ಬೆಂಗಳೂರು: ಕೊರೊನಾ ಭೀತಿ ನಡುವೆ ರಾಜ್ಯ ಸಾರ್ಕಾರ ಮೆಡಿಕಲ್ ಮತ್ತು ಡೆಂಟಲ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ನೀಡಿದೆ. ಪಿಜಿ ಮೆಡಿಕಲ್ ಮತ್ತು ಡೆಂಟಲ್ ಸೀಟುಗಳ ಶುಲ್ಕವನ್ನು ಹೆಚ್ಚಳ ಮಾಡಿ ಆದೇಶ ನೀಡಿದೆ.
2020- 21ನೇ ಸಾಲಿನ ಶುಲ್ಕ ವಿವರ.
ಮೆಡಿಕಲ್ – ಖಾಸಗಿ ಕೋಟಾ
ಕ್ಲಿನಿಕಲ್ – 11,34,705 ರೂ.
ಪ್ಯಾರಾ ಕ್ಲಿನಿಕಲ್ – 2,83,677 ರೂ.
ಪ್ರಿ-ಕ್ಲಿನಿಕಲ್ – 1,42,698 ರೂ.
ಮೆಡಿಕಲ್ – ಖಾಸಗಿ ಕಾಲೇಜ್ನಲ್ಲಿ ಸರ್ಕಾರಿ ಕೋಟಾ
ಕ್ಲಿನಿಕಲ್ – 6,98,280 ರೂ.
ಪ್ಯಾರಾ ಕ್ಲಿನಿಕಲ್ – 1,74,570 ರೂ.
ಪ್ರಿ-ಕ್ಲಿನಿಕಲ್ – 87,286 ರೂ.
ಖಾಸಗಿ ಕಾಲೇಜ್ಗಳು, ಖಾಸಗಿ ವಿವಿಗಳು, ಡೀಮ್ಡ್ ವಿವಿಗಳ ಸೀಟುಗಳ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಖಾಸಗಿ ಕೋಟಾದ ಸೀಟುಗಳಿಗೆ ಶೇ. 30ರಷ್ಟು ಶುಲ್ಕ ಅಧಿಕವಾಗಿದೆ. ಇನ್ನೂ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಸೇರುವ ವಿದ್ಯಾರ್ಥಿಗಳಿಗೆ ಶೇ. 20ರಷ್ಟು ಶುಲ್ಕವನ್ನು ಸರ್ಕಾರ ಹೆಚ್ಚಿಸಿದೆ.
ಪ್ರತಿ ವರ್ಷ 10-15% ಶುಲ್ಕ ಹೆಚ್ಚಳ ಆಗುತ್ತಿತ್ತು. ಆದರೆ ಈ ಬಾರಿ ಸರ್ಕಾರ ಮತ್ತಷ್ಟು ಶುಲ್ಕ ಹೆಚ್ಚಳ ಮಾಡಿದೆ. ಇನ್ನೆರಡು ದಿನಗಳಲ್ಲಿ ಸಿಟಿಇ ಕೌನ್ಸಿಲಿಂಗ್ ಇದೆ. ಈಗ ದಿಢೀರ್ ಅಂತ ಸರ್ಕಾರ ಹೊಸ ಶುಲ್ಕದ ಪಟ್ಟಿ ಬಿಡುಗಡೆ ಮಾಡಿದೆ.
source : ಪ್ರಗತಿವಾಹಿನಿ ಸುದ್ದಿ
More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ