December 21, 2024

Bhavana Tv

Its Your Channel

ಬಾಲಕಿಯ ಪ್ರತಿಭೆಗೆ ಒಲಿದು ಬಂದ ವಿಶ್ವ ದಾಖಲೆ ಭಾಗ್ಯ. ಯು.ಕೆ.ಯ ಬ್ರಿಟೀಷ್ ವಿಶ್ವದಾಖಲೆ ಸಾಧಿಸಿದ ಬಾಲಕಿ ಅಮೋಘ ವರ್ಷಿಣಿ

ಬಾಗಲಕೋಟೆ:-  ಬಾಲಕಿ ಅಮೋಘವರ್ಷಿಣಿ ಜೆ. ತನ್ನ ಅಭೂತಪೂರ್ವ ಪ್ರತಿಭೆಯಿಂದ ವಿಶ್ವದಾಖಲೆ ಸಾಧಿಸಿದ್ದಾಳೆ. ಭಾರತದ ಸಂವಿಧಾನದ ಪ್ರಸ್ತಾವನೆ, 11 ಮೂಲಭೂತ ಕರ್ತವ್ಯಗಳು, 21 ಉಪವಿಧಿಗಳು ಹಾಗೂ 232 ಅನುಚ್ಛೇದಗಳನ್ನು ಇಂಗ್ಲೀಷ್ ಭಾಷೆಯಲ್ಲಿ 25 ನಿಮಿಷಗಳಲ್ಲಿ  ಕಂಠಪಾಠ ಹೇಳಿದ 12.6 ವರ್ಷ ವಯಸ್ಸಿನ ಅಮೋಘವರ್ಷಿಣಿ ಜೆ. ಸಾಧನೆ ದಿನಾಂಕ 06.7.2022 ರಂದು ಲಂಡನ್, ಯು.ಕೆ. ಯ 'ದಿ ಬ್ರಿಟೀಷ್ ವರ್ಲ್ಡ್ ರೆಕಾರ್ಡ್ಸ್' ಇದರಲ್ಲಿ ಭಾರತೀಯ ಸಂವಿಧಾನದ ಅತೀ ಹೆಚ್ಚು ಅನುಚ್ಛೇದಗಳನ್ನು ಕಂಠಪಾಠ ಹೇಳಿದ ಅತೀ ಸಣ್ಣ ವಯಸ್ಸಿನವಳು (Youngest to Recite most number of Articles of Indian Constitution")  ಎಂಬುದಾಗಿ ವಿಶ್ವದಾಖಲೆ ಆಗಿದೆ. ಇವಳ ಸಾಧನೆಯನ್ನು ವಿಶ್ವದಾಖಲೆಗೆ ಸೇರ್ಪಡೆಗೊಳಿಸಿ ದಿ ಬ್ರಿಟೀಷ್ ವರ್ಲ್ಡ್ ರೆಕಾರ್ಡ್ಸ್ ವತಿಯಿಂದ ಈಕೆಗೆ ಪ್ರಮಾಣಪತ್ರ, ಪದಕ, ಫ್ಲಯರ್ ಹಾಗೂ ಟ್ರೋಫಿ ನೀಡಿ ಗೌರವಿಸಿದ್ದಾರೆ.

ಮೂಲತಃ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಆಲೂರು ಗ್ರಾಮದ ಡಾ.ಜೈಪ್ರಕಾಶ ಹಾಗೂ ಡಾ. ಗಾಯತ್ರಿ ದಂಪತಿಗಳು ಪ್ರಸಕ್ತ ಬಾಗಲಕೋಟೆ ಜಿಲ್ಲೆ, ಜಮಖಂಡಿಯ ಮೈಗೂರು ಕಾಲೋನಿ ನಿವಾಸಿಗಳಾಗಿದ್ದು; ಪುತ್ರಿ ಅಮೋಘವರ್ಷಿಣಿ ಜೆ. ಬಿ.ಎಲ್. ಡಿ. ಇ. ಶಿಕ್ಷಣ ಸಂಸ್ಥೆಯ ಪಬ್ಲಿಕ್ ಸ್ಕೂಲ್, ಜಮಖಂಡಿ (BLDEA’ Public School) ಇಲ್ಲಿ 8ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದಾಳೆ.

ಸಣ್ಣ ವಯಸ್ಸಿನಿಂದಲೇ ಅತ್ಯಂತ ಪ್ರತಿಭಾನ್ವಿತೆಯಾದ ಈಕೆ ಕಲಿಕೆ, ಕ್ರೀಡೆ, ಭಾಷಣ, ಚಿತ್ರಕಲೆ ಈ ಕ್ಷೇತ್ರಗಳಲ್ಲಿ ಕೂಡಾ ಸಾಧನೆಗೈದು ಹಲವಾರು ಬಹುಮಾನಗಳನ್ನು ಗೆದ್ದಿದ್ದಾಳೆ. ಪ್ರಮುಖ ದಿನಾಚರಣೆಗಳಂದು ವಿವಿಧ ವಿಷಯಗಳಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಭಾಷಣ ಮಾಡುವ ಹವ್ಯಾಸವನ್ನು ಸಣ್ಣ ವಯಸ್ಸಿನಿಂದಲೇ ರೂಢಿಸಿಕೊಂಡಿದ್ದು ಇವಳ ಈ ವಿಶ್ವಸಾಧನೆಗೆ ಬಹಳ ಪೂರಕವಾಗಿದೆ.
ಇವಳ ತಮ್ಮ ಮೌರ್ಯವರ್ಧನ ಜೆ. (3.2ವ) ಕೂಡಾ ತನ್ನ 1.9 ವರ್ಷಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, 2 ವರ್ಷಕ್ಕೆ ಮತ್ತೊಮ್ಮೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಇವುಗಳಲ್ಲಿ ಮೂರು ದಾಖಲೆ ನಿರ್ಮಿಸುವುದರ ಮೂಲಕ ಸಾಧನೆ ಮಾಡಿದ್ದಾನೆ.
ಡಾ. ಜೈಪ್ರಕಾಶ ಇವರು ಜಮಖಂಡಿಯ ಹುನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಕಾರ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಗಾಯತ್ರಿ ಇವರು ತನ್ನ ಇಬ್ಬರು ಮಕ್ಕಳ ಪ್ರತಿಭೆಗೆ ಪೂರಕವಾದ ತಯಾರಿ, ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿ ಸಾಧನೆಯೆಡೆಗೆ ನಡೆಸುವುದರ ಜೊತೆಗೆ ಸಂಶೋಧನೆ, ಬರಹ ಹಾಗೂ ಉಪನ್ಯಾಸಗಳಲ್ಲಿ ತೊಡಗಿಕೊಂಡಿದ್ದಾರೆ.

error: