October 30, 2024

Bhavana Tv

Its Your Channel

ನಿವೃತ್ತ ಉಪನ್ಯಾಸಕರ ಬೀಳ್ಕೊಡುಗೆ ಸಮಾರಂಭ

ಕಾರ್ಕಳ:- ಶಿಕ್ಷಕರಾದವರು ಕಾಲಕಾಲಕ್ಕೆ ತನ್ನ ಜ್ಞಾನ ಶಕ್ತಿಯನ್ನು ಪುನಶ್ಚೇತನಗೊಳಿಸುವುದರ ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ತರುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾದರಿಯಾಗಿರಬೇಕು ಎಂದು ಕರ್ನಾಟಕ ಸರಕಾರದ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಜಗದೀಶ ಪೈ ಇವರು ಸ್ಥಳೀಯ ಎಸ್.ವಿ.ಟಿ. ವನಿತಾ ಪದವಿ ಪೂರ್ವ ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕರಾದ
ನಂದೀಶ್ ಜಿ.ಟಿ. ಯವರ ನಿವೃತ್ತ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಭಾಷಣದಲ್ಲಿ ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ದೇವಳದ ಒಂದನೇ ಮೊಕ್ತೇಸರರಾದ ಜಯರಾಮ ಪ್ರಭು ವಹಿಸಿ, ನಿವೃತ್ತ ಉಪನ್ಯಾಸಕರು ಸಂಸ್ಥೆಗೆ ಸಲ್ಲಿಸಿದ
ಸೇವೆಯನ್ನು ತುಂಬು ಹೃದಯದಿಂದ ಕೊಂಡಾಡಿದರು. ನಿವೃತ್ತರನ್ನು ಸಂಸ್ಥೆಯ ಆಡಳಿತ
ಮಂಡಳಿ, ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಹಾಗೂ ನಿವೃತ್ತ ಬೋಧಕ-ಬೋಧಕೇತರ
ಸಿಬ್ಬಂದಿಗಳು ಶಾಲು ಹೊದಿಸಿ ಫಲ-ಪುಷ್ಪ ನೀಡಿ, ಚಿನ್ನದ ಉಂಗುರ ತೊಡಿಸಿ
ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ನಂದೀಶ್ ಜಿ.ಟಿ.ಯವರು
ಸಂಸ್ಥೆಯಲ್ಲಿನ ತಮ್ಮ ಅನುಭವವನ್ನು ಹಂಚಿಕೊAಡು, ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಶ್ರೀ ವೆಂಕಟರಮಣ ಎಜ್ಯುಕೇಶನ್ ಟ್ರಸ್ಟö್ನ ಕೋಶಾಧಿಕಾರಿ
ಐ ರವೀಂದ್ರನಾಥ್ ಪೈ ಪ್ರಾಚಾರ್ಯರಾದ ರಾಮದಾಸ ಪ್ರಭು, ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕರಾದ ಶ್ರೀ ಯೋಗೇಂದ್ರ ನಾಯಕ್, ವಿಶಾಲಾಕ್ಷಿ ನಂದೀಶ್ ಜಿ.ಟಿ ಉಪಸ್ಥಿತರಿದ್ದರು.
ಆಂಗ್ಲಭಾಷಾ ಶಿಕ್ಷಕರಾದ ಶ್ರೀ ಸುನೀಲ್ ಶೆಟಿ ್ಟ ಸ್ವಾಗತಿಸಿ, ಸಮಾಜಶಾಸ್ತç
ಉಪನ್ಯಾಸಕರಾದ ಪ್ರಭಾತ್ ರಂಜನ್ ವಂದಿಸಿದರು, ವಾಣಿಜ್ಯಶಾಸ್ತç ಉಪನ್ಯಾಸಕಿ ಸುಮಂಗಲಾ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.

error: