December 21, 2024

Bhavana Tv

Its Your Channel

ನೂತನ ಸೇವಾ ಪತ್ತಿನ ಸಹಕಾರ ಸಂಘ ಉದ್ಘಾಟನೆ

ಬಾಗಲಕೋಟೆ ಜಿಲ್ಲೆ ಕಮತಗಿ ಪಟ್ಟಣದಲ್ಲಿ ನೂತನವಾಗಿ ಸಹಕಾರ ರಂಗದಲ್ಲಿ ಪಾದಾರ್ಪಣೆ ಮಾಡುತ್ತಿರುವ ಸೇವಾ ಪತ್ತಿನ ಸಹಕಾರ ಸಂಘವನ್ನು ಕಮತಗಿ ಕೋಟೆಕಲ್ ಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳು ಉದ್ಘಾಟಿಸಿದರು.
ದಿವ್ಯ ಸಾನಿಧ್ಯವನ್ನು ಹಿರೇಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾತೋಶ್ರೀ ಬಸವಣ್ಣೆಮ್ಮ ತಾಯಿ ಬಸಕೋಡ, ಮಾಜಿ ಜಿಲ್ಲಾ ಪಂಚಾಯತ್ ಸಭೆ ಅಧ್ಯಕ್ಷರಾದ ಬಸವಂತಪ್ಪ ಮೇಟಿ, ಪಟ್ಟಣದ ಖ್ಯಾತ ವೈದ್ಯರಾದ ಡಾ. ಆರ್.ಟಿ. ದೇಶಪಾಂಡೆ, ಡಾ. ಹುಚ್ಚೇಶ ಕಲ್ಯಾಣಮಠ, ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸಿದ್ದು ಹೊಸಮನಿ ಸೇರಿದಂತೆ ಎಲ್ಲಾ ನಿರ್ದೇಶಕ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ವರದಿ ನಿಂಗಪ್ಪ ಕಡ್ಲಿಮಟ್ಟಿ

error: