯದ ಪುನರ್ ನಿರ್ಮಾಣ ಕಾರ್ಯವನ್ನು ಗ್ರಾಮಸ್ಥರ ಹಾಗೂ ದಾನಿಗಳ ಸಹಾಯದೊಂದಿಗೆ 80 ಲಕ್ಷ ವೆಚ್ಚದಲ್ಲಿ ವಿನೂತನ ಮಾದರಿಯಲ್ಲಿ ದೇವಾಲಯ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಕೃಷ್ಣರಾಜಪೇಟೆ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್ ರವರು ಭೇಟಿ ನೀಡಿ ದೇವಾಲಯದ ಕಾಮಗಾರಿಯನ್ನು ವೀಕ್ಷಿಸಿದರು.

ಅಲ್ಲಿಯ ಸ್ಥಳೀಯ ಮುಖಂಡರು ದೇವಾಯದ ನಿರ್ಮಾಣಕ್ಕೆ ಹಣದ ಕೊರತೆ ಆಗಿದೆ ಗ್ಯ್ರಾನೆಟ್, ಮತ್ತು ಸಿಮೆಂಟ್ ಅವಶ್ಯಕತೆ ಇದೆ ಎಂದು ಕೇಳಿದಾಗ ಕೋಡಲೇ ಸ್ಪಂದಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್ ರವರು ಐದು ಲಕ್ಷ ವೆಚ್ಚದ ಗ್ರ‍್ಯಾನೆಟ್ ಅನ್ನು ತರಿಸುವ ಮೂಲಕ ಮಾನವೀಯತೆಯ ಮೆರೆದಿದ್ದಾರೆ..

ಚೌಡೇನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಭದ್ರಯ್ಯ ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ ಯಾವುದೇ ಸುಖ ದುಃಖ ಗಳಿಗೆ ಕೂಡಲೇ ಸ್ವಂದಿಸುವ ಮನೋಭಾವನೆ ಇರುವ ಇಂತಹ ನಾಯಕರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿ. ನಮ್ಮ ಪರಂಪರೆಯ ದೇವಾಲಗಳ ಅಭಿವೃದ್ಧಿಗಾಗಿ ಕೈಲಾದ ಸೇವೆ ಸಲ್ಲಿಸುತ್ತಿರು ಕಿಕ್ಕೇರಿ ಸುರೇಶ್ ರವರಿಗೆ ತಾಯಿ ಚಿಕ್ಕಳಮ್ಮ ಆರ್ಶಿವಾದ ಸದಾ ಇರಲಿ ಎಂದು ತಿಳಿಸಿದರು..

ಮುಖಂಡರಾದ ಸಾಸಲು ಈರಪ್ಪ, ನಿವೃತ್ತ ಪ್ರಾಂಶುಪಾಲರಾದ ಜಾನೇಗೌಡು ಮಾತಾನಾಡಿ ದೇವಾಲಯದ ಅಭಿವೃದ್ಧಿ ಶ್ರಮಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್ ರವರಿಗೆ ಶುಭ ಹಾರೈಸಿದರು..

ಈ ಸಂದರ್ಭದಲ್ಲಿ ಚೌಡೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಚಿಕ್ಕಳಲೆ ದೇವರಾಜು, ಮುಖಂಡರಾದ ಲಕ್ಷ್ಮೀಪುರ ಚಂದ್ರೇಗೌಡ, ನಾಗರಾಜು,ಸಣ್ಣಪ್ಪ, ಮಹಾದೇವು, ಲೋಕೇಶ್ ಸೇರಿದಂತೆ ನೂರಾರು ಗ್ರಾಮಸ್ಥರುಗಳು ಇದ್ದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: