
ಭಟ್ಕಳ:- ಭಟ್ಕಳ ಇಲ್ಲಿನ ಜ್ಞಾನೇಶ್ವರಿ ಮಹಿಳಾ ಮಂಡಳಿಯಿoದ ಕೃಷ್ಣಜನ್ಮಾಷ್ಟಮಿಯ ಅಂಗವಾಗಿ ಕೃಷ್ಣ ರಾಧೆ ಮತ್ತು ಕೃಷ್ಣ ಯಶೋಧಾ ಸ್ಪರ್ಧೆಯು ಇಲ್ಲಿನ ಸೊನಾರಕೇರಿಯ ದೈವಜ್ಞ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೈವಜ್ಞ ಸಮಾಜದ ಅಧ್ಯಕ್ಷರಾದ ಸುಧಾಕರ ಪಾಂಡುರAಗ ಶೇಟ್, ಜ್ಞಾನೇಶ್ವರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಪರಿಮಳ ರಾಜಶೇಖರ ಶೇಟ್, ಪ್ರೇಮಾ ಮಾರುತಿ ಶೇಟ್,ಶಕುಂತಲಾ ರಾಮದಾಸ ಶೇಟ್ ರವರು ದೀಪ ಬೆಳಗುವ ಮೂಲಕ ಚಾಲನೆಯನ್ನು ನೀಡಿದರು.
ಸ್ಪರ್ಧೆಯು ಕಿರಿಯರ ಮತ್ತು ಹಿರಿಯರ ವಿಭಾಗದಲ್ಲಿ ಪ್ರತ್ಯೇಕವಾಗಿ ನಡೆಸಲಾಗಿತ್ತು.
ಕಿರಿಯರ ವಿಭಾಗದಲ್ಲಿ ಗಾನ್ವಿಕಾ ವಿನಾಯಕ ಶೇಟ್ ಪ್ರಥಮ, ದ್ರುವನ್ ಗುರು ಮಾನಕಾಮೆ ದ್ವಿತೀಯ ಹಾಗೂ ಭಾರ್ಗವ ಸತೀಶ ರಾಯ್ಕರ್, ತ್ರತೀಯ ಬಹುಮಾನ ಪಡೆದುಕೊಂಡರು.
ಹಿರಿಯರ ವಿಭಾಗದಲ್ಲಿ ಸಮರ್ಥ ಉದಯ ಮಾನಕಾಮೆ ಪ್ರಥಮ, ಆದಿಶೇಷ ಗುರು ಶೇಟ್, ದ್ವಿತೀಯ ಹಾಗೂ ಶ್ರೀಲಕ್ಷ್ಮೀ ರಾಘವೇಂದ್ರ ಶೇಟ್ ತೃತೀಯ ಬಹುಮಾನವನ್ನು ಪಡೆದುಕೊಂಡರು.
ಯಶೋಧಾ- ಕೃಷ್ಣ ಸ್ಪರ್ಧೆಯಲ್ಲಿ ತಾಯಿ ಮತ್ತು ಮಗು ಭಾಗವಹಿಸಲು ಅವಕಾಶ ಕಲ್ಪಸಲಾಗಿತ್ತು. ಈ ಸ್ಪರ್ಧೆಯಲ್ಲಿ ಮಮತಾ ಸತೀಶ ರಾಯ್ಕರ್ ಮತ್ತು ಭಾರ್ಗವ ಸತೀಶ ರಾಯ್ಕರ ಪ್ರಥಮ, ಸುಷ್ಮಾ ವಿನಾಯಕ ಶೇಟ್ ಮತ್ತು ಗಾನ್ವಿಕಾ ವಿನಾಯಕ ಶೇಟ್ ದ್ಚಿತೀಯ ಹಾಗೂ ಪುಷ್ಪಾಂಜಲಿ ವೆಂಕಟೇಶ ಶೇಟ್ ಹಾಗೂ ಸಾನ್ವಿ ವೆಂಕಟೇಶ ಶೇಟ್, ತೃತೀಯ ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಗಂಗಾಧರ ನಾಯ್ಕ, ಶ್ರೀಧರ ಜಂಬರಮಠ, ಸಹನಾ ನಾಯ್ಕ ನಿರ್ಣಾಯಕರಾಗಿ ಭಾಗವಹಿಸಿದ್ದರು. ಸೌಮ್ಯ ದಿನೇಶ ಶೇಟ್ ಪ್ರಾರ್ಥಿಸಿದರೆ ಸವಿತಾ ಪ್ರಕಾಶ ರಾಯ್ಕರ ಸ್ವಾಗತಿಸಿದರು. ಪ್ರಜ್ವಲ ಪ್ರಕಾಶ ರಾಯ್ಕರ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿಯ ಸದಸ್ಯರು, ದೈವಜ್ಞ ಯುವಕ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ