December 19, 2024

Bhavana Tv

Its Your Channel

ಬೇಡ ಜಂಗಮರಿಗೆ ಎಸ್‌ಸಿ ಪ್ರಮಾಣ ಪತ್ರ ನೀಡಲು ಒತ್ತಾಯ

ಹುನಗುಂದ:- ಬಾಗಲಕೋಟ ಜಿಲ್ಲೆಯಹುನಗುಂದ ಪಟ್ಟಣದಲ್ಲಿ ಬೇಡ ಜಂಗಮರಿಗೆ ಪ್ರಮಾಣ ಪತ್ರ ನೀಡುವುದು ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೇಡ ಜಂಗಮ ತಾಲೂಕು ಒಕ್ಕೂಟದಿಂದ ತಹಶೀಲ್ದಾರ ಕಚೇರಿಯಲ್ಲಿ ಶಿರಸ್ತೇದಾರ ಐ.ಎಸ್.ಗಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ನಂತರ ವೇದಮೂರ್ತಿ ಮಹಾಂತಯ್ಯ ಗಚ್ಚಿನಮಠ ಮಾತನಾಡಿ ಸಂವಿಧಾನದಡಿ ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡುವುದು ನಮ್ಮ ಕರ್ತವ್ಯ. ಬೆಂಗಳೂರಿನಲ್ಲಿ ನಮ್ಮ ಹೋರಾಟಗಾರರನ್ನು ಬಂಧಿಸಿರುವುದು ಖಂಡನೀಯ. ಬೇಡಿಕೆ ಈಡೇರುವವರೆಗೂ ರಾಜ್ಯಾದ್ಯಂತ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಪ್ಪು ಜಡಿಮಠ, ಬಸಯ್ಯ ಹಿರೇಮಠ, ಮಹಾಂತಯ್ಯ ಶಿವಪ್ಪಯ್ಯನ ಮಠ, ಶಾಂತಯ್ಯ ಮಠ, ಮುಂತಾದವರು ಭಾಗಿಯಾಗಿದ್ದರು.

ವರದಿ:- ನಿಂಗಪ್ಪ ಕಡ್ಲಿಮಟ್ಟಿ

error: