November 1, 2024

Bhavana Tv

Its Your Channel

ಅಂಕೆಗಳಿಕೆಗಿoತ ಕೌಶಲ್ಯಗಳಿಕೆ ಮುಖ್ಯವಾಗಲಿ-ಕೃಷ್ಣಮೂರ್ತಿ ಭಟ್ಟ

ಹೊನ್ನಾವರ: ಇಂದಿನ ವಿದ್ಯಾರ್ಥಿಗಳು ಅಂಕೆಗಳಿಕೆಗಿoತ ಕೌಶಲ್ಯಗಳಿಕೆಗೆ ಹೆಚ್ಚಿನ ಮಹತ್ವ ನೀಡಬೇಕು ಕೌಶಲ್ಯವಿದ್ದರೆ ಮಾತ್ರ ಜೀವನದಲ್ಲಿ ಮೇಲ್ಮಟ್ಟಕ್ಕೆ ಹೋಗಲು ಸಾಧ್ಯ ಪದವಿಯ ಜೊತೆ ಜೊತೆಗೆ ಕೌಶಲ್ಯಗಳನ್ನು ಕಲಿತುಕೊಂಡರೆ ಸ್ವಾವಲಂಬಿಯಾಗಿ ಬದುಕಬಹುದು ಎಂದು ಎಂ.ಪಿ.ಇ ಸೊಸೈಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ಟ ಅಭಿಪ್ರಾಯಪಟ್ಟರು.

ಅವರು ಹೊನ್ನಾವರ ಎಸ್ ಡಿ ಎಮ್ ಪದವಿ ಮಹಾವಿದ್ಯಾಲಯದಲ್ಲಿ ಕರಿಯರ್ ಗೈಡೆನ್ಸ್ ಸೆಲ್ ಮತ್ತು ಪ್ಲೇಸ್ ಮೆಂಟ್ ಸೆಲ್‌ಗಳು ಹಾಗೂ ದೇಶಪಾಂಡೆ ಸ್ಕೆಲ್ ಡೆವಲ್ ಪಮೆಂಟ್ ಸೆಂಟರ್ ಹುಬ್ಬಳ್ಳಿ ಇವುಗಳ ಸಹಯೋಗದಲ್ಲಿ ಕಾಲೇಜಿನಲ್ಲಿ ನಡೆದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನವನ್ನು ಸದ್ಬಳಿಕೆ ಮಾಡಿಕೊಳಬೇಕು ಮೊಬೈಲ್ ನ ಮೂಲಕ ಅಂಗೈ ನಲ್ಲೇ ಜಗತ್ತನ್ನು ನೋಡಬಹುದು ವಿವಿಧ ಕೋರ್ಸ, ವಿವಿಧ ಮಾಹಿತಿಗಳು ,ವಿವಿಧ ಕೌಶಲ್ಯಗಳನ್ನು ನಾವು ಕುಳಿತಲ್ಲಿಯೇ ಪಡೆಯಬಹುದು ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲ್ ಸೆಂಡರ್ ಜೊತೆ ನಾವು ಕೈ ಜೋಡಿಸುತ್ತಿರುವುದು ಸಂತಸದ ಸಂಗತಿ ಎಂದರು.

ದೇಶಪಾAಡೆ ಸ್ಕಿಲ್ಲಿಂಗ್ ಸೆಂಟರ್ ನ ಉತ್ತರಕನ್ನಡ ಡಿವಿಶನ್ ಮುಖ್ಯಸ್ಥರಾದ ಅಪ್ತಾಬ್ ಮಾತನಾಡಿ ನಾವು ಕರ್ನಾಟಕದ 70 ಕಾಲೇಜುಗಳ ಆಯ್ದು ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ದಿ ತರಬೇತಿಯನ್ನು ಆಯೋಜಿಸುತ್ತಿದ್ದೇವೆ ಹೊನ್ನಾವರದ ಎಂ.ಪಿ.ಇ ಸೊಸೈಟಿಯ ಎಸ್ ಡಿ ಎಮ್ ಕಾಲೇಜು ನಮ್ಮ ಜೊತೆ ಒಪ್ಪಂದ ಮಾಡಿಕೊಂಡಿರುವುದು ಹೆಮ್ಮೆಯ ವಿಚಾರ ಇಲ್ಲಿನ ವಿದ್ಯಾರ್ಥಿಗಳಿಗೆ ನಾವು ತಜ್ಞರಿಂದ ನಿರಂತರ ತರಬೇತಿ ನೀಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಶ್ರೀನಿವಾಸ ನಾಯ್ಕ, ಭಾರತಿ ಎಂ, ಗ್ಯಾರಿ ಫರ್ನಾಂಡೀಸ್ ಕಾಲೇಜಿನ ಪ್ಲೇಸ್ ಮೆಂಟ್ ಆಫೀಸರ ಡಾ ಡಿ.ಎಲ್ ಹೆಬ್ಬಾರ್ ಉಪಸ್ಥಿತರಿದ್ದರು.ಪ್ರಾಚಾರ್ಯರಾದ ಡಾ. ವಿಜಯಲಕ್ಷಿö್ಮÃ ಎಂ ನಾಯ್ಕ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ಕುಮಾರಿ ನಿಹಾರಿಕಾ ಭಟ್ಟ ಪ್ರಾರ್ಥನೆ ಹಾಡಿದರು ಡಾ ಡಿ.ಎಲ್ ಹೆಬ್ಬಾರ್ ಸ್ವಾಗತಿಸಿದರು ಪ್ರಶಾಂತ ಹೆಗಡೆ ವಂದಿಸಿದರು ವಿದ್ಯಾಧರ ಕಡತೋಕಾ ನಿರೂಪಿಸಿದರು

error: