ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ : ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ಯಲ್ಲಾಪುರದಲ್ಲಿ ವಿಶ್ವಜನಸಂಖ್ಯಾ ದಿನಾಚರಣೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಉಪನ್ಯಾಸಕರಾದ ಕವಿತಾ ಹೆಬ್ಬಾರ ರವರು ವಿಶ್ವ ಜನಸಂಖ್ಯಾ ದಿನಾಚರಣೆಯ ಹಿನ್ನೆಲೆ , ಆಚರಣೆಯ ಉದ್ದೇಶ , ಸ್ವರೂಪ, ಮಹತ್ವ ಹಾಗೂ ಜನಸಂಖ್ಯಾ ಸ್ಫೋಟದಿಂದ ಆಗುವ ದುಷ್ಪರಿಣಾಮಗಳು ಮತ್ತು ಜನಸಂಖ್ಯಾ ನಿಯಂತ್ರಣ ಕ್ರಮಗಳ ಕುರಿತು ಮಾತನಾಡುತ್ತಾ ನಿಸರ್ಗದಲ್ಲಿ ದೊರೆಯುವ ವಿವಿಧ ರೀತಿಯ ಸಂಪನ್ಮೂಲಗಳನ್ನು ಮನುಷ್ಯ ಬರಿದಾಗಿಸುತ್ತಿದ್ದಾನೆ. ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಂಪನ್ಮೂಲಗಳ ಕೊರತೆಯನ್ನು ಎದುರಿಸಬೇಕಾಗುತ್ತದೆ. ಅನಿಯಂತ್ರಿತ ಬಯಕೆಯಿಂದಾಗಿ ಮಿತಿಮೀರಿ ಸಂಪನ್ಮೂಲಗಳನ್ನು ಬಳಸುತ್ತಾ ಹೋದರೆ ಮುಂದಿನ ತಲೆಮಾರಿನ ಜನರಿಗೆ ಸಂಪನ್ಮೂಲಗಳ ಕೊರತೆಯಿಂದಾಗಿ ಜೀವನ ನಿರ್ವಹಣೆ ಕಷ್ಟಸಾಧ್ಯವಾಗುತ್ತದೆ. ಈ ಕಾರಣದಿಂದಾಗಿ ವಿದ್ಯಾವಂತರಾದ ನಾವು ಆರ್ಥಿಕವಾಗಿ ಹಾಗೂ ಮಿತಿಯಲ್ಲಿ ಸಂಪನ್ಮೂಲಗಳನ್ನು ಬಳಸಿ, ಮುಂದಿನ ತಲೆಮಾರಿಗೆ ಅವುಗಳನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾದ, ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ರವರು ಮಾತನಾಡುತ್ತಾ ವಿಶ್ವ ಜನಸಂಖ್ಯಾ ದಿನಾಚರಣೆಯ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾನವ ಸಂಪನ್ಮೂಲದ ಮಹತ್ವವನ್ನು ಹಾಗೂ ಹೆಚ್ಚಾದ ಜನಸಂಖ್ಯೆಯಿAದಾಗುವ ದುಷ್ಪರಿಣಾಮಗಳನ್ನು ಅರಿಯಬೇಕಿದೆ ಎಂದರು.
ವಿದ್ಯಾರ್ಥಿ ಕುಮಾರಿ ವಿಭಾ ಹೆಬ್ಬಾರ ವಿಶ್ವ ಜನಸಂಖ್ಯಾ ದಿನಾಚರಣೆಯ ಕುರಿತು ಭಾಷಣ ಮಾಡಿದಳು.
ಶಿಕ್ಷಕರಾದ ಉಷಾ ಭಟ್ಟ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ವನಿತಾ ಭಾಗ್ವತ, ಪ್ರೇಮಾ ಗಾಂವ್ಕರ, ರವೀಂದ್ರ ಶರ್ಮಾ, ಸಚಿನ್ ಭಟ್ ಸೇರಿದಂತೆ ಇತರೆ ಶಿಕ್ಷಕರು ವೃಂದದವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಪಲ್ಲವಿ ಕೋಮಾರ ವಂದಿಸಿದರು.
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ