October 30, 2024

Bhavana Tv

Its Your Channel

ಮಾಶಾಸನ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮಾಶಾಸನ ಮಂಜೂರಿ ಪತ್ರ ಹಾಗೂ ಮಾಶಾಸನ ವಿತರಣಾ ಕಾರ್ಯಕ್ರಮ

ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅಶಕ್ತರು, ಅಬಲರು ಹಾಗೂ ತೀರಾ ಬಡವರಿಗಾಗಿ ಹಮ್ಮಿಕೊಂಡಿದ್ದ ಮಾಶಾಸನ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮಾಶಾಸನ ಮಂಜೂರಿ ಪತ್ರ ಹಾಗೂ ಮಾಶಾಸನ ವಿತರಣಾ ಕಾರ್ಯಕ್ರಮ ಮುಂಡಳ್ಳಿಯ ಡಿಜಿಟಲ್ ಸೇವಾ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾಶಾಸನ ಹಾಗೂ ಮಂಜೂರಿ ಪತ್ರ ವಿತರಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ಧರ್ಮಸ್ಥಳ ಕ್ಷೇತ್ರದಿಂದ ರಾಜ್ಯದಲ್ಲಿಂದು ಲಕ್ಷಾಂತರ ಜನ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದು ಬಡವರಿಗೆ ಮಾಶಾಸನ ನೀಡುತ್ತಿರುವುದರಿಂದ ಹಿರಿಯ ಜೀವಕ್ಕೆ ಆಧಾರವಾದಂತಾಗಿದೆ. ಡಾ. ವೀರೇಂದ್ರ ಹೆಗ್ಗೆಡೆಯವರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳಲ್ಲಿನ ಅಚ್ಚುಕಟ್ಟುತನವನ್ನು ನೋಡಿ ಪ್ರಧಾನಿ ಮೋದಿಯವರು ರಾಜ್ಯ ಸಭಾಕ್ಕೆ ಕರೆಯಿಸಿಕೊಂಡಿದ್ದು ಅವರಿಂದ ಇನ್ನಷ್ಟು ದೇಶ ಸೇವೆ ಆಗಲಿ ಎಂದು ಹಾರೈಸಿದರು.
ತಾಲೂಕಾ ಯೋಜನಾಧಿಕಾರಿ ಗಣೇಶ ನಾಯ್ಕ ಮಾತನಾಡಿ ಒಟ್ಟೂ ನಾಲ್ವರಿಗೆ ತಿಂಗಳಿಗೆ 1 ಸಾವಿರ ರೂಪಾಯಿ ಹಾಗೂ ಓರ್ವರಿಗೆ ತಿಂಗಳಿಗೆ 750 ರೂಪಾಯಿಯಂತೆ ಮಾಶಾಸನ ಮಂಜೂರಿಯಾಗಿದ್ದು ಪ್ರತಿ ತಿಂಗಳೂ ಅವರಿಗೆ ದೊರೆಯಲಿದೆ ಎಂದರು.
ತಾಲೂಕಿನಲ್ಲಿ ಇಲ್ಲಿಯ ತನಕ ಒಟ್ಟೂ 43 ಜನರಿಗೆ ಮಾಶಸನ ದೊರೆಯುತ್ತಿದ್ದು ಇನ್ನೂ ಅನೇಕರು ಅರ್ಹರಿದ್ದು ಅವರ ಹೆಸರುಗಳನ್ನು ಈಗಾಗಲೇ ಪಡೆದು ಕಳುಹಿಸಲಾಗಿದೆ. ಅವರಿಗೂ ಕೂಡಾ ಮಂಜೂರಿಯಾಗಲಿದೆ ಎಂದೂ ಹೇಳಿದರು.
ಈ ಸಂದರ್ಭದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ವಿನೋದಾ ಬಾಲಚಂದ್ರ, ಮೇಲ್ವಿಚಾರಕ ಕೇಶವ, ಸೇವಾ ಪ್ರತಿನಿಧಿ ಕವಿತಾ, ಮುಂತಾದವರಿದ್ದರು.

error: