March 19, 2025

Bhavana Tv

Its Your Channel

ವಾಕೊ ಇಂಡಿಯಾ ನ್ಯಾಷನಲ್ ಸೀನಿಯರ್ಸ್ ಎಂಡ್ ಮಾಸ್ಟರ್ಸ್ ಕಿಕ್ ಬಾಕ್ಸಿಂಗ್ ನಲ್ಲಿ ನಾಗಶ್ರೀ ನಾಯ್ಕ ಮತ್ತು ಮಂಜುನಾಥ ದೇವಾಡಿಗ ಬೆಳ್ಳಿ ಪದಕ

ಭಟ್ಕಳ: ಚೆನ್ನೈನ ಜವಾಹರಲಾಲ್ ನೆಹರೂ ಇಂಡೋರ್ ಸ್ಟೇಡಿಯಂನಲ್ಲಿ ಅ.18ರಿಂದ ಅ.22ರವರೆಗೆ ವಾಕೊ ಇಂಡಿಯಾ ನ್ಯಾಷನಲ್ ಸೀನಿಯರ್ಸ್ ಎಂಡ್ ಮಾಸ್ಟರ್ಸ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್-ಭಟ್ಕಳ ವಿದ್ಯಾರ್ಥಿಗಳು ಬೆಳ್ಳಿಯ ಪದಕ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾರೆ.

ಕರ್ನಾಟಕ ರಾಜ್ಯ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ನಿಂದ ಪ್ರತಿನಿಧಿಸಿದ  ನಾಗಶ್ರೀ ನಾಯ್ಕ ಪಾಯಿಂಟ್ ಫೈಟ್ ವಿಭಾಗದಲ್ಲಿ ಬೆಳ್ಳಿಯ ಪದಕ ಮತ್ತು ಲೈಟ್ ಕಾಂಟಾಕ್ಟ್ ವಿಭಾಗದಲ್ಲಿ ಬೆಳ್ಳಿಯ ಪದಕವನ್ನುಗಳಿಸಿದ್ದಾರೆ.  ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜ್ ನ ದ್ವಿತೀಯ ವರ್ಷದ ಬಿ.ಕಾಂ. ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ. ಮಂಜುನಾಥ ದೇವಾಡಿಗ ಪಾಯಿಂಟ್ ಫೈಟ್ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಗಳಿಸಿದ್ದಾರೆ.   
error: