May 12, 2024

Bhavana Tv

Its Your Channel

ಕತ್ತಲಲ್ಲಿ ಕಾವಲಿಗೆ ನಿಂತ ಮಹಿಳಾ ಪೊಲೀಸರು: ಭಟ್ಕಳದಲ್ಲಿ ಮೊದಲ ಪ್ರಯೋಗ

ಭಟ್ಕಳ: ಯಾವುದೇ ಕ್ಷೇತ್ರವಿರಲಿ, ಗಂಡಸರಿಗಿಂತ ನಾವೇನೂ ಕಡಿಮೆ ಇಲ್ಲ ಎಂದು ಮಹಿಳೆಯರು ಹೇಳಿಕೊಂಡು ಬಹಳ ರ‍್ಷಗಳೇ ಕಳೆದು ಹೋಗಿವೆ. ಅದರಲ್ಲಿಯೂ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರ ಗತ್ತು ಗೈರತ್ತು ಕಡಿಮೆ ಏನಿಲ್ಲ. ಇದೀಗ ಉತ್ತರಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಭಟ್ಕಳದಲ್ಲಿ ರಾತ್ರಿ ವೇಳೆ ಮಹಿಳಾ ಪೊಲೀಸರ ಗಸ್ತು ಕರ‍್ಯಕ್ಕೆ ಚಾಲನೆ ನೀಡಲಾಗಿದೆ.
ಮಂಗಳವಾರ ರಾತ್ರಿ ಎಸ್ ಐ ಸುಮಾ ಬಿ. ನೇತೃತ್ವದಲ್ಲಿ ಕತ್ತಲಿನಲ್ಲಿಯೇ ರಸ್ತೆಗೆ ಇಳಿದ ಮಹಿಳಾ ಪೊಲೀಸ್ ಸಿಬ್ಬಂದಿಗಳು ಆಯಕಟ್ಟಿನ ಸ್ಥಳಗಳಲ್ಲಿ ನಿಂತು ವಾಹನ ತಪಾಸಣೆ ನಡೆಸಿದರು. ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆಯನ್ನೂ ನಡೆಸಿದರು. ಯಾವುದೇ ಅಳುಕು ಇಲ್ಲದೇ ತಂಡ ಕಟ್ಟಿಕೊಂಡು ಭಟ್ಕಳ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗಸ್ತು ನಡೆಸಿ ಎಲ್ಲರ ಹುಬ್ಬೇರುವಂತೆ ಮಾಡಿದರು.
ನಸುಕಿನ ವೇಳೆ 5 ಗಂಟೆಯವರೆಗೂ ನಿದ್ದೆ ಬಿಟ್ಟು ಗಸ್ತು ನಡೆಸಿ ..ಕತ್ತಲಲ್ಲಿ ಕಾವಲಿಗೆ ನಿಂತ ಮಹಿಳಾ ಪೊಲೀಸರು
ಪೊಲೀಸ್ ಕರ‍್ಯಾಚರಣೆಯ ಹೊಸ ಅನುಭವವನ್ನು ಪಡೆದರು. ಮೊದಲ ದಿನ ಕಡಿಮೆ ಸಂಖ್ಯೆಯಲ್ಲಿ ಮಹಿಳಾ ಪೊಲೀಸರು ರ‍್ತವ್ಯಕ್ಕೆ ಹಾಜರಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಹಿಳಾ ಪೊಲಿಸರನ್ನು ರಾತ್ರಿ ಗಸ್ತಿಗೆ ನಿಯೋಜಿಸುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾತ್ರಿ ವೇಳೆಯಲ್ಲಿ ಮಹಿಳಾ ಪೊಲೀಸರನ್ನು ರ‍್ತವ್ಯಕ್ಕೆ ನಿಯೋಜಿಸುವ ಕರ‍್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದರೂ, ಉತ್ತರಕನ್ನಡ ಜಿಲ್ಲೆಯಲ್ಲಿ ಇನ್ನೂ ಅನುಷ್ಠಾನಗೊಂಡಿರಲಿಲ್ಲ. ಇದೀಗ ಭಟ್ಕಳದಲ್ಲಿ ಸಿಕ್ಕ ಯಶಸ್ಸು ಜಿಲ್ಲೆಯ ಉಳಿದ ತಾಲೂಕುಗಳಿಗೂ ವಿಸ್ತರಿಸುವ ಸಾಧ್ಯತೆ ಹೆಚ್ಚಿದೆ. ಭಟ್ಕಳ ಮಹಿಳಾ ಪೊಲೀಸರ ಗಸ್ತು ಅಕ್ರಮ ಕರ‍್ಯಾಚರಣೆಯ ಬಗ್ಗೆ ಮಾತನಾಡಿದ ಸಿಪಿಐ ದಿವಾಕರ, ಮಹಿಳಾ ಸಬಲೀಕರಣದ ಭಾಗವಾಗಿ ಪೊಲೀಸ್ ಇಲಾಖೆ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು, ಮಹಿಳಾ ಪೊಲೀಸರು ಸಂತೋಷದಿಂದಲೇ ಗಸ್ತು ಕರ‍್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ
ಎಂದು ತಿಳಿಸಿದ್ದಾರೆ.

error: