ರೋಣ : ಪಟ್ಟಣದಲ್ಲಿ ಜಯ ಕರ್ನಾಟಕ ಸಂಘಟನೆ ವತಿಯಿಂದ ರೋಣ ನಗರದಿಂದ ಗಜೇಂದ್ರಗಡಕ್ಕೆ ಹೋಗುವ ಮಾರ್ಗ ಮತ್ತು ಸರ್ಜಾಪೂರದಿಂದ ಕಾತ್ರಾಳ ಮಾರ್ಗ ಮತ್ತು ಗಜೇಂದ್ರಗಡ ಹಾಗೂ ರೋಣ ತಾಲೂಕಿನ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು,ಹಾಗೂ ರಸ್ತೆಯ ತುಂಬೆಲ್ಲಾ ಗುಂಡಿಗಳು ಬಿದ್ದು ಇದರಿಂದ ವಾಹನ ಸವಾರರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿದೆ.ಈ ಹಿನ್ನಲೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಸಿದ್ದಾರೂಢ ಮಠದಿಂದ ಆರಂಭಗೊAಡ ಪ್ರತಿಭಟನೆ ಸೂಡಿ ಕ್ರಾಸ್, ಮುಲ್ಲಾನಬಾವಿ ವೃತ್ತ ಮಾರ್ಗವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದರ ಮೂಲಕ ತಹಶೀಲ್ದಾರ ಕಚೇರಿ ತಲುಪಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.
ಇದೇ ಸಮಯದಲ್ಲಿ ಗಜೇಂದ್ರಗಡ ತಾಲೂಕು ಅಧ್ಯಕ್ಷ ಕಳಕಪ್ಪ ಪೋತಾ, ತಾಲೂಕು ಸಂಚಾಲಕ ಶರಣು ಹಲಗಿ,ಗೌರವಾಧ್ಯಕ್ಷ ಶಂಕರ್ ಚವ್ಹಾಣ,ರೋಣ ತಾಲೂಕು ಉಪಾಧ್ಯಕ್ಷ ರಾಜು ಹುಲ್ಲೂರು, ಗಜೇಂದ್ರಗಡ ತಾಲೂಕು ಸಂಚಾಲಕ ಅಬ್ದುಲ್ ರಜಾಕ್ ಸರಕಾವಸ್,ರೋಣಪ್ಪ ಮಾದರ,ಉಮೇಶ ಕಮಲಶೆಟ್ಟಿ,ಶಿವಪ್ಪ ಹಲಗೇರಿ,
ಸುರೇಶ ಚವ್ಹಾಣ,ಕಾಸಿಂಸಾಬ ರಾಂಪೂರ,ಪರಸಪ್ಪ ಮದಮ್ಮನವರ,ಗದ್ದೆಪ್ಪ ದೊಡ್ಡಮನಿ,ಯಮನಪ್ಪ ಪೂಜಾರ,ನಿಂಗರಾಜ ಕುರಿ ಸೇರಿದಂತೆ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ವೀರಣ್ಣ ಸಂಗಳದ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ