March 18, 2025

Bhavana Tv

Its Your Channel

ಭಾರತೀಯ ಜನತಾ ಪಕ್ಷ ಭಟ್ಕಳ ಮಂಡಲ ವತಿಯಿಂದ ಗೋವಿಂದ ನಾಯ್ಕ ರವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ

ಭಟ್ಕಳ: ಭಾರತೀಯ ಜನತಾ ಪಕ್ಷ ಭಟ್ಕಳ ಮಂಡಲ ವತಿಯಿಂದ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯ ಅಧ್ಯಕ್ಷ ಗೋವಿಂದ ನಾಯ್ಕ ಅವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವು ಮಂಗಳವಾರದAದು ಭಟ್ಕಳ ಆಸರಕೇರಿ ನಿಚ್ಚಲಮಕ್ಕಿ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಶಾಸಕ ಸುನೀಲ ನಾಯ್ಕ ಉದ್ಘಾಟಿಸಿದರು. ಭಟ್ಕಳ ಮಂಡಲ ವತಿಯಿಂದ ಗೋವಿಂದ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಭಟ್ಕಳ ಮಂಡಲದ ಅಧ್ಯಕ್ಷ ಸುಬ್ರಾಯ ದೇವಾಡಿಗ ಅವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಪಕ್ಷ ಇಂದು ತಡವಾಗಿಯಾಗಿಯಾದರೂ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಗೋವಿಂದ ನಾಯ್ಕ ಅವರಿಗೆ ನಿಗಮ ಮಂಡಳಿ ಹುದ್ದೆಯನ್ನು ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಶಾಸಕ ಸುನೀಲ ನಾಯ್ಕ ಮಾತನಾಡಿ ‘ ‘ ಗೋವಿಂದ ನಾಯ್ಕ ಎಂಬುದು ವ್ಯಕ್ತಿಯಲ್ಲ ಅವರು ವ್ಯಕ್ತಿತ್ವಕ್ಕೂ ಮೀರಿದ ಭಟ್ಕಳದ ಹಿಂದುತ್ವದ ಶಕ್ತಿಯಾಗಿದ್ದಾರೆ. ಸುಮಾರು ೨೭ ವರ್ಷದಿಂದ ಭಟ್ಕಳದಲ್ಲಿನ ಹಿಂದುಗಳಿಗೆ ಆದ ಸಮಸ್ಯೆ, ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುವ ಅದ್ಬುತ ವ್ಯಕ್ತಿ ಗೋವಿಂದ ನಾಯ್ಕ ಅವರದ್ದಾಗಿದೆ. ಭಟ್ಕಳ ಬಿಜೆಪಿಯ ಸುಧಿನವಾಗಿದ್ದು, ನಮ್ಮಂತಹ ಸೂಕ್ಷ್ಮ ತಾಲೂಕಿನಲ್ಲಿ ಹಿಂದುತ್ವದ ಶಕ್ತಿಯಾಗಿ ಗೋವಿಂದ ನಾಯ್ಕ ಅವರು ಬೆಳೆದು ನಿಂತ ಪರಿಣಾಮ ಭಟ್ಕಳ ರಾಜ್ಯ ಮಟ್ಟದಲ್ಲಿ ಹೆಸರು ಪಡೆಯುವಂತಾಗಿದೆ. ಪಕ್ಷದ ಸಂಘಟನೆಯನ್ನು ಮಾಡುತ್ತಾ ಹೋರಾಟವನ್ನು ಮುಂದುವರೆಸುತ್ತಾ ಬಂದ ಇವರನ್ನು ಪಕ್ಷದ ಗುರುತಿಸಿರುವುದು ಸಂತಸವಾಗಿದೆ ಹಾಗೂ ಸ್ವಲ್ಪ ತಡವಾದರು ಸಹ ಉತ್ತಮ ಸ್ಥಾನವನ್ನು ನೀಡಿದೆ. ೧೯೯೩ರ ಬಳಿಕ ನೆಮ್ಮದಿಯಾಗಿ ನಾವೆಲ್ಲರು ಇರಲು ಕಾರಣ ಅಂದಿನ ಗೋವಿಂದ ನಾಯ್ಕರ ಹೋರಾಟದ ಕಿಚ್ಚು ಎಂದ ಅವರು ಭಟ್ಕಳದ ಹಿಂದುಗಳ ವಿಚಾರದಲ್ಲಿ ಪುರಸಭೆಯ ಉರ್ದು ನಾಮಫಲಕ ಸರಕಾರದಿಂದ ಎರಡೇ ದಿನದಲ್ಲಿ ತೆರವು ಮಾಡಿಸಲಾಗಿದೆ. ಮೀನು ಮಾರುಕಟ್ಟೆಯಲ್ಲಿನ ಮೀನು ವ್ಯಾಪಾರಿಗಳಿಗೆ ಹಳೆ ಮೀನು ಮಾರುಕಟ್ಟೆಯಿಂದ ಸ್ಥಳಾಂತರವನ್ನು ಸರಕಾರದ ಮಟ್ಟದಿಂದ ನಿಲ್ಲಿಸಿದ್ದೇವೆ. ೨೦೦೮ ರಿಂದ ೨೦೧೮ ರ ತನಕ ಬಿಜೆಪಿ ಅಧಿಕಾರದಲ್ಲಿ ಇರದಿದ್ದ ವೇಳೆ ೪ ಸಾವಿರಕ್ಕೂ ಅಧಿಕ ಹಿಂದು ಕಾರ್ಯಕರ್ತರ ಮೇಲೆ ಪ್ರಕರಣ ಆಗಿವೆ. ಆದರೆ ಅದೇ ಈಗ ನಮ್ಮ ಸರಕಾರ ಬಂದ ಮೇಲೆ ಕೇವಲ ೩೦೦ ಪ್ರಕರಣ ದಾಖಲಾಗಿದೆ. ನಮ್ಮ ಸರಕಾರ ಹಿಂದೂಗಳ ಪರವಾಗಿದೆ. ಸದ್ಯಕ್ಕೆ ಭಟ್ಕಳದಲ್ಲಿ ಮೂರಿನಕಟ್ಟೆ ವಿಚಾರವೊಂದು ಬಾಕಿ ಇದ್ದು, ಅದನ್ನು ಸಹ ಅತೀ ಶೀಘ್ರವಾಗಿ ಸರಕಾರದ ಮಟ್ಟದಿಂದ ಬಗೆಹರಿಸಲಿದ್ದೇನೆ. ನಮ್ಮಲ್ಲಿನ ಒಳಜಗಳ ಮರೆತು ಒಗ್ಗಟ್ಟಾಗಿ ನಿಂತು ಪಕ್ಷದ ಕೆಲಸ ಮಾಡಬೇಕಿದೆ. ಕುಟುಂಬ ಎಂದ ಮೇಲೆ ನೂನ್ಯತೆಗಳಿರಲಿವೆ ಅವೆಲ್ಲವನ್ನು ಮರೆತು ನಾವಾಗಿಯೇ ಕುಳಿತು ಬಗೆಹರಿಸಿಕೊಳ್ಳಬೇಕು ಎಂದರು.

ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ನಾಗರಾಜ ನಾಯಕ ಮಾತನಾಡಿ ‘ರಾಜ್ಯದಲ್ಲಿ ಹಿಂದುತ್ವದ ಹೋರಾಟಕ್ಕೆ ಭಟ್ಕಳ ರಾಜಧಾನಿ ಹಾಗೂ ಉತ್ತಮ ಮಾದರಿಯಾಗಬೇಕಾಗಿದೆ. ನಮ್ಮ ಹಿಂದು ಸಮಾಜದಲ್ಲಿ ಜಾತಿ ವೈಷಮ್ಯವನ್ನು ಮರೆತು ಎಲ್ಲರು ಒಟ್ಟಾಗಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ ‘ ಗೋವಿಂದ ನಾಯ್ಕ ಓರ್ವ ಅಪ್ರತಿಮ ಹೋರಾಟಗಾರರಾಗಿದ್ದು ಹಿಂದೂ ಧರ್ಮದ ಎಲ್ಲಾ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ ವ್ಯಕ್ತಿಯಾಗಿದ್ದು ಅವರಿಗೆ ಹುದ್ದೆ ದೊರೆತಿರುವುದು ಜಿಲ್ಲೆಯ ಜನತೆಗೆ ಹೆಮ್ಮೆಯಾಗಿದೆ. ಗೋವಿಂದ ನಾಯ್ಕ ಅವರ ಶ್ರಮಕ್ಕೆ ಈ ಮೊದಲೇ ಉತ್ತಮ ಹುದ್ದೆ ದೊರೆಯಬೇಕಾಗಿದ್ದರೂ ಸಹ ಈಗಲಾದರೂ ಅರ್ಹ ವ್ಯಕ್ತಿಗೆ ಉತ್ತಮ ಹುದ್ದೆ ದೊರೆತಿದೆ ಎನ್ನುವ ಸಮಾಧಾನ ನಮ್ಮದು ಎಂದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಗೋವಿಂದ ನಾಯ್ಕ ‘ತನ್ನ ಹೋರಾಟಕ್ಕೆ ಬೆಂಬಲ ಕೊಟ್ಟ ಸಮಸ್ತ ಹಿಂದೂ ಸಮಾಜಕ್ಕೆ ನಾನು ಚಿರರುಣಿಯಾಗಿದ್ದೇನೆ. ಸಿಕ್ಕ ಹುದ್ದೆಗೆ ಹಾಗೂ ಪಕ್ಷಕ್ಕೆ ಕಾರ್ಯಕರ್ತರಿಗೆ ಅಗೌರವವಾಗದಂತೆ ಜವಾಬ್ದಾರಿಯುತವಾಗಿ ಕೆಲಸ ಮಾಡಲಿದ್ದೇನೆ ಹಾಗೂ ಸಮಸ್ತ ಹಿಂದೂ ಸಮಾಜ ನನ್ನ ಜೊತೆಗಿರುವುದರಿಂದ, ಸಾವಿರಾರು ಕಾರ್ಯಕರ್ತರು ನನ್ನೊಂದಿಗೆ ಕೈ ಜೋಡಿಸಿದ್ದರಿಂದ ಕಾರ್ಯ ಮಾಡಲು ಸಾಧ್ಯವಾಯಿತು. ಭಟ್ಕಳದ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ವೇಳೆ ಎಲ್ಲಾ ಸಮಾಜದ ಜನರು ನನಗೆ ಮ್ರಷ್ಟಾಂನ್ನ ಭೋಜನವನ್ನು ಕಳುಹಿಸಿಕೊಟ್ಟಿದ್ದನ್ನು ಮೆಲಕು ಹಾಕಿ ಎಲ್ಲಾ ಸಮಾಜಕ್ಕೆ ಸಾಷ್ಟಾಂಗ ನಮಸ್ಕಾರ ಸಲ್ಲಿಸಿದ ಅವರು ನನ್ನ ಹೋರಾಟದ ಜೊತೆಗೆ ಕೃಷ್ಣ ನಾಯ್ಕ ಆಸರಕೇರಿ ಹಾಗೂ ದಿನೇಶ ನಾಯ್ಕ ಅವರ ಸಹಕಾರವನ್ನು ನೆನಪಿಸಿಕೊಂಡರು.

ನ್ಯಾಯವಾದಿ ಧನ್ಯಕುಮಾರ ಜೈನ್, ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ ಮಾತನಾಡಿದರು.

ಪ್ರಾರ್ಥನೆ ಹಾಗೂ ವಂದೇ ಮಾತರಂ ಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶಿಕ್ಷಕರಾದ ನಾರಾಯಣ ನಾಯ್ಕ ಹಾಗೂ ಗಂಗಾಧರ ನಾಯ್ಕ ಅವರು ಕಾರ್ಯಕ್ರಮವನ್ನು ನಿರ್ವಹಿಸಿ, ವಂದಿಸಿದರು.

ವೇದಿಕೆಯಲ್ಲಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ, ಕುಮಟಾ ಮಂಡಳದ ಅಧ್ಯಕ್ಷ ಹೇಮಂತ ಗಾಂವಕರ್, ಪ್ರಮುಖರಾದ ರಾಜೇಶ ನಾಯ್ಕ, ವಿವಿಧ ಸಮಾಜದ ಪ್ರಮುಖರು ಮುಖಂಡರು ಮುಂತಾದವರು ಉಪಸ್ಥಿತರಿದ್ದರು.

error: