December 22, 2024

Bhavana Tv

Its Your Channel

ಬೆಣ್ಣೆಹಳ್ಳ ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರ ರಕ್ಷಣೆ

ರೋಣ ತಾಲೂಕಿನ ಬೆಣ್ಣೆ ಹಳ್ಳ ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರು ಕಾರ್ಮಿಕರನ್ನು ರಕ್ಷಿಸುವಲ್ಲಿ ಅಗ್ನಿ ಶಾಮಕ ದಳ ಯಶಸ್ವಿಯಾಗಿದೆ.
ಯಾ.ಸ. ಹಡಗಲಿ ಗ್ರಾಮದ ಯಲ್ಲಪ್ಪ ಉಮೇಶ ರಾಘವಪುರ, ಅರುಣ ಮಲ್ಲಪ್ಪ ವಾಲ್ಮೀಕಿ, ಪರಶುರಾಮ ಸಿದ್ದಪ್ಪ ಮುತ್ತಣ್ಣವರ ಮತ್ತು ಗವಿಸಿದ್ದ ವೆಂಕಣ್ಣ ಕಲ್ಲಿ ಕಾರ್ಮಿಕರನ್ನು ರಕ್ಷಿಸಲಾಗಿದೆ.

ಮೂರು ದಿನಗಳ ಕಾಲ ನಿರಂತರವಾಗಿ ಮಳೆ ಸುರಿಯುತ್ತಿದ್ದರೂ, ಬೆಣ್ಣೆಹಳ್ಳದಲ್ಲಿ ನೀರಿನ ಹರಿವು ಸಾಮಾನ್ಯವಾಗಿತ್ತು. ಹೀಗಾಗಿ ಶನಿವಾರ ಯಾವಗಲ್ ಹಾಗೂ ಯಾ.ಸ. ಹಡಗಲಿ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣದ ಕೆಲಸಕ್ಕೆ ಹಾಜರಾಗಿದ್ದರು. ಕಾಮಗಾರಿ ಸ್ಥಳಕ್ಕೆ ತೆರಳಿದ ಒಂದು ಗಂಟೆ ಬಳಿಕ ನೀರಿನ ಹರಿವು ಹೆಚ್ಚಿದ್ದು, ನೋಡನೋಡುತ್ತಿದ್ದಂತೆ ಸೇತುವೆ ಜಲಾವೃತವಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ರೋಣ ಅಗ್ನಿ ಶಾಮಕ ಅಧಿಕಾರಿಗಳು ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ.

ರೋಣ ಅಗ್ನಿ ಶಾಮಕ ಠಾಣೆ ಅಧಿಕಾರಿ ಮಂಜುನಾಥ್ ಮೇಲ್ಮನೆ, ಸಿಬ್ಬಂದಿಗಳಾದ ಸಂತೋಷ್ ಫೋಟರ, ಆನಂದ್ ಗೌಡರ, ಪ್ರಧಾನಿ ಮುತ್ತಣ್ಣ, ಎಚ್.ಬಿ. ಕಟ್ಟಿಮನಿ, ಎಸ್.ಎಸ್. ಅಳಗವಾಡಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವರದಿ: ವೀರಣ್ಣ ಸಂಗಳದ

error: