ಭಟ್ಕಳ: ಚಲಿಸುತ್ತಿದ್ದ ಮೋಟಾರ್ ಬೈಕ್ ವೊಂದು ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಢಿಕ್ಕಿ ಹೊಡೆದು ಮುಗುಚಿ ಬಿದ್ದ ಪರಿಣಾಮವಾಗಿ ಹಿಂಬದಿಯ ಸವಾರ ಕುಸಿದು ಬಿದ್ದ ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ಪೈ ಇಲೆಕ್ಟಿಕಲ್ಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯ ಮೇಲೆ ನಡೆದಿದೆ.
ಮೃತ ಬಾಲಕನನ್ನು ತಾಲೂಕಿನ ಬಂದ ರೋಡ್ 5ನೇ ಕ್ರಾಸ್ ಅಬ್ದುಲ್ಲಾ ಫೈಜ್ ಆಫ್ರಿಕಾ ಎಂದು ಗುರುತಿಸಲಾಗಿದೆ. ಈತ ಶಿರಾಲಿಯ ಕಡೆಯಿಂದ ಭಟ್ಕಳ ಪಟ್ಟಣದೆಡೆಗೆ ಪ್ರಯಾಣಿಸುತ್ತಿದ್ದ ಎಂದು ತಿಳಿದು ಬಂದಿದೆ. ಅಪಘಾತ ಸ್ಥಳದಲ್ಲಿ ಕುಸಿದು ಬಿದ್ದಿದ್ದ ಬಾಲಕನನ್ನು ಜಾಲಿ ಕ್ರಾಸ್ ಲೈಫ್ ಕೇರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರ ಒಳಗೆ ಬಾಲಕನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಎಸ್ಐ ಹನುಮಂತ ಕುಡಗುಂಟಿ ಸಿಬ್ಬಂದಿಗಳೊಡನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.