May 2, 2024

Bhavana Tv

Its Your Channel

ಪಿ.ಎಚ್.ಡಿ. ಪದವಿ ಪಡೆದ ಭಟ್ಕಳದ ಶ್ರುತಿ ದೇವಿದಾಸ ಲಾಡ್.

ಭಟ್ಕಳ ತಾಲೂಕಿನ ಸರ್ಪನಕಟ್ಟೆಯ ಶ್ರುತಿ ದೇವಿದಾಸ ಲಾಡ್ ಅವರು ಜೀವರಸಾಯನ ಶಾಸ್ತç ವಿಭಾಗದಲ್ಲಿ ಪಾಲಿಫೆನೊಲಾಕ್ಸಿಡೇಸ್ ಕಿಣ್ವಗಳು ಮತ್ತು ಅದರ ಮಾಡ್ಯುಲೇಟರ್‌ಗಳ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಜೂನ್ 7 ರಂದು ಧಾರವಾಡದ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿ ನೀಡಿ ಗೌರವಿಸಿದೆ.

ಧಾರವಾಡದ ಕವಿವಿ ಜೀವ ರಸಾಯನ ಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ|| ಸಿ. ಎಮ್. ಕಮನವಳ್ಳಿ ಅವರ ಮಾರ್ಗದರ್ಶನದಲ್ಲಿ ಪಾಲಿಫೆನೊಲಾಕ್ಸಿಡೇಸ್ ಕಿಣ್ವಗಳು ಮತ್ತು ಅದರ ಮಾಡ್ಯುಲೇಟರ್‌ಗಳು, ಪಾಲಿಫಿನಾಲ್ ಆಕ್ಸಿಡೇಸ್ ಕಿಣ್ವಗಳ ನೈಸರ್ಗಿಕ ಸಸ್ಯ ಪ್ರತಿಬಂಧಕ ಗುರುತಿಸುವಿಕೆ, ಚರ್ಮದ ಅಸಾಧಾರಣ ಕಪ್ಪಾಗುವಿಕೆಗೆ, ಚರ್ಮದ ಅಸ್ವಸ್ಥತೆಗಳ ಚಿಕಿತ್ಸೆಗೆ ಪ್ರಾಯೋಗಿಕವಾಗಿ ಪ್ರಯೋಜನಕಾರಿಯಾಗುವಂತೆ ಮತ್ತು ತ್ವಚೆ ಉತ್ಪನ್ನಗಳ ಅಭಿವೃದ್ಧಿಯ ಕುರಿತು ಸತತ ಐದು ವರ್ಷಗಳ ಅಧ್ಯಯನ ನಡೆಸಿ ಮಹಾಪ್ರಬಂಧ ಸಿದ್ಧ ಪಡಿಸಲಾಗಿದೆ. ಸಮಾರಂಭದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ ಗೆಹ್ಲೊಟ್ ಹಾಗೂ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕ್ ಇಂಜಿನಿಯರಿAಗ್ ಮತ್ತು ಬಯೋಟೆಕ್ನಾಲಜಿ,ನವದೆಹಲಿ ಇದರ ನಿರ್ದೇಶಕರಾದ ಡಾ|| ದಿನಕರ ಎಂ. ಸಾಳುಂಕೆ ಮುಂತಾದವರು ಉಪಸ್ಥಿತರಿದ್ದರು. ಇವರು ಕುಮಟಾದ ಎ ವಿ ಬಾಳಿಗಾ ಕೊಲೇಜಿನಲ್ಲಿ ಬಿ.ಎಸ್ಸ್.ಸ್ಸಿ ಮುಗಿಸಿ ಮಂಗಳೂರಿನ ಸೆಂಟ್ ಅಲೋಷಿಯಸ್ ನಲ್ಲಿ ಎಮ್. ಎಸ್ಸ್. ಸಿ ಪದವಿ ಪಡೆದಿದ್ದರು. ಡಾ|| ಶ್ರುತಿ ಇವರು ಭಟ್ಕಳದ ಸರ್ಪನಕಟ್ಟೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವ ದೇವಿದಾಸ ಲಾಡ್ ಹಾಗೂ ಕಮಲಾಕ್ಷಿ ಲಾಡ್ ದಂಪತಿಗಳ ಪುತ್ರಿಯಾಗಿದ್ದಾಳೆ.

error: