March 12, 2025

Bhavana Tv

Its Your Channel

ನ್ಯೂ ಶಮ್ಸ್ ಶಾಲೆಯಲ್ಲಿ ವಿದ್ಯಾರ್ಥಿ ಕೌನ್ಸಿಲ್ ಪದಗ್ರಹಣ ಸಮಾರಂಭ

ಭಟ್ಕಳ ಪ್ರತಿಷ್ಟಿತ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಐ.ಎಸ್.ಸಿ.ಇ ಪಠ್ಯ ಕ್ರಮದ ನ್ಯೂಶಮ್ಸ್ ಸ್ಕೂಲ್ ನ 2022-23ನೇ ಸಾಲಿನ ವಿದ್ಯಾರ್ಥಿ ಕೌನ್ಸಿಲ್ ಗೆ ಆಯ್ಕೆಯಾದ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ ಗುರುವಾರ ಸೈಯ್ಯದ್ ಅಲಿ ಕ್ಯಾಂಪಸ್‌ನ ಡಾ.ಹಸನ್ ಬಾಪಾ ಎಂ.ಟಿ. ಸಭಾಂಗಣದಲ್ಲಿ ಜರಗಿತು.
ವಿದ್ಯಾರ್ಥಿ ಕೌನ್ಸಿಲ್ ಪದಗ್ರಹಣ ಸಮಾರಂಭ ನೆರವೇರಿಸಿ ಮಾತನಾಡಿದ ಸಂಸ್ಥೆಯ ಸ್ಕೂಲ್ ಬೋರ್ಡ್ ಚರ‍್ಮನ್ ಕಾದಿರ್ ಮೀರಾ ಪಟೇಲ್, ವಿದ್ಯಾರ್ಥಿ ಜೀವನದಲ್ಲಿ ಪಡೆದುಕೊಂಡ ಅನುಭಗಳು ಕೊನೆತನಕವು ಇರುತ್ತದೆ. ಉತ್ತಮ ವಾತವರಣದಲ್ಲಿ ಕಲಿಯುವ ಅವಕಾಶ ನಿಮಗಿಲ್ಲಿ ದೊರಕಿದೆ. ಸಿಕ್ಕಂತಹ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಬಳಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕೆಂದು ಕರೆ ನೀಡಿದರು.
ಆಡಳಿತ ಮಂಡಳಿಯ ಕಾರ್ಯದರ್ಶಿ ಅನಂ ಆಲಾ ಎಂ.ಟಿ, ಆಡಳಿತ ಮಂಡಳಿಯ ಸದಸ್ಯರಾದ ಸೈಯ್ಯದ್ ಶಕೀಲ್ ಆಹ್ಮದ್‌ಎಸ್.ಎಂ,, ಡಾ.ಕ್ವಾಜಾ ಒವೇಸ್ ರುಕ್ನದ್ದೀನ್, ಸಲೀಮ್ ಸಾದಾ, ಸಲಾಹುದ್ದೀನ್‌ಎಸ್.ಎಕ್, ಸೈಯ್ಯದ್ ಮೌಲಾನ ಝುರೇರ್ ಎಸ್.ಎಂ., ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಇಂಜೀನಿಯರ್ ನಝೀರ್ ಆಹ್ಮದ್ ಖಾಝಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಲಿಯಾಕತ್ ಅಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕ ಮಂಜುನಾಥ್ ಹೆಬ್ಬಾರ್ ಸ್ವಾಗತಿಸಿದರು. ಮುಹಮ್ಮದ್ ರಝಾ ಮಾನ್ವಿ ಧನ್ಯವಾದವಿತ್ತರು. ನಝೀಫ್ ಮನೆಗಾರ ಕಾರ್ಯಕ್ರಮ ನಿರೂಪಿಸಿದರು.

error: