March 14, 2025

Bhavana Tv

Its Your Channel

ಶ್ರೀ ಗುರುಸುಧಿಂದ್ರ ಕಾಲೇಜಿನಲ್ಲಿ ಕೇಳುಗರ ಸ್ಪೂರ್ತಿಯ ಚಿಲುಮೆ! ಉದಯವಾಣಿಯ ಯು.ವಿ ಲಿಸನ್ ಕಾರ್ಯಕ್ರಮ ಉದ್ಘಾಟನೆ

ಭಟ್ಕಳ ನಗರದ ಶ್ರೀ ಗುರುಸುಧಿಂದ್ರ ಕಾಲೇಜಿನಲ್ಲಿ ಆಯೋಜಿಸಿದ ಕೇಳುಗರ ಸ್ಪೂರ್ತಿಯ ಚಿಲುಮೆ! ಉದಯವಾಣಿಯ ಯು.ವಿ ಲಿಸನ್ ಕಾರ್ಯಕ್ರಮವನ್ನು ಉದಯವಾಣಿ ಪತ್ರಿಕೆಯ ಭಟ್ಕಳದ ವರದಿಗಾರ ರಾಧಾಕೃಷ್ಣ ಭಟ್ ಉದ್ಘಾಟಿಸಿದರು.

ಬಿ.ಎ. ಜರ್ನಲಿಸಂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಅವರು ಉದಯವಾಣಿ ಪತ್ರಿಕೆಯು ಮೊದಲಿನಿಂದಲೂ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಅನೇಕ ಪ್ರಶಸ್ತಿಗಳನ್ನು ಪ್ರಿಂಟಿAಗ್ ವಿಭಾಗದಲ್ಲಿ ಪಡೆದಿರುವುದನ್ನು ಸ್ಮರಿಸಿದರು. ಪತ್ರಕರ್ತನಾದವನಿಗೆ ಸಮಾಜದ ಹಿತ ಮುಖ್ಯವಾದುದು. ಪತ್ರಕರ್ತರ ಮೊದಲು ತಾನು ಅರಿತು ನಂತರ ವರದಿ ಮಾಡಬೇಕು. ಅರೆಬರೆ ಸುದ್ದಿಯನ್ನು ವರದಿ ಮಾಡುವುದರಿಂದ ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಮಾತನಾಡಿ ತಂತ್ರಜ್ಞಾನದಿAದ ಪತ್ರಿಕೋದ್ಯಮದಲ್ಲಿ ಆದ ಬದಲಾವಣೆಯನ್ನು ವಿವರಿಸುತ್ತಾ ಇವತ್ತಿನ ತಂತ್ರಜ್ಞಾನದ ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಬಿ.ಎ ವಿಭಾಗದ ಮುಖ್ಯಸ್ಥ ಹಾಗೂ ಉಪ ಪ್ರಾಂಶುಪಾಲ ವಿಶ್ವನಾಥ ಭಟ್ ಅತಿಥಿಗಳನ್ನು ಪರಿಚಯಿಸುತ್ತಾ ಯು.ವಿ ಲಿಸಸ್‌ನ ಬಡೆಕ್ಕಿಲ ಪ್ರದೀಪ್ ಹಾಗೂ ಡಾ. ಸಂಧ್ಯಾ ಪೈ ರವರ ಕೌಶಲ್ಯ, ಪತ್ರಿಕೋಧ್ಯಮ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ಪ್ರಸ್ತಾಪಿಸಿದರು.

ಕಾಲೇಜು ವಿದ್ಯಾರ್ಥಿಗಳು, ಬೋಧಕ- ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪತ್ರಿಕೋದ್ಯಮದ ವಿದ್ಯಾರ್ಥಿಯಾದ ನಾಗಪ್ಪಯ್ಯ ಪೈ ಸ್ವಾಗತಿಸಿದರು, ಸಿದ್ಧಾರ್ಥ ಮೈಯ್ಯ ನಿರೂಪಿಸಿದರು, ಕೀರ್ತಿರಾಜ್ ವಂದನಾರ್ಪಣೆ ಸಲ್ಲಿಸಿದರು. ರಾಷ್ಟ್ರ ಗೀತೆಯೊಂದಿಗೆ ಕ್ರಾರ್ಯಕ್ರಮ ಮುಕ್ತಾಯವಾಯಿತು.

error: