
ಭಟ್ಕಳ:ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ಮೈಸೂರಿನಲ್ಲಿ ನಡೆದ ೨ನೇ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಫ್‌ನಲ್ಲಿ ಭಟ್ಕಳದ ಪ್ರಣವಿ ರಾಮಚಂದ್ರ ಕಿಣಿ ಸಬ್ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.

ಮೈಸೂರಿನ ಮಹಾರಾಜ್ ಕಾಲೇಜಿನ ಇಂದೋರ ಹಾಲ್‌ನಲ್ಲಿ ಶನಿವಾರ ಪಂದ್ಯ ಎರ್ಪಡಿಸಲಾಗಿತ್ತು. ಮಂಗಳೂರು ಮತ್ತು ಭಟ್ಕಳದ ನಡುವೆ ಪಂದ್ಯ ಎರ್ಪಟ್ಟಿದ್ದು ಮಂಗಳೂರು ಬಾಲಕನನ್ನು ಸೋಲಿಸುವ ಮೂಲಕ ಪ್ರಣವಿ ಮೊದಲ ಸ್ಥಾನ ಪಡೆದಿದ್ದಾಳೆ. ಈ ಮೂಲಕ ಜೂನ್ ೨೩ರಿಂದ ೨೫ರವರೆಗೆ ಕೊಲ್ಕತ್ತಾದಲ್ಲಿ ನಡೆಯುವ ರಾಷ್ಟç ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾಳೆ. ಭಟ್ಕಳ ಶೋಟೋಕಾನ ಕರಾಟೆ ಇನ್ಸಿಟಿಟ್ಯೂಟನಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದು, ಭಟ್ಕಳ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿ.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ